‘ಫ್ರೆಂಡ್ಲಿ ಬೇಬಿ’ಯ ಥ್ರಿಲ್ಲರ್ ಕಥೆ

7

‘ಫ್ರೆಂಡ್ಲಿ ಬೇಬಿ’ಯ ಥ್ರಿಲ್ಲರ್ ಕಥೆ

Published:
Updated:

‘ಫ್ರೆಂಡ್ಲಿ ಬೇಬಿ’ ಅಂದಾಕ್ಷಣ ಇದೊಂದು ಮಕ್ಕಳ ಚಿತ್ರವಲ್ಲ. ನೋಟು ರದ್ದತಿಯ ಸಂದರ್ಭದಲ್ಲಿ ದೇಶದಲ್ಲಿ ಉಂಟಾದ ಪ್ರಕ್ಷುಬ್ದತೆ, ಈ ಯೋಜನೆಯನ್ನು ರಾಜಕಾರಣಿಗಳು ಹೇಗೆಲ್ಲ ದುರುಪಯೋಗಪಡಿಸಿಕೊಂಡರು ಎನ್ನುವ ಗಂಭೀರ ವಿಷಯವನ್ನು ಇಟ್ಟುಕೊಂಡು ತಯಾರಾದ ಚಿತ್ರವಿದು. ಇದಕ್ಕೆ ಪರ್ಯಾಯವಾಗಿ ಪತ್ರಕರ್ತೆಯೊಬ್ಬಳ ಬರ್ಬರ ಹತ್ಯೆಯ ಸುತ್ತ ಹೆಣೆದಿರುವ ಎಳೆಯೂ ಇದೆಯಂತೆ. ಈ ಎರಡು ಎಳೆಗಳ ಮಧ್ಯ ಸಿಲುಕಿಕೊಳ್ಳುವ ಅಮಾಯಕ ನಾಯಕ–ನಾಯಕಿ ಅವುಗಳನ್ನು ಹೇಗೆ ಎದುರಿಸುತ್ತಾರೆ ಮತ್ತು ಪರಿಹರಿಸಿಕೊಂಡು ಹೊರಬರುತ್ತಾರೆ ಎನ್ನುವುದೇ ಈ ಚಿತ್ರದ ಕಥೆ. ‘ಇದು ಪಕ್ಕಾ ಥ್ರಿಲ್ಲರ್‌ ಕಥೆ’ ಎಂದರು ನಿರ್ದೇಶಕರು. ಇತ್ತೀಚೆಗೆ ಈ ಚಿತ್ರದ ಧ್ವನಿಸಾಂದ್ರಿಕೆ ಬಿಡುಗಡೆಯಾಯಿತು. 

ಅರ್ಜುನ್‌ ಸುಂದರ್‌ ಮತ್ತು ಜ್ಯೋತಿ ಎಂಬ ಹೊಸ ಪ್ರತಿಭೆಗಳು ಮುಖ್ಯಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮಲಯಾಳಂನ ಕೀರ್ತಿರಾಜ್‌, ತೆಲುಗಿನ ಪವನ್‌ ಮತ್ತು ಚಂದನವನದ ಯತಿರಾಜ್‌ ಮುಖ್ಯ ಖಳನಟನರಾಗಿ ಕಾಣಿಸಿಕೊಂಡಿದ್ದಾರೆ. 

ಟೆನ್ನಿಸ್‌ ಕೃಷ್ಣ ಈ ಚಿತ್ರದಲ್ಲಿ ಇದುವರೆಗೆ ಅಭಿನಯಿಸಿದ ಮಾದರಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಚಿತ್ರದಲ್ಲಿನ ಎರಡು ಐಟಂ ಹಾಡುಗಳಿಗೆ ಆಲಿಶಾ, ಜ್ಯೋತಿರೈ ಹೆಜ್ಜೆ ಹಾಕಿದ್ದಾರಂತೆ. ಆರ್‌. ಮುತ್ತುಕುಮಾರ್ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ರಾಜ್‌ಕಿರಣ್‌ ಸಂಭಾಷಣೆ ಬರೆದಿದ್ದಾರೆ. ವಿಜಯ್‌ ಛಾಯಾಗ್ರಹಣ, ಆಲ್ಡ್ರಿನ್‌ ಸಂಗೀತ ಈ ಚಿತ್ರಕ್ಕಿದೆ.ಡಿ. ವೆಂಕಟೇಶ್‌ ರೆಡ್ಡಿ ಚಿತ್ರಕ್ಕೆ ಹಣ ಹೂಡಿದ್ದಾರೆ. 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !