ಭಾನುವಾರ, ಡಿಸೆಂಬರ್ 5, 2021
27 °C

ಡಿಸೆಂಬರ್‌ನಲ್ಲಿ ಕತ್ರಿನಾ ಕೈಫ್‌, ವಿಕ್ಕಿ ಕೌಶಲ್‌ ಮದುವೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಿವುಡ್‌ ಬೆಡಗಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್‌ ಬರುವ ಡಿಸೆಂಬರ್‌ ತಿಂಗಳ 7 ಅಥವಾ 12ರಂದು ಮದುವೆಯಾಗಲಿರುವುದು ಬಹುತೇಕ ಖಚಿತವಾಗಿದೆ.

ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ಸರಣಿಯಲ್ಲಿ ವರದಿಗಳನ್ನು ಪ್ರಕಟಿಸುತ್ತಿವೆ.

ವಿಕ್ಕಿ ಹಾಗೂ ಕತ್ರಿನಾ ಅವರು ಸೆಲೆಬ್ರಿಟಿ ಮ್ಯಾನೇಜರ್‌ ಖ್ಯಾತಿಯ ರೆಷ್ಮಾ ಶೆಟ್ಟಿ ಅವರು ವಿನ್ಯಾಸ ಮಾಡಿರುವ ಉಡುಪುಗಳನ್ನು ಧರಿಸಲಿದ್ದಾರೆ ಎಂದು ರೆಷ್ಮಾ ಶೆಟ್ಟಿಯ ಆಪ್ತರು ತಿಳಿಸಿದ್ದಾರೆ. ಇವರ ಮದುವೆ ರಾಜಸ್ತಾನದ ಜೈಪುರದಲ್ಲಿ ನಡೆಯುವುದು ಬಹುತೇಕ ನಿಶ್ಚಿತವಾಗಿದೆ. 

ಮದುವೆ ಕಾರ್ಯಕ್ರಮ ಕುರಿತಂತೆ ವಿಕ್ಕಿ ಹಾಗೂ ಕತ್ರಿನಾ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಮದುವೆಗೆ ಮೊಬೈಲ್‌ ಫೋನ್‌ಗಳನ್ನು ಬ್ಯಾನ್‌ ಮಾಡಲಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.

ಇನ್ನು ಜೈಪುರದ ಖಾಸಗಿ ಹೋಟೇಲ್‌ನಲ್ಲಿ ಮದುವೆಯ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಆದಾಗ್ಯೂ ವಿಕ್ಕಿ ಹಾಗೂ ಕತ್ರಿನಾ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿಗಳು ಹೊರಬಿದ್ದಿಲ್ಲ.

ಇದನ್ನೂ ಓದಿ: 

ಎರಡು ವರ್ಷಗಳಿಂದ ಕತ್ರಿನಾ ಹಾಗೂ ವಿಕ್ಕಿ ಕೌಶಲ್‌ ಡೇಟಿಂಗ್ ಮಾಡುತ್ತಿದ್ದು ಇದೀಗ ಸಪ್ತಪದಿ ತುಳಿಯಲು ಮುಂದಾಗಿದ್ದಾರೆ. 2019ರಲ್ಲಿ ದೀಪಾವಳಿ ಹಬ್ಬದಂದು ಕತ್ರಿನಾ ಅವರು ವಿಕ್ಕಿ ಮನೆಗೆ ಭೇಟಿ ನೀಡಿದ್ದರು. ಅವರ ಕುಟುಂಬಕ್ಕೆ ಕತ್ರಿನಾ ತುಂಬಾ ಹತ್ತಿರವಾಗಿದ್ದಾರೆ.

ಇದನ್ನೂ ಓದಿ: ನಿಶ್ವಿಕಾ ಜೊತೆ ಡಾರ್ಲಿಂಗ್ ಕೃಷ್ಣನ ‘ದಿಲ್‌ ಪಸಂದ್‌’: ಮೋಡಿ ಮಾಡಿದ ಮೊದಲ ನೋಟ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು