ತುಪ್ಪದ ರಾಣಿಯ ಟೆರರಿಸ್ಟ್‌ ಲುಕ್

7

ತುಪ್ಪದ ರಾಣಿಯ ಟೆರರಿಸ್ಟ್‌ ಲುಕ್

Published:
Updated:
Deccan Herald

ಅದು ‘ದಿ ಟೆರರಿಸ್ಟ್’ ಚಿತ್ರದ ಸುದ್ದಿಗೋಷ್ಠಿ. ನಾಯಕಿ ರಾಗಿಣಿ ದ್ವಿವೇದಿ ರೇಷ್ಮೆಸೀರೆ ಉಟ್ಟುಕೊಂಡು ಹಾಜರಾಗಿದ್ದರು. ಪೋಸ್ಟರ್‌ ಬಿಡುಗಡೆಗೆ ಆಗಮಿಸಿದ್ದ ಹಿರಿಯ ನಟ ಅಂಬರೀಷ್, ‘ನಾನು ಚಿತ್ರದ ಹೆಸರು ಟೂರಿಸ್ಟ್ ಎಂದುಕೊಂಡಿದ್ದೆ. ಟೆರರಿಸ್ಟ್ ಎಂದು ಗೊತ್ತಾಗಿದ್ದರೆ ಖಂಡಿತ ಬರುತ್ತಿರಲಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಪ್ರಸ್ತುತ ಯುವ ನಿರ್ದೇಶಕರು ಹೊಸ ಕತೆಗಳನ್ನು ತರುತ್ತಿದ್ದಾರೆ. ತಂತ್ರಜ್ಞಾನ ಕೂಡ ಅಗಾಧವಾಗಿ ಬೆಳೆದಿದೆ. ಒಳ್ಳೆಯ ಚಿತ್ರಗಳು ನಿರ್ಮಾಣವಾಗುತ್ತಿರುವುದು ಖುಷಿ ತಂದಿದೆ’ ಎಂದರು. ‘ನಾನು ಖಳನಟನಾಗಿ ಚಿತ್ರರಂಗ ಪ್ರವೇಶಿಸಿದೆ. ಪೋಷಕ ನಟ, ನಾಯಕ, ಜನನಾಯಕನಾಗಿ ಇಲ್ಲಿಯವರೆಗೂ ಬಂದಿದ್ದೇನೆ. ಚಿತ್ರರಂಗ ಬೆಳೆಯಬೇಕು. ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಒಳ್ಳೆಯ ಹೆಸರು ಬರಬೇಕು’ ಎಂದು ಆಶಿಸಿದರು. 

ನಿರ್ದೇಶಕ ಪಿ.ಸಿ. ಶೇಖರ್, ‘ಇದು ನೈಜ ಘಟನೆ ಆಧಾರಿತ ಚಿತ್ರ. ಭಯೋತ್ಪಾದನೆಯಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಹೇಳಲಾಗಿದೆ. ಮಹಿಳೆಯ ನೋವು, ಭಾವನೆಗಳನ್ನು ಚಿತ್ರಿಸಲಾಗಿದೆ. ಶೀಘ್ರವೇ, ಚಿತ್ರದ ಆಡಿಯೊ ಬಿಡುಗಡೆ ಮಾಡಲಾಗುವುದು’ ಎಂದು ವಿವರಿಸಿದರು.

ರಾಗಿಣಿ ದ್ವಿವೇದಿ ಮೊದಲ ಬಾರಿಗೆ ಈ ಚಿತ್ರದಲ್ಲಿ ಮುಸ್ಲಿಂ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಬೆಂಗಳೂರಿನ ಕೆ.ಆರ್. ಮಾರ್ಕೆಟ್, ಮೆಟ್ರೊ ನಿಲ್ದಾಣದ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದು ಖುಷಿ ನೀಡಿತು. ನಾಲ್ಕು ಕ್ಯಾಮೆರಾ ಬಳಸಿ ಜನರಿಗೆ ಗೊತ್ತಿಲ್ಲದಂತೆ ಶೂಟಿಂಗ್ ನಡೆಸಲಾಗಿದೆ’ ಎಂದು ಹೇಳಿದರು. 

ಪ್ರದೀಪ್‍ ವರ್ಮ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಮುರಳಿ ಕ್ರಿಷ್ ಅವರದ್ದು. ಡಿ. ಸರವಣನ್ ಸಂಕಲನದ ಹೊಣೆ ಹೊತ್ತಿದ್ದಾರೆ. ಸಚ್ಚಿನ್ ಬಿ. ಹೊಳಗುಂದಿ ಅವರ ಸಂಭಾಷಣೆ ಈ ಚಿತ್ರಕ್ಕಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !