ಬುಧವಾರ, ಆಗಸ್ಟ್ 4, 2021
24 °C

'ಅಣ್ಣಾತೆ’ ಸಿನಿಮಾ ಸೆಟ್‌ನಲ್ಲಿ ನಾಲ್ಕು ಮಂದಿಗೆ ಕೊರೊನಾ: ಶೂಟಿಂಗ್ ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸೂಪರ್‌ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾತೆ’ ಸಿನಿಮಾದ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಸಿನಿಮಾ ಸೆಟ್‌ನಲ್ಲಿ 4 ಮಂದಿಗೆ ಕೊರೊನಾ ಪಾಸಿಟಿವ್‌ ಬಂದ ಹಿನ್ನೆಲೆಯಲ್ಲಿ ಶೂಟಿಂಗ್‌ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ. ಈ ವಿಷಯವನ್ನು ಅಣ್ಣಾತೆ ನಿರ್ಮಾಣ ಸಂಸ್ಥೆಯಾದ ಸನ್ ಪಿಕ್ಚರ್ಸ್ ತನ್ನ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದೆ. ರಜನಿಕಾಂತ್ ಸೇರಿದಂತೆ ಉಳಿದ ಚಿತ್ರದ ಮಂದಿಗೆ ಕೋವಿಡ್ ನೆಗೆಟಿವ್ ಬಂದಿದೆ.‌

ಈ ಬಗ್ಗೆ ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಸನ್ ಪಿಕ್ಚರ್ಸ್ ‘ಅಣ್ಣಾತೆ ಶೂಟಿಂಗ್ ಸೆಟ್‌ನಲ್ಲಿ ನಡೆಸಿದ ಕೋವಿಡ್‌ ಪರೀಕ್ಷೆಯಲ್ಲಿ 4 ಮಂದಿಗೆ ಪಾಸಿಟಿವ್ ಬಂದಿದೆ. ಸೂಪರ್‌ಸ್ಟಾರ್‌ ರಜನಿಕಾಂತ್ ಸೇರಿದಂತೆ ಉಳಿದವರದ್ದು ನೆಗೆಟಿವ್ ಇದೆ. ಹೆಚ್ಚಿನ ಸುರಕ್ಷತೆಯ ದೃಷ್ಟಿಯಿಂದ ಅಣ್ಣಾತೆ ಶೂಟಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ’ ಎಂದಿದೆ.

ಕೊರೊನಾ ಕಾರಣದಿಂದ ಲಾಕ್‌ಡೌನ್‌ ವಿಧಿಸಿದ್ದ ಸಮಯದಲ್ಲಿ ಅಣ್ಣಾತೆ ಶೂಟಿಂಗ್ ಅನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು. ಡಿಸೆಂಬರ್ 2ನೇ ವಾರದಿಂದ ಶೂಟಿಂಗ್ ಅನ್ನು ಪುನರಾರಂಭಿಸಲಾಗಿತ್ತು. ಹೈದರಾಬಾದ್‌ನಲ್ಲಿ ಶೂಟಿಂಗ್ ಆರಂಭವಾಗಿದ್ದು ರಜನಿಕಾಂತ್, ನಯನತಾರಾ ಮೊದಲಾದವರು ಭಾಗವಹಿಸಿದ್ದರು.

ರಜನಿಕಾಂತ್‌ಗೆ ಹೈದರಾಬಾದ್‌ಗೆ ತೆರಳಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿತ್ತು ಚಿತ್ರತಂಡ. ತಮ್ಮ ಪುತ್ರಿ ಐಶ್ವರ್ಯಾ ಧನುಷ್ ಜೊತೆ ಹೈದರಾಬಾದ್‌ಗೆ ತೆರಳಿದ್ದರು ರಜನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು