ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಎಂಥ ಮಂಚಿವಾಡವುರ’ ಸಂಕ್ರಾಂತಿಗೆ ತೆರೆಗೆ

Last Updated 26 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಜೂನಿಯರ್‌ ಎನ್‌ಟಿಆರ್ ಸಹೋದರ ನಂದಮೂರಿ ಕಲ್ಯಾಣರಾಮ್, ನಟನೆಯೊಂದಿಗೆ ಸಿನಿಮಾ ನಿರ್ಮಾಣದ ಮೂಲಕವೂ ಹೆಸರು ಮಾಡಿದವರು. ‘ಬಾಲ ಗೋಪಾಲುಡು‘ ಸಿನಿಮಾದಲ್ಲಿ ಬಾಲನಟನಾಗಿ ಕಾಣಿಸಿಕೊಳ್ಳುವ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದ ಈ ನಟ ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಸರು ಗಳಿಸಿದವರು.

‘118’ ಸಿನಿಮಾದ ಯಶಸ್ಸಿನ ಬಳಿಕ ಕಲ್ಯಾಣರಾಮ್ ‘ಎಂಥ ಮಂಚಿವಾಡವುರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಮೆಹರಿನ್‌ ಪಿರ್ಜಾಡಾ ನಾಯಕಿಯಾಗಿ ನಟಿಸುತ್ತಿರುವ ಈ ಸಿನಿಮಾ ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್‌ಮೆಂಟ್ ಸಿನಿಮಾ ‘ಎಂಥ ಮಂಚಿವಾಡವುರ’ 2020ರ ಜನವರಿಗೆ ಬಿಡುಗಡೆಯಾಗಲಿದೆ. ‘ಶತಮಾನಂಭವತಿ’ ಸಿನಿಮಾ ಖ್ಯಾತಿಯನಿರ್ದೇಶಕ ಸತೀಶ್ ವೆಗೆಸ್ನಾ ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ. ನಿರ್ಮಾಪಕ ಸಿವಲೆಂಕಾ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವೀಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ಈ ಸಿನಿಮಾ ಮೊದಲ ಹಂತದ ನಿರ್ಮಾಣ ಇತ್ತೀಚೆಗೆ ಮುಗಿಸಿದ್ದು, ಎರಡನೇ ಹಂತದ ಚಿತ್ರೀಕರಣ ಆ. 26ರಿಂದ ಸೆ. 22 ರವರೆಗೆ ರಾಜಮಂಡ್ರಿಯಲ್ಲಿ ನಡೆಯಲಿದೆ. ಈ ಹಂತದಲ್ಲಿ ಸಿನಿಮಾದ ಪ್ರಮುಖ ಹಂತಗಳ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಕೊನೆಯ ಎರಡು ಹಂತಗಳು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಹೈದರಾಬಾದ್ ಹಾಗೂ ಚಿಕ್ಕಮಗಳೂರಿನಲ್ಲಿ ನಡೆಯಲಿದೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ಸತೀಶ್‌ ‘ಸಿನಿಮಾವು ಒಳ್ಳೆಯ ಕತೆಯನ್ನು ಆಧರಿಸಿದೆ. ಉತ್ತಮ ನಾಯಕ ಹಾಗೂ ಚಿತ್ರತಂಡ ಹೊಂದಿದೆ. ಒಟ್ಟಾರೆ ಚಿತ್ರತಂಡದಲ್ಲಿ ಒಂದು ಪಾಸಿಟಿವ್ ವೈಬ್ ಇದೆ. ಈಗಷ್ಟೇ ನಾವು ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದೇವೆ. ಚಿತ್ರತಂಡವುಎರಡನೇ ಹಂತದ ಚಿತ್ರೀಕರಣಕ್ಕೆ ಸಜ್ಜುಗೊಳ್ಳುತ್ತಿದೆ. ಆದಷ್ಟು ಬೇಗ ಚಿತ್ರದ ನಿರ್ಮಾಣ ಹಂತವನ್ನು ಮುಗಿಸಿ ಸಂಕ್ರಾಂತಿಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆಯಲ್ಲಿದ್ದೇವೆ’ ಎಂದು ಹೇಳಿದ್ದಾರೆ.

ಈ ಸಿನಿಮಾದಲ್ಲಿ ನರೇಶ್, ಸುಹಾಸಿನಿ, ತನಿಕೆಲ್ಲಾ ಭರಣಿ, ಪವಿತ್ರಾ ಲೋಕೇಶ್‌, ರಾಜೀವ್ ಕಣಕಾಲ, ವೆನ್ನೆಲ್ಲಾ ಕಿಶೋರ್‌ ಮುಂತಾದವರು ಬಣ್ಣ ಹಚ್ಚಿದ್ದಾರೆ. ‘ಗೀತ ಗೋವಿಂದಂ’ ಖ್ಯಾತಿಯ ಗೋಪಿ ಸುಂದರ್ ಸಂಗೀತ ನಿರ್ದೇಶನ ಮಾಡುತ್ತಿದ್ದು ರಾಜ್ ತೋಟ ಸಿನಿಮಾಟೋಗ್ರಫಿ ಮಾಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT