ಭಾನುವಾರ, ಏಪ್ರಿಲ್ 11, 2021
33 °C

ಮಾರ್ಚ್‌ 26ಕ್ಕೆ ‘ಇಂಗ್ಲಿಷ್‌–ಎಂಕ್ಲೆಗ್‌ ಬರ್ಪುಜ್ಜಿ ಬ್ರೊ’ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ತುಳು‌ ಚಿತ್ರರಂಗದ ಬಹುನಿರೀಕ್ಷೆಯ ಚಿತ್ರ ‘ಇಂಗ್ಲಿಷ್–ಎಂಕ್ಲೆಗ್‌ ಬರ್ಪುಜ್ಜಿ ಬ್ರೊ’ ಮಾರ್ಚ್ 26ರಂದು ಬಿಡುಗಡೆಯಾಗಲಿದೆ. 

ಅಕ್ಮೆ ಮೂವೀಸ್ ಇಂಟರ್‌ನ್ಯಾಷನಲ್ ಲಾಂಛನದಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಕೆ.ಸೂರಜ್‌ ಶೆಟ್ಟಿ ನಿರ್ದೇಶಿಸಿದ್ದು, ಗಲ್ಫ್‌ ರಾಷ್ಟ್ರಗಳಲ್ಲೂ ಇದು ಬಿಡುಗಡೆಯಾಗಲಿದೆ. ದುಬೈಯ ಖ್ಯಾತ ಉದ್ಯಮಿ, ಕನ್ನಡ ಸಿನಿಮಾ ನಿರ್ಮಾಪಕರಾದ ಹರೀಶ್ ಶೇರಿಗಾರ್ ಮತ್ತು ಶರ್ಮಿಳಾ ಶೇರಿಗಾರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯದಿಗ್ಗಜರ ದಂಡೇ ಇದೆ. ಇದೇ ಮೊದಲ ಬಾರಿಗೆ ಚಂದನವನದ ಮೇರುನಟ ಅನಂತ್‌ನಾಗ್‌ ತುಳು ಚಿತ್ರರಂಗಕ್ಕೆ ಕಾಲಿರಿಸಿದ್ದು, ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ರಂಗಭೂಮಿಯ ಖ್ಯಾತ ಹಾಸ್ಯ ನಟರಾದ ಅರವಿಂದ್ ಬೋಳಾರ್, ನವೀನ ಡಿ'ಪಡೀಲ್, ಭೋಜರಾಜ್ ವಾಮಂಜೂರ್, ವಿಸ್ಮಯ್ ವಿನಾಯಕ್, ದೀಪಕ್ ರೈ, ನಾಯಕನಾಗಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್, ನಾಯಕಿಯಾಗಿ ನವ್ಯ ಪೂಜಾರಿ ನಟಿಸಿದ್ದಾರೆ.

ತಾಂತ್ರಿಕವಾಗಿಯೂ ಈ ಚಿತ್ರವು ಉತ್ಕೃಷ್ಟವಾಗಿದ್ದು, 8ಕೆ ಕ್ಯಾಮೆರಾ ಬಳಸಿ ಚಿತ್ರೀಕರಿಸಿದ ಮೊದಲ ತುಳು ಸಿನಿಮಾ ಇದಾಗಿದೆ. ಬೆಂಗಳೂರು ಅರಮನೆಯಲ್ಲೂ ಇದರ ಚಿತ್ರೀಕರಣ ನಡೆದಿದೆ. ಚಿತ್ರದ ‘ವರ್ಲ್ಡ್ ಪ್ರೀಮಿಯರ್ ಶೋ' ದುಬೈಯಲ್ಲಿ ನಡೆದಿದೆ.

‘ತುಳು ಭಾಷೆಯ ಚಿತ್ರಗಳು ಕರಾವಳಿ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗದೇ ಕರ್ನಾಟಕದ ಮೂಲೆ ಮೂಲೆಗಳಿಗೂ ತಲುಪಬೇಕು ಹಾಗು ತುಳು ಭಾಷೆಯ ಚಿತ್ರಕ್ಕೆ ಕರುನಾಡಿನ ಸಮಸ್ತ ಜನತೆಯ ಬೆಂಬಲ, ಆಶೀರ್ವಾದ ಸಿಗಬೇಕು’ ಎಂದು ನಿರ್ಮಾಪಕ ಹರೀಶ್ ಶೇರಿಗಾರ್ ಹೇಳಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು