ಗದಗ: ಚಿನ್ಮಯ ಗಾಯತ್ರಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಗದಗ ಕಲಾವಿದರು ನಿರ್ಮಿಸುತ್ತಿರು 'ಇಕಿ ನಂಗ ಬ್ಯಾಡ' ಕಿರುಚಿತ್ರಕ್ಕೆ ಭಾನುವಾರ ನಗರದ ಕಬಾಡಿ ಬಿಲ್ಡಿಂಗ್ ನಲ್ಲಿರುವ ಶೃದ್ಧಾ ಸ್ವರ ಸಂಗೀತ ವೆಲ್ಫೇರ್ ಟ್ರಸ್ಟಿನ ಸಭಾ ಭವನದಲ್ಲಿ ಮುಹೂರ್ತ ನಡೆಯಿತು.

ಹವ್ಯಾಸಿ ರಂಗಕಲಾವಿದ ಮೌನೇಶ ಸಿ. ಬಡಿಗೇರ (ನರೇಗಲ್) ಇವರ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ನಿದರ್ಶನ ಈ ಚಿತ್ರಕ್ಕಿದೆ. ಸಹ ನಿರ್ದೇಶನ ಹಾಗೂ ಛಾಯಾಗ್ರಾಹಕ ಮಂಜುನಾಥ ಒಂಟೆತ್ತಿನ, ಸುರಜ್ ಮಯೇಕರ ಕಾಸ್ಟೂಮ್ ಡಿಜೈನ್, ಕುಶಾಲ್ ಮಾಣಕೆ ಸಂಕಲನ ಚಿತ್ರಕ್ಕಿದ್ದು, ವಿಷ್ಣುಆಚಾರ್ಯ ನಿರ್ಮಾಣ ಮಾಡಿದ್ದಾರೆ.

ಕಲಾವಿದರಾದ ವಿಶ್ವನಾಥ ಬೇಂದ್ರೆ, ರಾಚಯ್ಯ ಹೊಸಮಠ, ಉಜ್ವಲ ಕಬಾಡಿ, ಪ್ರಶಾಂತ ಹುಬ್ಬಳ್ಳಿ, ಗಣೇಶ್, ವೀರಯ್ಯ ಮಠಪತಿ, ಪಾರ್ವತಿ ಬೆಳಗಲ್, ಸುಮಾ ಪಿಡ್ಡನಗೌಡರ, ಕಮಲಾ ಬೆಳಗಲ್, ಸೂರಜ್ ಮಯೇಕರ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಈ ಕಿರುಚಿತ್ರವು ಆದಷ್ಟು ಬೇಗ ಬಿಡುಗಡೆ ಆಗಲಿದೆ ಎಂದು ತಂಡ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-23-1514513411

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.