ಮಂಗಳವಾರ, ಅಕ್ಟೋಬರ್ 22, 2019
25 °C

‘ಏಕ್‌ ವಿಲನ್‌ 2’ನಲ್ಲಿ ಜಾನ್‌

Published:
Updated:
Prajavani

ರಿತೇಶ್ ದೇಶ್‌ಮುಖ್‌, ಸಿದ್ದಾರ್ಥ್ ಮಲ್ಹೋತ್ರ,  ಶ್ರದ್ಧಾ ಕಪೂರ್‌ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ‘ಏಕ್‌ ವಿಲನ್‌’ ಸಿನಿಮಾದ ಎರಡನೇ ಅವತರಣಿಕೆ ಬಾಲಿವುಡ್‌ನಲ್ಲಿ ಸೆಟ್ಟೇರಲು ಸಜ್ಜಾಗಿದೆ.

2014ರಲ್ಲಿ ಈ ಸಿನಿಮಾ ಬಿಡುಗಡೆಗೊಂಡು ಯಶಸ್ವಿಯಾಗಿತ್ತು. ‘ಬಾಟ್ಲಾ ಹೌಸ್‌’ ಸಿನಿಮಾದಲ್ಲಿ ಬ್ಯುಸಿಯಾಗಿದ್ದ ಸಂದರ್ಭದಲ್ಲಿಯೇ ನಟ ಜಾನ್‌ ಅಬ್ರಹಾಂಗೆ ‘ಏಕ್‌ ವಿಲನ್‌2’ ಆಫರ್ ಬಂದಿತ್ತು. ಆದರೆ ಅವರು ಸ್ವಲ್ಪ ಸಮಯ ಕೇಳಿದ್ದರು. ಈಗ ನಿರ್ಮಾಪಕ ಮೋಹಿತ್ ಸೂರಿಗೆ ಜಾನ್‌ ಅಬ್ರಹಾಂ ಒಪ್ಪಿಗೆ ಸೂಚಿಸಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಹರಿದಾಡುತ್ತಿದೆ. ಸ್ಟ್ರಿಪ್ಟ್ ಓದಿರುವ ಜಾನ್ ಅಬ್ರಹಾಂ ಖುಷಿ ವ್ಯಕ್ತಪಡಿಸಿದ್ದಾರಂತೆ. ನಾಯಕಿಯ ಆಯ್ಕೆಗಾಗಿ ಸಿನಿ ತಂಡ ಪ್ರಯತ್ನಿಸುತ್ತಿದೆ.

ಈ ವರ್ಷ ಜಾನ್‌ ಅಬ್ರಹಾಂ ಇನ್ನೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ಮುಂಬೈ ಸಾಗಾ’ದಲ್ಲಿ ಅವರು ಗ್ಯಾಂಗ್‌ಸ್ಟರ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಮ್ರಾನ್‌ ಹಶ್ಮಿ ಕೂಡ ನಟಿಸಲಿದ್ದಾರೆ. ಜಾಕಿ ಶ್ರಾಫ್‌, ಸುನಿಲ್ ಶೆಟ್ಟಿ, ಅಮೋಲ್‌, ಗುಲ್ಶನ್‌ ಗ್ರೋವರ್‌, ಸಮೀರ್ ಸೋನಿ, ರೋಹಿತ್ ರಾಯ್‌ ಕೂಡ ಅಭಿನಯಿಸಲಿದ್ದಾರೆ. ಸಂಜಯ್‌ ಗುಪ್ತಾ ನಿರ್ದೇಶಿಸಲಿದ್ದಾರೆ. ಮುಂದಿನ ವರ್ಷ ಜೂನ್‌ 19ಕ್ಕೆ ಈ ಸಿನಿಮಾ ಬಿಡುಗಡೆಯಾಗಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)