ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧಿನಗರದಲ್ಲಿ ಹೊಸ ಪ್ರತಿಭೆಗಳದ್ದೇ ಹವಾ

Last Updated 3 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಈ ವಾರ ಗಾಂಧಿನಗರದಲ್ಲಿ ಹೊಸ ಪ್ರತಿಭೆಗಳದ್ದೇ ಹವಾ! ಇಂದು ಕನ್ನಡದ ಯಾವುದೇ ಬಿಗ್‌ಬಜೆಟ್‌ ಸಿನಿಮಾಗಳು ತೆರೆಕಾಣುತ್ತಿಲ್ಲ, ಹೀಗಾಗಿ ಹೊಸಬರ ಒಟ್ಟು ಎಂಟು ಚಿತ್ರಗಳು ತೆರೆಯ ಮೇಲೆ ಬರುತ್ತಿವೆ.

ಹಾಸ್ಯ ಪ್ರಧಾನ ಪಾತ್ರಗಳಲ್ಲೇ ಕಾಣಿಸಿಕೊಂಡಿರುವ ನಟ ಡ್ಯಾನಿಶ್‌ ಸೇಠ್‌ ಇದೇ ಮೊದಲ ಬಾರಿಗೆ ಕ್ರೈಂ ಥ್ರಿಲ್ಲರ್‌ ಕಥಾಹಂದರ ಹೊಂದಿರುವ ಸಿನಿಮಾವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇರಣ ಅಗರವಾಲ್ ನಿರ್ದೇಶಿಸಿದ ‘ಸೋಲ್ಡ್‌’ ಸಿನಿಮಾದಲ್ಲಿ ಡ್ಯಾನಿಶ್‌, ಶಿವಾನಿ ಆರ್. ಬಲ್ಲುಕರಾಯ, ದೀಪಂ ಕೊಹ್ಲಿ, ಕಾವ್ಯ ಶೆಟ್ಟಿ, ಭರತ್ ಜೆ.ಬಿ ಮುಂತಾದವರು ನಟಿಸಿದ್ದಾರೆ. ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವವಿರುವ ಪ್ರೇರಣ ಅವರಿಗೆ ಇದು ಚೊಚ್ಚಲ‌ ನಿರ್ದೇಶನದ ಚಿತ್ರ.

ನೀನಾಸಂ ಮಂಜು ನಿರ್ದೇಶನದಲ್ಲಿ ಮೂಡಿ ಬಂದಿರುವ ನೈಜ ಘಟನೆಯಾಧಾರಿತ ಮಹಿಳಾ ಪ್ರಧಾನ ಸಿನಿಮಾ ‘ಕನ್ನೇರಿ’, ಸೈಕೋ ಥ್ರಿಲ್ಲರ್‌ ಕಥಾ ಹಂದರವಿರುವ, ಸಮರ್ಥ್‌ ನಾಯಕ್‌ ನಿರ್ದೇಶನದ ಚಿತ್ರ ‘ಮೋಕ್ಷ’,ಟ್ಯಾಕ್ಸಿ ಚಾಲಕನೊಬ್ಬನ ಜೀವನದ ಕಥಾನಕವಿರುವ,ತ್ರಿಲೋಕ್ ನಿರ್ದೇಶನದ ‘ಎಲ್ಲೋ ಬೋರ್ಡ್‌’,ಜ್ಯೂನಿಯರ್ ನರಸಿಂಹರಾಜು ಅವರ ಸಾರಥ್ಯದಲ್ಲಿ ವಾಸುದೇವ ರೆಡ್ಡಿ ನಿರ್ಮಿಸಿ, ನಿರ್ದೇಶಿಸಿರುವ ‘ಮೈಸೂರು’, ಮುತ್ತು ಅವರು ಕಥೆ,ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿರುವ ‘ಲೀಸ’ ಹಾಗೂ ‘ಅಘೋರ’, ‘ಬೆಟ್ಟದ ದಾರಿ’ ಎಂಬ ಸಿನಿಮಾಗಳೂ ಇಂದು ಬಿಡುಗಡೆಯಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT