ಗುರುವಾರ , ಆಗಸ್ಟ್ 13, 2020
28 °C

ಬಾಲಿವುಡ್‌ ನಿರ್ಮಾಪಕ ಹರೀಶ್‌ ಶಾ ನಿಧನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್‌ನ ಖ್ಯಾತ ನಿರ್ಮಾಪಕ, ನಿರ್ದೇಶಕ ಹರೀಶ್‌ ಶಾ(76) ಅವರು ಮಂಗಳವಾರ ನಿಧನರಾದರು. 

ಹತ್ತು ವರ್ಷದಿಂದ ಗಂಟಲು ಕ್ಯಾನ್ಸರ್‌ನಿಂದ  ಬಳಲುತ್ತಿದ್ದ ಅವರು ಮಂಗಳವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಪವನ್‌ ಹನ್ಸ್‌ ಚಿತಾಗಾರದಲ್ಲಿ ಮಧ್ಯಾಹ್ನ ಅಂತ್ಯಕ್ರಿಯೆ ನಡೆಸಲಾಯಿತು ಎಂದು ಅವರ ಸಹೋದರ ವಿನೋದ್‌ ಶಾ ತಿಳಿಸಿದ್ದಾರೆ.

ಇವರು 1972 ರಲ್ಲಿ ಬಿಡುಗಡೆಗೊಂಡಿದ್ದ ರಾಜೇಶ್‌ ಖನ್ನಾ ಅಭಿನಯದ ‘ಮೇರೆ ಜೀವನ್‌ ಸಾಥಿ’  ನಿರ್ಮಾಪಕರಾಗಿದ್ದರು. ಈ ಚಿತ್ರ ಹರೀಶ್‌ ಶಾ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು.  ‘ಕಾಲಾ–ಸೋನಾ’,  ‘ರಾಮ್‌ ತೇರಿ ಕಿತ್ನೆ ನಾಮ್‌’ ಇವರ ನಿರ್ಮಾಣದಲ್ಲಿ ಮೂಡಿಬಂದ ಪ್ರಮುಖ ಚಲನಚಿತ್ರಗಳು. ಇವರು ನಿರ್ದೇಶಿಸಿದ  ಮೊದಲ ಚಲನಚಿತ್ರ ‘ಧನ್‌ ದೌಲತ್‌’. ಇದರಲ್ಲಿ ರಿಷಿ ಕಪೂರ್‌ ಮತ್ತು ನೀತು ಕಪೂರ್‌ ಮುಖ್ಯ ಪಾತ್ರಧಾರಿಗಳಾಗಿದ್ದರು.  

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು