ಶನಿವಾರ, ಡಿಸೆಂಬರ್ 14, 2019
22 °C

ಸುಷ್ಮಿತಾ ಸೇನ್‌ ಭಾವುಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಟಿ ಸುಷ್ಮಿತಾ ಸೇನ್‌ ರೀನಿ ಮತ್ತು ಅಲಿಶಾ ಎಂಬ ಹೆಣ್ಣು ಮಕ್ಕಳನ್ನು ದತ್ತು ಪಡೆದಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಹತ್ತು ವರ್ಷದ ಅಲಿಶಾ ತನ್ನ ತಾಯಿಗೆ ಕಣ್ಣೀರು ತರಿಸಿದ್ದಾಳೆ. ಇದನ್ನು ಸ್ವತಃ ಸುಷ್ಮಿತಾ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಹಾಗಾದರೆ ಸುಷ್ಮಿತಾ ಕಣ್ಣೀರು ಸುರಿಸಿದ್ದು ಏಕೆ?

ತಾಯಿ ಕುರಿತು ಅಲಿಶಾ ‘ಅಮ್ಮಾ ನಮ್ಮನ್ನು ದತ್ತು ಪಡೆಯುವ ಮೂಲಕ ನೀನು ಎರಡು ಮಕ್ಕಳಿಗೆ ಜನ್ಮ ನೀಡಿರುವೆ’ ಎಂದು ಬರೆದಿದ್ದಾಳೆ.

ಅವಳು ಬರೆದ ಸಾಲು ಕೇಳುವಾಗ ದುಃಖ ಉಮ್ಮಳಿಸಿ ಬಂತು ಎಂದು ಸುಷ್ಮಿತಾ ಬರೆದುಕೊಂಡಿದ್ದಾರೆ. ‘ಮುದ್ದು ಮಗಳೇ...ನೀನು ನನ್ನ ಕರುಳ ಕುಡಿಯಲ್ಲ. ನನ್ನ ಹೊಟ್ಟೆಯಿಂದ ಹುಟ್ಟಲಿಲ್ಲ ನಿಜ. ಆದರೆ, ನೀನು ನನ್ನ ಹೃದಯದಿಂದ ಜನಿಸಿರುವೆ’ ಎಂದು ಮಗಳಿಗೆ ತಮ್ಮ ಪ್ರೀತಿಯನ್ನು ಧಾರೆ ಎರೆದಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು