ಸೋಮವಾರ, ನವೆಂಬರ್ 18, 2019
23 °C

ಈ ವಾರ ತೆರೆಗೆ

Published:
Updated:
Prajavani

ಹಗಲು ಕನಸು 

ದಿನೇಶ್‌ ಬಾಬು ನಿರ್ದೇಶನ ಹಾಗೂ ಛಾಯಾಗ್ರಹಣವಿರುವ ಮಾಸ್ಟರ್ ಆನಂದ್ ನಾಯಕ ನಟನಾಗಿರುವ ‘ಹಗಲು ಕನಸು’ ಚಿತ್ರ ಬಿಡುಗಡೆಯಾಗುತ್ತಿದೆ. ಎಂ.ಪಿ.ಆರ್‌. ಫಿಲ್ಮ್ಸ್ ಅಡಿಯಲ್ಲಿ ವಿ.ಜಿ. ಅಚ್ಯುತರಾಜು, ಎಂ. ಪದ್ಮನಾಭ, ರಹಮತ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಕಾರ್ತಿಕ್ ವೆಂಕಟೇಶ್ ಎರಡು ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. 

ಸನಿಹಾ ಯಾದವ್, ನಾರಾಯಣ ಸ್ವಾಮಿ, ನೀನಾಸಮ್ ಅಶ್ವಥ್, ಮನದೀಪ್ ರಾಯ್, ಅಶ್ವಿನ್ ಹಾಸನ್, ಚಿತ್ಕಲಾ ಬಿರಾದರ್ ತಾರಾಗಣದಲ್ಲಿದ್ದಾರೆ.

ವಿಷ್ಣು ಸರ್ಕಲ್‌

ತಿರುಪತಿ ಪಿಕ್ಚರ್ ಪ್ಯಾಲೇಸ್ ಲಾಂಛನದಡಿ ಆರ್.ಬಿ. ನಿರ್ಮಾಣದ ‘ವಿಷ್ಣು ಸರ್ಕಲ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಈ ಚಿತ್ರ ನಿರ್ದೇಶಿಸಿರುವುದು ಲಕ್ಷ್ಮಿ ದಿನೇಶ್‌. ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ. ಛಾಯಾಗ್ರಹಣ ಪಿ.ಎಲ್. ರವಿ ಅವರದು. ಶ್ರೀವತ್ಸ ಸಂಗೀತ ಸಂಯೋಜಿಸಿದ್ದಾರೆ. ಹಿನ್ನೆಲೆ ಸಂಗೀತ ಸಂಯೋಜನೆ ಪ್ರದೀಪ್ ವರ್ಮ ಅವರದು. ಪಳನಿ ರಾಜು ಸಾಹಸ ಸಂಯೋಜಿಸಿದ್ದಾರೆ.

ಗುರುರಾಜ್ ಜಗ್ಗೇಶ್, ದಿವ್ಯಾಗೌಡ, ಸಂಹಿತಾ ವಿನ್ಯಾ, ಡಾ.ಜಾನವಿ, ದತ್ತಣ್ಣ, ಬಿರಾದರ್, ರಾಕ್‍ಲೈನ್ ಸುಧಾಕರ್, ಕಡ್ಡಿ ವಿಶ್ವ, ಪಟ್ರೆ ನಾಗರಾಜ್, ಯತಿರಾಜ, ಸಂದೇಶ್, ವಿ. ಮನೋಹರ್ ತಾರಾಗಣದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)