ಭಾನುವಾರ, ಸೆಪ್ಟೆಂಬರ್ 26, 2021
21 °C
ದಪ್ಪಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾ ಲಾಕ್‌ಡೌನ್‌ನಲ್ಲಿ ಹೇಗಾದರು ನೋಡಿ!

ಅಚ್ಚರಿ‌ ನೀಡಿದ ಹಾಸ್ಯನಟಿಯ ಹೊಸ‌ ಲುಕ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗುಂಡಮ್ಮನಂತಿದ್ದ ತಮಿಳು ಮತ್ತು ತೆಲುಗು ಚಿತ್ರರಂಗದ ಖ್ಯಾತ ಹಾಸ್ಯನಟಿ ವಿದ್ಯುಲ್ಲೇಖಾ ರಮಣ್ ತೂಕ ಇಳಿಸಿಕೊಂಡಿದ್ದಾರೆ. ತೆಳ್ಳಗಾಗಿರುವ ಫೋಟೊಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ‘ಗುಂಡಮ್ಮ’ ಎಂದು ತನ್ನನ್ನು ರೇಗಿಸುತ್ತಿದ್ದವರಿಗೆ ಶಾಕ್‌ ನೀಡಿದ್ದಾರೆ.

ಲಾಕ್‌ಡೌನ್ ಸಮಯವನ್ನು ಸಮರ್ಪಕವಾಗಿ ಬಳಸಿಕೊಂಡಿರುವ ವಿದ್ಯುಲ್ಲೇಖಾ ಅಚ್ಚರಿ ರೀತಿಯಲ್ಲಿ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹೊಸ ಲುಕ್‌ನಲ್ಲಿರುವ ಫೋಟೊ ಶೇರ್ ಮಾಡುವ ಜೊತೆಗೆ ತೂಕ ಇಳಿಸಿದ ಮೇಲೆ ಹೆಚ್ಚಿದ ಆತ್ಮವಿಶ್ವಾಸದ ಬಗ್ಗೆಯೂ ವಿವರವಾಗಿ ಬರೆದುಕೊಂಡಿದ್ದಾರೆ.

‘ನಾನು ತುಂಬಾ ದಪ್ಪಗಿದ್ದೆ. ಹೀಗಿದ್ದರೂ ನಿಮ್ಮಲ್ಲಿ ಆತ್ಮವಿಶ್ವಾಸ ಇದೆಯಾ ಎಂದು ಪ್ರತಿಯೊಬ್ಬರೂ ನನ್ನನ್ನು ಪ್ರಶ್ನಿಸುತ್ತಿದ್ದರು. ಜೀವನದುದ್ದಕ್ಕೂ ಹೀಗೆ ಇರಬೇಕಾ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಂಡೆ. ತಡ ಮಾಡದೆ, ವರ್ಕೌಟ್‌  ಶುರುವಿಟ್ಟುಕೊಂಡೆ. ತೂಕ ಇಳಿಯುತ್ತಲೇ ಆತ್ಮವಿಶ್ವಾಸ ತಾನಾಗಿಯೇ ಬಂತು‘ ಎಂದು ವಿದ್ಯುಲ್ಲೇಖಾ ತಮ್ಮ‘ಫಿಟ್ನೆಸ್‌‘ ಪಯಣವನ್ನು ಹಂಚಿಕೊಂಡಿದ್ದಾರೆ.

ತೆಳ್ಳಗಾಗಲು ಅಡ್ಡದಾರಿಗಳಿಲ್ಲ

‘ಆರೋಗ್ಯಕರ ಅಭ್ಯಾಸ ರೂಢಿಸಿಕೊಂಡಿದ್ದೇನೆ. ಬೆಳಿಗ್ಗೆ ಬೇಗ ಎದ್ದು ವರ್ಕೌಟ್‌ ಮಾಡುತ್ತಿದ್ದೇನೆ. ರಾತ್ರಿ ಬೇಗ ಮಲಗುವುದರಿಂದ ಹೆಚ್ಚಿನ ಉಪಯೋಗವಿದೆ. ಸ್ಥೂಲಕಾಯ ನಿರ್ವಹಣೆಗೆ ನಿದ್ದೆಯ ಸಮಯವೂ ಬಹಳ ಮುಖ್ಯವಾಗುತ್ತದೆ’ ಎಂದು ತಮ್ಮ ಫಿಟ್ನೆಸ್‌ ಗುಟ್ಟು ಹಂಚಿಕೊಂಡಿದ್ದಾರೆ.

‘ಸಣ್ಣಗಾಗಲು ಯಾವ ಅಡ್ಡ ದಾರಿಗಳೂ ಇಲ್ಗ. ಸಣ್ಣಗಾಗಬೇಕೆಂದು ಸಿಕ್ಕ, ಸಿಕ್ಕ ಮಾತ್ರೆ, ಮದ್ದು ಸೇವಿಸಬಾರದು. ಕಷ್ಟಪಟ್ಟು ವರ್ಕೌಟ್ ಮಾಡಬೇಕು. ಶಿಸ್ತುಬದ್ಧ ಜೀವನ, ಸಮತೋಲಿತ ಆಹಾರ ಸೇವನೆ ಜತೆಗೆ ಪ್ರತಿದಿನ ವ್ಯಾಯಾಮ ಮಾಡಬೇಕು. ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ. ಜೀವನದಲ್ಲಿ ಯಾವುದೂ ಸುಲಭವಾಗಿ ಸಿಗುವುದಿಲ್ಲ. ಕಷ್ಟಪಟ್ಟು ಪಡೆಯಬೇಕು. ಫಲಿತಾಂಶ ಬಂದಾಗ, ಅದಕ್ಕಾಗಿ ನೀವು ಪಟ್ಟ ಕಷ್ಟ ಮತ್ತು ಸುರಿಸಿದ ಬೆವರಿಗೆ ಬೆಲೆ ಸಿಗುತ್ತದೆ‘ ಎಂದು ಅನುಭವ ಹಂಚಿಕೊಂಡಿದ್ದಾರೆ.

‘ನೀಥಾನೆ ಎನ್ ಪೊನ್ವಸಂತಂ’ ತಮಿಳು ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಿದ್ಯುಲ್ಲೇಖಾ ಅವರನ್ನು ತೆಲುಗು ಸಿನಿ ಲೋಕದಲ್ಲಿ ಎಲ್ಲರೂ ಮುದ್ದಿನಿಂದ ’ಬುಜ್ಜಿ‘ ಎಂದು ಕರೆಯುತ್ತಾರೆ. ಇದುವರೆಗೂ ತೆರೆಯ ಮೇಲೆ ಅವರು ಹೆಚ್ಚು ಮಿಂಚಿದ್ದು ಗುಂಡಮ್ಮನ ಪಾತ್ರದಲ್ಲಿಯೇ.‘ರ್‍ಯಾಂಬೊ-2’ ಚಿತ್ರದಲ್ಲಿ ಹಾಸ್ಯಪಾತ್ರದ ಮೂಲಕ ಕನ್ನಡ ಪ್ರೇಕ್ಷಕರನ್ನು ವಿದ್ಯುಲ್ಲೇಖಾ ರಂಜಿಸಿದ್ದಾರೆ.

ದಢೂತಿ ದೇಹದಿಂದಾಗಿಯೇ ಇಲ್ಲಿಯವರೆಗೆ ಹಾಸ್ಯ ಪಾತ್ರಗಳಲ್ಲಿ ಮಿಂಚುತ್ತಿದ್ದ ವಿದ್ಯುಲ್ಲೇಖಾ ಈಗ ತೆಳ್ಳಗಾಗಿದ್ದಾರೆ. ಮುಂದೆ ಎಂಥ ಪಾತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳಬಹುದು ಎನ್ನುವುದು ಕುತೂಹಲ ಮೂಡಿಸಿದೆ.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು