ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆಯ ನೋಟದ ‘ಎಂಗೇಜ್‌ಮೆಂಟ್‌’

Last Updated 23 ಅಕ್ಟೋಬರ್ 2022, 7:36 IST
ಅಕ್ಷರ ಗಾತ್ರ

ಹೊಸ ಯುಗದ ಪ್ರೇಮಕಥೆ ‘ಎಂಗೇಜ್‌ಮೆಂಟ್’ ರಾಜು ಬೋನಗಾನಿ ನಿರ್ದೇಶನದಲ್ಲಿ ಸೆಟ್ಟೇರಿದೆ. ಸದ್ಯ ಚಿತ್ರಕಥೆ ಮತ್ತು ಪ್ರಿ ಪ್ರೊಡಕ್ಷನ್‌ ಕೆಲಸಗಳು ನಡೆಯುತ್ತಿವೆ.

‘ಬೊಗಾನಿ ಎಂಟರ್‌ಟೈನ್‌ಮೆಂಟ್ಸ್’ ಬ್ಯಾನರ್ ಅಡಿಯಲ್ಲಿ ಈ ಚಿತ್ರವು ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಮುಂದೆ ಸಂಗೀತ ಸಂಬಂಧಿ ಕೆಲಸಗಳು ನಡೆಯಲಿವೆಯಂತೆ. ದಿಲೀಪ್‌ ಭಂಡಾರಿ ಅವರ ಸಂಗೀತವಿದೆ. ಈಗ ಹೊಸ ಪಾತ್ರಗಳಿಗೆ ಆಡಿಷನ್‌ ನಡೆಯುತ್ತಿದೆ. ಈ ಚಿತ್ರಕ್ಕೆ ಮನ್ನಂ ವೆಂಕಟ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ನಿರ್ದೇಶಕ ರಾಜು ಬೋನಗಾನಿಪ್ರಕಾರ, ‘ಎಂಗೇಜ್‌ಮೆಂಟ್’ ಒಂದು ಒಳ್ಳೆಯ ಅನುಭವಾತ್ಮಕ ಮನರಂಜನಾತ್ಮಕ ಚಿತ್ರ. ಅದು ಮದುವೆಯ ನೋಟದಿಂದ ಶುರುವಾಗುತ್ತದೆ... ಮತ್ತು ‘ಎಂಗೇಜ್‌ಮೆಂಟ್’ ಎಂಬ ಶುಭಂ ಕಾರ್ಡ್‌ನೊಂದಿಗೆ ಕೊನೆಗೊಳ್ಳುತ್ತದೆ. ಇದು ಸಾರ್ವತ್ರಿಕ ಆಕರ್ಷಣೆಯ ವಿಷಯ. ಹಾಗಾಗಿ ನಾವು ತೆಲುಗಿನ ಜೊತೆಗೆ ಹಿಂದಿ, ತಮಿಳು ಮತ್ತು ಕನ್ನಡ ಭಾಷೆಗಳಲ್ಲಿ ಈ ಚಿತ್ರ ನಿರ್ಮಿಸುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT