ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾನು ವೆಡ್ಸ್ ಭೂಮಿಗೆ ಯು/ಎ ಪ್ರಮಾಣಪತ್ರ

Last Updated 27 ಜೂನ್ 2019, 14:19 IST
ಅಕ್ಷರ ಗಾತ್ರ

ಪೂರ್ವಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕಿಶೋರ್ ಶೆಟ್ಟಿ ನಿರ್ಮಾಣದ ‘ಭಾನು ವೆಡ್ಸ್ ಭೂಮಿ’ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಚಿತ್ರದ ಯಾವುದೇ ಭಾಗದ ಕತ್ತರಿ ಪ್ರಯೋಗವಿಲ್ಲದೆ ಯು/ಎ ಪ್ರಮಾಣ ಪತ್ರನೀಡಿದೆ.

ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ಜಿ.ಕೆ. ಆದಿ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಛಾಯಾಗ್ರಹಣ ಗಣೇಶ್ ಹೆಗ್ಡೆ, ಸಂಗೀತ ಎ.ಎಂ.ನೀಲ್, ಸಂಕಲನ ಶ್ರೀನಿವಾಸ್ ಪಿ.ಬಾಬು ಅವರದ್ದು.

ತಾರಾಗಣದಲ್ಲಿ ಸೂರ್ಯಪ್ರಭ್, ರಕ್ಷತಾ ಮಲ್ನಾಡ್, ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸಾ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು ಇದ್ದಾರೆ. ವಿಶೇಷ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಂಡಿದ್ದಾರೆ.

ಚಿತ್ರದ ಕಥೆಯನ್ನು ಒಂದು ನೈಜ ಘಟನೆ ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ‘ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ಈ ಚಿತ್ರದ ಕಥೆಯ ಹೂರಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT