ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಮಾಶ್ರೀ ಅವರಿಗೆ ಉತ್ತಮ ನಟಿ ಪ್ರಶಸ್ತಿ

Last Updated 4 ಡಿಸೆಂಬರ್ 2022, 11:17 IST
ಅಕ್ಷರ ಗಾತ್ರ

ಹಿರಿಯ ನಟಿ ಉಮಾಶ್ರೀ ಅವರಿಗೆ ‘ಮಾನ’ ಚಿತ್ರದ ನಟನೆಗಾಗಿ ಉತ್ತಮ ನಟಿ ಪ್ರಶಸ್ತಿ ಪ್ರಕಟವಾಗಿದೆ.

ಹುಬ್ಬಳ್ಳಿಯ ನವ ಕರ್ನಾಟಕ ಚಲನಚಿತ್ರ ಅಕಾಡೆಮಿ ಹಮ್ಮಿಕೊಂಡ ಕರ್ನಾಟಕ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಈ ಪ್ರಶಸ್ತಿ ಘೋಷಿಸಲಾಗಿದೆ.

‘ಮಾನ’ ಚಿತ್ರದಲ್ಲಿ ದೇವರಾಜ್‌ ಮತ್ತು ಉಮಾಶ್ರೀ ನಟಿಸಿದ್ದಾರೆ. ದೇವರಾಜ್‌ ಅವರು ಈ ಚಿತ್ರದಲ್ಲಿ ಮಾನಿಗ ಹೆಸರಿನ ಜೀತದಾಳಿನ ಪಾತ್ರದಲ್ಲಿದ್ದಾರೆ. ಉಮಾಶ್ರೀ ಅವರದ್ದು ಮಾನಿಗನ ಪತ್ನಿಯ ಪಾತ್ರ. ಜೀತಪದ್ಧತಿ ಶೋಷಣೆ ಸಂಬಂಧಿತ ವಿಷಯ ಆಧರಿತ ಚಿತ್ರವಿದು. ಕುಂ. ವೀರಭದ್ರಪ್ಪ ಅವರ ಕಥೆಯನ್ನು ಆಧರಿಸಿದೆ.

ಚಿತ್ರವನ್ನು ಡೇವಿಡ್‌ ಸೆಬಾಸ್ಟಿಯನ್‌ ನಿರ್ದೇಶಿಸಿದ್ದಾರೆ. ಕಾಂತಲಕ್ಷ್ಮೀ ಮತ್ತು ರಮೇಶ್‌ ಬಾಬು ನಿರ್ಮಾಪಕರು.

ಡಿ. 8, 9 ಮತ್ತು 10ರಂದು ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಈ ಚಿತ್ರೋತ್ಸವ ನಡೆಯಲಿದೆ. ಇಲ್ಲಿನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ನಿರ್ದೇಶಕ ಸೆಬಾಸ್ಟಿಯನ್‌ ಡೇವಿಡ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT