‘ಆಪರೇಷನ್ ನಕ್ಷತ್ರ’ ಟೈಟಲ್ ಬಿಡುಗಡೆ

7

‘ಆಪರೇಷನ್ ನಕ್ಷತ್ರ’ ಟೈಟಲ್ ಬಿಡುಗಡೆ

Published:
Updated:

ನಂದಕುಮಾರ. ಎನ್, ಅರವಿಂದ ಮೂರ್ತಿ ಟಿ.ಎಸ್, ರಾಧಾಕೃಷ್ಣ ಹಾಗೂ ಕಿಶೋರ್ ಮೇಗಳಮನೆ ನಿರ್ಮಿಸಿರುತ್ತಿರುವ ‘ಆಪರೇಷನ್ ನಕ್ಷತ್ರ’ ಚಿತ್ರದ ಶೀರ್ಷಿಕೆಯನ್ನು ನಟ ಶ್ರೀಮುರುಳಿ ಬಿಡುಗಡೆ ಮಾಡಿದರು. ‘ಆಪರೇಷನ್ ನಕ್ಷತ್ರ ಅಂದ ಕೂಡಲೇ ಡಾ. ರಾಜ್‌ಕುಮಾರ್ ಅವರ ಆಪರೇಷನ್ ಡೈಮೆಂಡ್ ರಾಕೆಟ್ ಚಿತ್ರ ನೆನಪಿಗೆ ಬರುತ್ತದೆ. ಈ ಸಿನಿಮಾ ಕೂಡ ಅಷ್ಟೇ ದೊಡ್ಡ ಹೆಸರು ಗಳಿಸಲಿ’ ಎಂದು ಶುಭ ಹಾರೈಸಿದರು.

ಮಧುಸೂದನ್ ಅವರ ಚೊಚ್ಚಲ ನಿರ್ದೇಶನದ ಈ ಚಿತ್ರದ ಶೇಕಡ 90ರಷ್ಟು ಚಿತ್ರೀಕರಣ ಮುಗಿದಿದೆ. ಈ ಚಿತ್ರಕ್ಕೆ ಮಧುಸೂದನ್‍ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. ಎರಡು ಹಾಡುಗಳ ಚಿತ್ರೀಕರಣ ಸದ್ಯದಲ್ಲೇ ನಡೆಯಲಿದೆ. ಹಣದ ಹಿಂದೆ ಹೋದವರ ಪರಿಸ್ಥಿತಿ ಏನಾಗುತ್ತದೆ ಎಂಬುದನ್ನು ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಶೈಲಿಯಲ್ಲಿ ಇದರಲ್ಲಿ ಹೇಳಲಾಗಿದೆಯಂತೆ.

ಚಿತ್ರಕ್ಕೆ ಶಿವಸೀನ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಇದೆ. ನಿರಂಜನ್ ಒಡೆಯರ್, ಯಜ್ಞಾ ಶೆಟ್ಟಿ, ಅದಿತಿ ಪ್ರಭುದೇವ, ಲಿಖಿತ್ ಸೂರ್ಯ, ದೀಪಕ್ ರಾಜ್ ಶೆಟ್ಟಿ, ಶ್ರೀನವಾಸ್ ಪ್ರಭು, ಗೋವಿಂದೇಗೌಡ, ವಿಜಯಲಕ್ಷ್ಮಿ, ಅರವಿಂದೇಗೌಡ, ಶ್ರೀಜಾ, ಅರವಿಂದ್ ಮೂರ್ತಿ ಟಿ.ಎಸ್. ಮುಂತಾದವರು ತಾರಾಬಳಗದಲ್ಲಿ ಇದ್ದಾರೆ.

‘ಫೇಸ್ 2 ಫೇಸ್’ ಶೀಘ್ರ ಸೆನ್ಸಾರ್ ಮುಂದೆ

ಸುಮಿತ್ರಾ ಬಿ.ಕೆ. ನಿರ್ಮಿಸುತ್ತಿರುವ ‘ಫೇಸ್ 2 ಫೇಸ್’ ಚಿತ್ರ ಸದ್ಯದಲ್ಲೇ ಸೆನ್ಸಾರ್ ಮಂಡಳಿ ಮುಂದೆ ಹೋಗಲಿದೆ. ಚಿತ್ರವು ಈ ತಿಂಗಳ ಅಂತ್ಯದಲ್ಲಿ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯದಾದ್ಯಂತ ತೆರೆಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಚಿತ್ರಕ್ಕೆ ಮಂಜು ಮಾಂಡವ್ಯ ಸಂಭಾಷಣೆ, ವಿಶ್ವಜಿತ್‍ರಾವ್ ಛಾಯಾಗ್ರಹಣ, ಜಯಂತ ಕಾಯ್ಕಿಣಿ, ಡಾ. ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ, ಏಕ್‍ಕ್ವಾಬ್ ಸಂಗೀತ ಇದೆ. ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ಸಂದೀಪ್ ಜನಾರ್ದನ್ ಅವರದ್ದು. ರೋಹಿತ್ ಭಾನುಪ್ರಕಾಶ್, ಪೂರ್ವಿ ಜೋಷಿ, ದಿವ್ಯಾ ಉರುಡುಗ, ವೀಣಾ ಸುಂದರ್, ಗೋಪಾಲಕೃಷ್ಣ ದೇಶಪಾಂಡೆ, ರೂಪಾ ಗೌಡ, ಸುಚೇಂದ್ರ ಪ್ರಸಾದ್, ಆರ್ಯನ್, ಅರುಣ್ ಅಲೆಕ್ಸಾಂಡರ್, ಯಮುನಾ ಮುಂತಾದವರು ತಾರಾಗಣದಲ್ಲಿ ಇದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !