ನಟ ಪ್ರಕಾಶ್‌ ರಾಜ್‌ಗೆ ಕಾರ್ನಾಡರು ಬರೆದ ಅಪರೂಪದ ಪತ್ರ

ಬುಧವಾರ, ಜೂನ್ 19, 2019
22 °C

ನಟ ಪ್ರಕಾಶ್‌ ರಾಜ್‌ಗೆ ಕಾರ್ನಾಡರು ಬರೆದ ಅಪರೂಪದ ಪತ್ರ

Published:
Updated:

‘ಕನ್ನಡವನ್ನು... ಕನ್ನಡಿಗರನ್ನು... ಕರ್ನಾಟಕವನ್ನು... ಶ್ರೀಮಂತಗೊಳಿಸುತ್ತಾ ಬಾಳಿ ಬದುಕಿದ ಅದಮ್ಯ ಚೇತನ ಕಾರ್ನಾಡರಿಗೆ ನಮನ’ ಎಂದು ನಟ ಪ್ರಕಾಶ್‌ ರಾಜ್‌ ಟ್ವಿಟರ್‌ನಲ್ಲಿ ಕಾರ್ನಾಡರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಜೊತೆಗೆ, ಅವರಿಗೆ ಐವತ್ತು ವರ್ಷ ತುಂಬಿದ ವೇಳೆ ಬರೆದ ಪತ್ರವೊಂದನ್ನೂ ಅವರು ಹಂಚಿಕೊಂಡಿದ್ದಾರೆ.

‘ನಿಮಗೆ ಐವತ್ತು ತುಂಬಿತೇ? ನಂಬಲಾಗುವುದಿಲ್ಲ. ಐವತ್ತು ತಲುಪುವುದೇನು ಕಠಿಣ ಮಾತಲ್ಲ, ನಿಜ. ಆರೋಗ್ಯವಾಗಿದ್ದರೆ ಯಾರಾದರೂ ಈ ಅಂಕಿ ಮುಟ್ಟಬಹುದು. ಆದರೆ ನೀವು ಮಾತ್ರ ಈ ಐವತ್ತರಲ್ಲಿ ಎಷ್ಟೆಲ್ಲ ಯಶಸ್ಸನ್ನು, ಪ್ರತಿಭೆಯನು ತುಂಬಿದ್ದೀರಿ! ನೀವು ದಿನೇ ದಿನೇ ಬೆಳೆಯುತ್ತಾ, ಭಾರತದುದ್ದಕ್ಕೂ ರೆಂಬೆ ಕೊಂಬೆಗಳನ್ನು ಚಾಚುತ್ತಿರುವುವನ್ನು ನಿಮ್ಮ ಮಿತ್ರರಾದ ನಾನು ದೂರದಿಂದ, ಸಮಾಜದಿಂದ ನೋಡಿ ನಲಿದಿದ್ದೇನೆ, ಹೆಮ್ಮೆಯಿಂದ ಬೀಗಿದ್ದೇನೆ. ಹೀಗೆಯೇ ಉತ್ತರೋತ್ತರ ಬೆಳೆಯುತ್ತೀರಿ ಬೆಳಗುತ್ತಿರಿ ಬೆಳಗುತ್ತಲೇ ನೂರನ್ನು ದಾಟಿ ಹೋಗಿರಿ’ 

ನಿಮ್ಮ ಗಿರೀಶ ಕಾರ್ನಾಡ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 2

  Sad
 • 1

  Frustrated
 • 2

  Angry

Comments:

0 comments

Write the first review for this !