ಗುರುವಾರ , ಆಗಸ್ಟ್ 22, 2019
21 °C

ಶ್ರೀಲಂಕಾದಲ್ಲಿ ಕಾಡಿದ ದೆವ್ವ

Published:
Updated:

ಪ್ರೀತಿಯ ಜೊತೆಗೆ ಎಮೋಷನ್‌ ಬೆರೆಸಿ ಜನರಿಗೆ ರಂಜನೆ ಉಣಬಡಿಸುತ್ತಿದ್ದ ನಟ ಗಣೇಶ್‌ ‘ಗಿಮಿಕ್’ ಮೂಲಕ ಹಾರರ್‌ ಹಾದಿಗೆ ಹೊರಳಿದ್ದಾರೆ. ಶ್ರೀಲಂಕಾದಲ್ಲಿ ಇರುವ 100 ವರ್ಷದಷ್ಟು ಹಳೆಯದಾದ ದೊಡ್ಡ ಬಂಗಲೆಯಲ್ಲಿ ಈ ಚಿತ್ರದ ಚಿತ್ರೀಕರಣ ನಡೆದಿರುವುದು ವಿಶೇಷ.

ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಮೈಕ್‌ ಕೈಗೆತ್ತಿಕೊಂಡ ನಿರ್ದೇಶಕ ನಾಗಣ್ಣ, ‘ಸಿದ್ಧ ಮಾದರಿಯ ಹಾರರ್‌ ಚಿತ್ರಗಳಿಗಿಂತ ಭಿನ್ನವಾಗಿ ಈ ಸಿನಿಮಾ ನಿರ್ಮಿಸಲಾಗಿದೆ’ ಎಂದರು.ನಟ ರವಿಶಂಕರ್‌ ಗೌಡ ಬಂಗಲೆಯಲ್ಲಿ ದೆವ್ವದಿಂದ ಹೆದರಿದ ಅನುಭವ ಬಿಚ್ಚಿಟ್ಟರು. ‘ದೊಡ್ಡದಾದ ಆ ಬಂಗಲೆಯಲ್ಲಿ ಗಾಢವಾದ ಕತ್ತಲು ಆವರಿಸಿತ್ತು. ಬಾಗಿಲಿನಿಂದ ನಡೆದುಕೊಂಡು ಬಂದು ಸಿಗರೇಟ್‌ ಲೈಟರ್‌ ಹಚ್ಚುವ ದೃಶ್ಯವದು. ನಾನು ಆ ಲೈಟರ್‌ನಿಂದ ಹೊತ್ತುವ ಬೆಳಕನ್ನು ಮಾತ್ರವೇ ಶೂಟ್‌ ಮಾಡುವುದಾಗಿ ನಾಗಣ್ಣ ಹೇಳಿದ್ದರು. ನಾನು ಅವರು ಹೇಳಿದಂತೆಯೇ ಮಾಡಿದೆ. ಆಗ ನನ್ನ ಎದುರಿಗೆ ಕಂಡ ದೆವ್ವದ ಪ್ರತಿರೂಪ ನೋಡಿ ಬೆವತು ಹೋದೆ’ ಎಂದರು.

ನಟ ಗಣೇಶ್‌ಗೆ ರೋನಿಕಾ ಸಿಂಗ್ ನಾಯಕಿಯಾಗಿ ನಟಿಸಿದ್ದಾರೆ. ದೀಪಕ್‌ ಸಾಮಿ ಬಂಡವಾಳ ಹೂಡಿದ್ದಾರೆ. ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. 

Post Comments (+)