ಸೋಮವಾರ, ಆಗಸ್ಟ್ 8, 2022
22 °C

ಸಿನಿಮಾ, ರಾಜಕಾರಣ ಮುಗಿದ ಪ್ರಯಾಣ: ರಮ್ಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಿನಿಮಾ ಮತ್ತು ರಾಜಕೀಯ ಮುಗಿದು ಹೋದ ಪ್ರಯಾಣ ಎಂದಿದ್ದಾರೆ ನಟಿ, ಮಾಜಿ ಸಂಸದೆ ರಮ್ಯಾ. ವಾರಾಂತ್ಯದ ಲಾಕ್‌ಡೌನ್‌ ದಿನ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡ ರಮ್ಯಾ ಅಭಿಮಾನಿಗಳ ಕುತೂಹಲದ ಪ್ರಶ್ನೆಗಳಿಗೆ ಸಾವಧಾನದಿಂದಲೇ ಉತ್ತರಿಸಿದರು.

ನೀವು ಮದುವೆ ಆಗಿದ್ದೀರಾ? ಡೇಟಿಂಗ್‌ ಮಾಡುತ್ತೀರಾ? ಬಾಯ್‌ ಫ್ರೆಂಡ್‌ ಇದ್ದಾರೆಯೇ ಎಂಬೆಲ್ಲಾ ಪ್ರಶ್ನೆಗಳ ಸುರಿಮಳೆಗೆ ಒಂದೇ ಮಾತಿನಲ್ಲಿ ‘ಇಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನು ಹಲವರು ಅವರ ಮೈಕಾಂತಿ ಬಗ್ಗೆ ಪ್ರಶ್ನಿಸಿದ್ದಾರೆ. ಅದು ನನಗಿಷ್ಟ ಎಂದು ರಮ್ಯಾ ಹೇಳಿಕೊಂಡಿದ್ದಾರೆ. ಅಂದಹಾಗೆ ಬಿಡುವಿನ ವೇಳೆಯಲ್ಲಿ ನಾಯಿಯೊಂದಿಗೆ ಕಾಲ ಕಳೆಯುತ್ತಾರಂತೆ. ಹಾಗೆಯೇ ಮಾತಿನ ಮದ್ಯೆ ತಮ್ಮ ಸ್ವಭಾವವೊಂದನ್ನು ಹೇಳಿಕೊಂಡಿರುವ ಅವರು, ‘ನನಗೆ ಭಾವನೆಗಳನ್ನು ನಿಯಂತ್ರಿಸುವುದು ಅಸಾಧ್ಯ. ಅದರಲ್ಲಿ ಅಸಮರ್ಥಳಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ.

ಅಭಿಮಾನಿಯೊಬ್ಬ ನೀವೇಕೆ ರಕ್ಷಿತ್‌ ಶೆಟ್ಟಿ ಅವರನ್ನ ಮದುವೆ ಆಗಬಾರದು ಎಂಬ ಪ್ರಶ್ನೆಗೆ ರಕ್ಷಿತ್‌ ಅವರ ಇನ್‌ಸ್ಟಾಗ್ರಾಂ ಖಾತೆಯನ್ನು ಟ್ಯಾಗ್‌ ಮಾಡಿ ನಗುವಿನ ಇಮೋಜಿ ಹಾಕಿ ಸುಮ್ಮನಾಗಿದ್ದಾರೆ. ಹೀಗೆ ಕೆಲಕಾಲ ರಮ್ಯಾ ಜಾಲತಾಣಗಳ ಮೂಲಕ ಅಭಿಮಾನಿಗಳ ಗಮನ ಸೆಳೆದರು. ಅಭಿಮಾನಿಗಳೂ ಸಾಕಷ್ಟು ಕಾಲೆಳೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು