‘ದಂಡುಪಾಳ್ಯ’ ಸಿನಿಮಾ ನಿರ್ದೇಶಕ ಶ್ರೀನಿವಾಸರಾಜು ಈ ಹಿಂದೆ ‘ಕೃಷ್ಣಂ ಪ್ರಣಯ ಸಖಿ’ ಸಿನಿಮಾವನ್ನು ಟ್ರೇಲರ್ ಬಿಡುಗಡೆಗೊಳಿಸದೆ ತೆರೆಗೆ ತಂದಿದ್ದರು. ‘ದ್ವಾಪರ..’, ‘ಚಿನ್ನಮ್ಮ..’ ಹಾಡುಗಳೇ ಈ ಸಿನಿಮಾಗೆ ಆಮಂತ್ರಣವಾಗಿದ್ದವು. ಇದೀಗ ಮತ್ತೊಮ್ಮೆ ಹಾಡುಗಳ ಲೋಕದಲ್ಲೇ ‘ಬೃಂದಾವಿಹಾರಿ’ಯ ದರ್ಶನ ಮಾಡಿಸಲು ಅವರು ಸಜ್ಜಾಗಿದ್ದಾರೆ.

ಶ್ರೀನಿವಾಸರಾಜು ಮತ್ತೊಮ್ಮೆ ಗಣೇಶ್ ಅವರೊಂದಿಗೆ ಸಿನಿಮಾ ಮಾಡಿದ್ದು, ಇತ್ತೀಚೆಗೆ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿದೆ. ‘ಬೃಂದಾವಿಹಾರಿ’ ಸಿನಿಮಾ ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಸಮೃದ್ಧಿ ವಿ.ಮಂಜುನಾಥ್ ನಿರ್ಮಾಣ ಮಾಡುತ್ತಿರುವ ಈ ಸಿನಿಮಾ ಪ್ರೇಮಕಥೆಯನ್ನು ಹೊತ್ತ ಕೌಟುಂಬಿಕ ಸಿನಿಮಾವಾಗಿದೆ. ಗಣೇಶ್ ಅವರಿಗೆ ನಾಯಕಿಯರಾಗಿ ದೇವಿಕಾ ಭಟ್ ಹಾಗೂ ಮಾಳವಿಕ ಶರ್ಮ ಅಭಿನಯಿಸಿದ್ದಾರೆ. ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನೂ ಶ್ರೀನಿವಾಸರಾಜು ಬರೆದಿದ್ದು, ಸಿನಿಮಾ ಬಗ್ಗೆ ಅವರು ಮಾತಿಗಿಳಿದಾಗ...

‘ಹಾಡುಗಳು, ಶೀರ್ಷಿಕೆ, ಸಿನಿಮಾ ಬಂದ ಮೇಲೆ ಸದ್ದು ಮಾಡಬೇಕು. ಸದ್ಯ ‘ಬೃಂದಾವಿಹಾರಿ’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ಐಪಿಎಲ್ ಮುಗಿದ ಕೂಡಲೇ ಅಂದರೆ ಎರಡು ತಿಂಗಳ ನಂತರ ತೆರೆಗೆ ಬರಲಿದೆ. ಗಣೇಶ್ ಅವರ ಎರಡು ಸಿನಿಮಾಗಳು ಆದ ಬಳಿಕ ನನ್ನ ಸಿನಿಮಾ ಬರಲಿದೆ ಎಂದುಕೊಂಡಿದ್ದೆ. ಆದರೆ ಕಾರಣಾಂತರಗಳಿಂದ ಅವುಗಳು ವಿಳಂಬವಾದವು. ಹೀಗಾಗಿ ‘ಬೃಂದಾವಿಹಾರಿ’ಯು ಗಣೇಶ್ ಅವರ ಮುಂದಿನ ಸಿನಿಮಾವಾಗಲಿದೆ. ಸರಣಿಯಾಗಿ ಸಿನಿಮಾ ಮಾಡಲು ನಾನು ಗಣೇಶ್ ಮಾತನಾಡಿಕೊಂಡಿದ್ದೆವು. ನಾನು ನನ್ನ ಮಾದರಿಯ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದೆ. ಅದರ ಬರವಣಿಗೆಯಲ್ಲಿ ಇನ್ನೂ ಕೊಂಚ ಬದಲಾವಣೆ, ತಯಾರಿ ಬೇಕೆಂದೆನಿಸಿತು. ಈ ಅಂತರದಲ್ಲಿ ‘ಬೃಂದಾವಿಹಾರಿ’ ಕಥೆ ಮಾಡಿದೆ. ಒಂದು ಹಿಟ್ ನೀಡಿದ ನಟ–ನಿರ್ದೇಶಕನ ಕಾಂಬಿನೇಷನ್ನ ಸಿನಿಮಾಗೆ ಜನ ಕಾಯುತ್ತಿರುತ್ತಾರೆ. ಗಣೇಶ್ ಅವರ ಮುಂದಿನ ಸಿನಿಮಾ ನನ್ನದೇ ಆಗಲಿದೆ ಎಂದುಕೊಂಡಿರಲಿಲ್ಲ. ಅದು ಆಕಸ್ಮಿಕ’ ಎನ್ನುತ್ತಾರೆ ಶ್ರೀನಿವಾಸರಾಜು.

ಕೌಟುಂಬಿಕ ಸಿನಿಮಾ ಬೇಕಾಗಿದೆ

ಗಣೇಶ್ ಅವರು ಈ ಹಿಂದೆ ‘ಕೃಷ್ಣ’, ‘ಕೃಷ್ಣಂ ಪ್ರಣಯ ಸಖಿ’ ಮಾಡಿ ಇದೀಗ ಮತ್ತೊಮ್ಮೆ ಕೊಳಲು ಹಿಡಿದಿದ್ದಾರೆ. ಈ ಬಗ್ಗೆ ವಿವರ ನೀಡಿದ ಶ್ರೀನಿವಾಸರಾಜು, ‘ಶೀರ್ಷಿಕೆ ಜನರನ್ನು ಸೆಳೆಯುವಂತಿರಬೇಕು, ಭಿನ್ನವಾಗಿರಬೇಕು. ಅದು ಕೇಳಲೂ ಇಂಪಾಗಿರಬೇಕು. ಹೀಗಾಗಿ ಈ ಶೀರ್ಷಿಕೆ ಇಟ್ಟೆ. ಕಥೆ, ಅದರೊಳಗಿನ ಗಣೇಶ್ ಅವರ ಪಾತ್ರವು ಶೀರ್ಷಿಕೆಗೆ ಬಹಳ ಹೋಲಿಕೆಯಾಗುತ್ತದೆ. ಸದ್ಯ ಕೌಟುಂಬಿಕ ಸಿನಿಮಾಗಳು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕಿದೆ. ಜನರೂ ಈ ಶೀರ್ಷಿಕೆ ಮೆಚ್ಚಿದ್ದಾರೆ’ ಎಂದರು.

‘ಈ ರೀತಿ ಪ್ರೇಮಕಥೆಯ ಜೊತೆಗೆ ನನ್ನ ಮಾದರಿಯ, ಅಂದರೆ ‘ದಂಡುಪಾಳ್ಯ’ ಜಾನರ್ನ ಸಿನಿಮಾಗಳನ್ನು ಮಾಡುವುದು ನನ್ನ ಆಸೆ. ಅಂತಹ ಕಥೆಯೊಂದನ್ನು ಸಿದ್ಧಪಡಿಸಿದ್ದೇನೆ. ಅದರ ಬರವಣಿಗೆ ಇನ್ನಷ್ಟು ಗಟ್ಟಿ ಮಾಡಿಕೊಳ್ಳಬೇಕಿದೆ. ‘ಬೃಂದಾವಿಹಾರಿ’ ಬಳಿಕ ಆ ಕಥೆಯನ್ನೇ ಕೈಗೆತ್ತಿಕೊಳ್ಳಲಿದ್ದೇನೆ’ ಎಂದರು ಶ್ರೀನಿವಾಸರಾಜು.

ಚಿತ್ರಕ್ಕೆ ಮಲಯಾಳದ ‘ಹೃದಯಂ’ ಸಿನಿಮಾ ಖ್ಯಾತಿಯ ಹೇಶಮ್ ಅಬ್ದುಲ್ ವಹಾಬ್ ಸಂಗೀತ ಸಂಯೋಜಿಸಿದ್ದಾರೆ, ವೆಂಕಟ್ ಪ್ರಸಾದ್ ಛಾಯಾಚಿತ್ರಗ್ರಹಣವಿದೆ.

ಸಿನಿಮಾದಲ್ಲಿ ಏಳು ಹಾಡುಗಳು

‘ಕೃಷ್ಣಂ ಪ್ರಣಯ ಸಖಿ’ಯಲ್ಲಿ ಏಳೆಂಟು ಹಾಡುಗಳಿದ್ದವು. ಅದರಲ್ಲಿ ವಿ.ನಾಗೇಂದ್ರ ಪ್ರಸಾದ್ ಅವರು ಬರೆದ ‘ದ್ವಾಪರ ದಾಟುತ..’ ಹಾಡು ಹಿಟ್ ಆಗಿತ್ತು. ‘ಬೃಂದಾವಿಹಾರಿ’ ಯಲ್ಲೂ ಏಳು ಹಾಡುಗಳು ಇರಲಿವೆ. ಇವುಗಳೆಲ್ಲವುದಕ್ಕೂ ವಿ.ನಾಗೇಂದ್ರ ಪ್ರಸಾದ್ ಅವರೇ ಸಾಹಿತ್ಯ ಬರೆಯಲಿದ್ದಾರೆ. ‘ಎಲ್ಲಾ ಕೌಟುಂಬಿಕ, ಪ್ರೇಮಕಥೆಯ ಸಿನಿಮಾಗಳಿಗೂ ಹಾಡುಗಳೇ ಆಮಂತ್ರಣ. ಇದೊಂದು ಸೂತ್ರವಲ್ಲ ಬದಲಾಗಿ ಹಾಡುಗಳು ನಮ್ಮ ರಕ್ತದಲ್ಲೇ ಇವೆ. ಏಳೂ ಹಾಡುಗಳನ್ನು ನಾಗೇಂದ್ರ ಪ್ರಸಾದ್ ಅವರೆ ಬರೆದಿದ್ದಾರೆ. ಸಾಹಿತ್ಯ ಬರೆಯುವವರು ಕಥೆಯ ಜೊತೆ ಕೊನೆಯವರೆಗೂ ಪ್ರಯಾಣ ಮಾಡಿ, ಅನುಭವಿಸಿ ಬರೆಯಬೇಕು ಎನ್ನುವ ಕಾರಣಕ್ಕೆ ಒಬ್ಬರಿಂದಲೇ ಬರೆಸಿದ್ದೇನೆ’ ಎನ್ನುತ್ತಾರೆ ನಿರ್ದೇಶಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.