ಶನಿವಾರ, ಡಿಸೆಂಬರ್ 3, 2022
27 °C

ಇದು ‘ಕೊರಗಜ್ಜ ದೈವ’ದ ಚಿತ್ರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬರ್ತಿದ್ದಾನೆ ‘ಕರಿ ಹೈದ....ಕರಿ ಅಜ್ಜ ...’. ಯಾರಿವರು? ಕೊರಗಜ್ಜನ ಕಥೆಯನ್ನು ತೆರೆಗೆ ತರುವ ಪ್ರಯತ್ನ ಇಲ್ಲಿ ಸಾಗಿದೆ. ಆ ಪ್ರಯತ್ನಕ್ಕೆ ಮುಂದಾದವರು ಸುಧೀರ್‌ ಅತ್ತಾವರ. 

ಈ ಕಥೆಯ ಕುರಿತು ಸಾಕಷ್ಟು ಅಧ್ಯಯನ ನಡೆಸಿದೆ ಚಿತ್ರತಂಡ. ಕೊರಗಜ್ಜನ ಜನಾಂಗದ ಪ್ರಮುಖರೊಂದಿಗೆ ಚರ್ಚಿಸಿ, ಸುಮಾರು 12ನೇ ಶತಮಾನದಲ್ಲಿದ್ದ ಕೊರಗಜ್ಜನ ನಿಜ ಬದುಕಿನ, ಯಾರಿಗೂ ತಿಳಿಯದ ಅಪರೂಪದ ವಿಷಯಗಳನ್ನು ಈ ಸಿನಿಮಾದ ಮೂಲಕ ಜಗತ್ತಿಗೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟ ಕಬೀರ್‌ ಬೇಡಿ ನಟಿಸುತ್ತಿದ್ದಾರೆ. 

ಧೃತಿ ಕ್ರಿಯೇಷನ್ಸ್ ಮತ್ತು ಸಕ್ಸಸ್ ಫಿಲ್ಮ್ಸ್ ಬ್ಯಾನರ್ ಅಡಿ ತ್ರಿವಿಕ್ರಮ್ ಸಫಲ್ಯ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಬೆಳ್ತಂಗಡಿ ತಾಲ್ಲೂಕಿನ ಬಳ್ಳಮಂಜದ ಅನಂತೇಶ್ವರ ದೇವಸ್ಥಾನದಲ್ಲಿ ಶಾಸಕ ಹರೀಶ್ ಪೂಂಜ ಅವರು ಕ್ಯಾಮೆರಾ ಚಾಲನೆ ಮಾಡಿದರು. ಕಮಲ ಕೆ. ಸಫಲ್ಯ ಆರಂಭ ಫಲಕ ತೋರಿಸಿದರು. ಚಿತ್ರದ ಮುಹೂರ್ತಕ್ಕೆ ಕೊರಗ ಸಮುದಾಯದವರಿಂದ ಸಾಂಪ್ರದಾಯಿಕ ಪೂಜೆ ನಡೆಯಿತು.

ಚಿತ್ರದಲ್ಲಿ ಭರತ್ ಸೂರ್ಯ ಪರಿಚಯವಾಗುತ್ತಿರುವ ಹೊಸ ಮುಖ. ಸುಧೀರ್‌ ನಿರ್ದೇಶನದ ಮರಾಠಿ ಚಿತ್ರ ‘ಗುಲೇ ಬಕಾವಲಿ’ ಮತ್ತು ಮರಾಠಿ – ಕನ್ನಡ ಚಿತ್ರ ‘ಅಗೋಳಿ ಮಂಜಣ್ಣ’ ನಿರ್ಮಾಣ ಹಂತದಲ್ಲಿವೆ. 

‘ಕರಿ ಅಜ್ಜ...’ ಚಿತ್ರಕ್ಕೆ ವಿದ್ಯಾಧರ ಶೆಟ್ಟಿ ಅವರ ಸಂಕಲನವಿದೆ. ಪವನ್ ವಿ. ಕುಮಾರ್ ಮತ್ತು ಗಣೇಶ್ ಕೆಳಮನೆ ಕ್ಯಾಮೆರಾ, ಸುಧೀರ್-ಕೃಷ್ಣ ರವಿ ಸಂಗೀತ, ಸುಧೀರ್ ಅತ್ತಾವರ್ ಕಲೆ ಚಿತ್ರಕ್ಕಿದೆ. ತ್ರಿವಿಕ್ರಮ ಬೆಳ್ತಂಗಡಿ ನಿರ್ಮಾಣದ ನಾಲ್ಕನೆಯ ಸಿನೆಮಾವಿದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು