‘ಬಿಗ್ಬಾಸ್’ ಖ್ಯಾತಿಯ ಪ್ರಥಮ್ ಅಭಿನಯದ ‘ಫಸ್ಟ್ ನೈಟ್ ವಿದ್ ದೆವ್ವ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿಮಾ ಏಪ್ರಿಲ್ 3ರಂದು ತೆರೆಗೆ ಬರಲಿದೆ.

ಚಿತ್ರವನ್ನು ಪಿ.ವಿ.ಆರ್. ಸ್ವಾಮಿ ಗೂಗಾರದೊಡ್ಡಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಪ್ರಥಮ್ ರಚಿಸಿದ್ದಾರೆ. ‘ಚಿತ್ರದ ಡಬ್ಬಿಂಗ್, ಸ್ಯಾಟಲೈಟ್ ಹಕ್ಕುಗಳು ಉತ್ತಮ ಮೊತ್ತಕ್ಕೆ ಮಾರಾಟವಾಗಿವೆ. ಮನರಂಜನೆಯನ್ನೇ ಮುಖ್ಯವಾಗಿಟ್ಟುಕೊಂಡು ಮಾಡಿರುವ ಹಾರರ್ ಕಾಮಿಡಿ ಚಿತ್ರವಿದು. ನಾಯಕನಿಗೆ ಮದುವೆಯಾಗುತ್ತದೆ. ಅದರ ಬೆನ್ನಲ್ಲೇ ತನ್ನ ಹೆಂಡತಿ ದೆವ್ವ ಎಂಬುದು ಆತನಿಗೆ ತಿಳಿಯುತ್ತದೆ. ನಂತರದ ಘಟನೆಗಳೇ ಚಿತ್ರದ ಕಥಾಹಂದರ’ ಎಂದರು ಪ್ರಥಮ್.

ನಿರ್ದೇಶಕ ಪಿ.ವಿ.ಆರ್. ಸ್ವಾಮಿ ಮಾತನಾಡಿ, ‘ಪ್ರಥಮ್ ಒಳ್ಳೆಯ ಮಾತುಗಾರ. ಆದರೆ ಈ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಮಾತು ಕಡಿಮೆ. ನಾನೇ ಛಾಯಾಚಿತ್ರಗ್ರಹಣ ಹಾಗೂ ನಿರ್ದೇಶನವನ್ನೂ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಐದನೇ ಚಿತ್ರ. ಈ ಚಿತ್ರದಲ್ಲಿ ಮಿಮಿಕ್ರಿ ಗೋಪಿ, ತುಕಾಲಿ ಸಂತು, ಸುಶ್ಮಿತಾ ಇವರೆಲ್ಲರ ಪಾತ್ರಗಳು ಚೆನ್ನಾಗಿ ಮೂಡಿಬಂದಿವೆ’ ಎಂದರು.

ಚಿತ್ರದಲ್ಲಿ ಪ್ರಥಮ್ ಅವರ ಪತ್ನಿಯಾಗಿ ನಿಖಿತಾ ಸ್ವಾಮಿ ನಟಿಸಿದ್ದಾರೆ. ಈ ಪಾತ್ರಕ್ಕೆ ಎರಡು ಶೇಡ್ಗಳಿವೆ. ಶ್ರೀನಿವಾಸಮೂರ್ತಿ, ಹರೀಶ್ ರಾಜ್, ರಮೇಶ್ ಭಟ್ ಚಿತ್ರದ ತಾರಾಬಳಗದಲ್ಲಿದ್ದಾರೆ. ಅದ್ವಿಕ್ ವರ್ಮ ಸಂಗೀತ ನಿರ್ದೇಶನ, ನಾಗೇಶ್ ನಾರಾಯಣ್ ಸಂಕಲನ ಹಾಗೂ ಸಂಭಾಷಣೆ, ಥ್ರಿಲ್ಲರ್ ಮಂಜು ಸಾಹಸ ಸಂಯೋಜನೆ ಚಿತ್ರಕ್ಕಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-51-141808743

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.