ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧ್ರುವ ಸರ್ಜಾಗೆ ರಶ್ಮಿಕಾ ಪ್ರೇಮಪಾಠ

Last Updated 22 ಡಿಸೆಂಬರ್ 2018, 6:04 IST
ಅಕ್ಷರ ಗಾತ್ರ

‘ಕನಸಲ್ಲಿ (ಅರೆರೆರೆರೆ...) ಬಳಿ ಬಂದು (ಅಲೆಲೆಲೆಲೆ...) ಮುದ್ದಾಡಿ (ಅಯ್ಯಯ್ಯಯ್ಯಯ್ಯೊ...) ಕಚಗುಳಿ ತಾಳಲಾರೆ‘ ಎಂದು ಹರೆಯದವರು ಎದೆಯೊಳಗೇ ಮುಲಮುಲ ಮುಲುಕಾಟ ಎಬ್ಬಿಸಿದ ಚೆಲುವೆ ರಶ್ಮಿಕಾ ಮಂದಣ್ಣ. ಆದರೆ ‘ಕಿರಿಕ್‌ ಪಾರ್ಟಿ‘ಯ ಪ್ರೇಮಗೀತೆ ಬದುಕಿನಲ್ಲಿಯೂ ರಿಂಗಣಿಸಿ ರಕ್ಷಿತ್ ಜೊತೆ ಉಂಗುರ ಬದಲಾಯಿಸಿಕೊಂಡಾಗ ಅದೇ ಹುಡುಗರ ಎದೆ ಒಮ್ಮೆ ವಿಲವಿಲ ಅಂದಿದ್ದೂ ಅಷ್ಟೇ ಸತ್ಯ.

ಆ ನಿಶ್ವಿತಾರ್ಥ ಕೆಲವೇ ದಿನಗಳಲ್ಲಿ ಮುರಿದುಹೋಯ್ತು. ತೆಲುಗಿನ ‘ಗೀತಗೋವಿಂದ‘ ಚಿತ್ರದ ಭರ್ಜರಿ ಯಶಸ್ಸಿನ ನಂತರ ರಶ್ಮಿಕಾ ಮಂದಣ್ಣ ಮತ್ತೆ ಕನ್ನಡದ ಕಡೆಗೆ ಹೊರಳಿ ನೋಡೋದಿಲ್ಲ ಎಂಬ ಹಲವರ ಊಹೆ ತಪ್ಪಾಗುವಂತೆ ಅವರು ಧ್ರುವ ಸರ್ಜಾ ಜತೆ ‘ಪೊಗರು‘‍ ಚಿತ್ರದಲ್ಲಿ ತೆರೆ ಹಂಚಿಕೊಳ್ಳಲು ಒಪ್ಪಿಕೊಂಡಿದ್ದರು.

‘ಪೊಗರು’ ಚಿತ್ರಕ್ಕೋಸ್ಕರ ಉದ್ದ ಗಡ್ಡ ಬಿಟ್ಟು, ಧ್ರುವ ಪಕ್ಕಾ ಮಾಸ್‌ ಹುಡುಗನ ಅವತಾರ ತಳೆದಿದ್ದರು. ಹಾಗಿದ್ದರೆ ಕುಸುಮಕೋಮಲೆ ರಶ್ಮಿಕಾ ಪಾತ್ರ ಹೇಗಿರಬಹುದು ಎಂಬ ಕುತೂಹಲ ಇದ್ದೇ ಇತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ‘ಕಿರಿಕ್‌ ಪಾರ್ಟಿ’ಯಲ್ಲಿ ಪರಮ ಮುಗ್ಧೆ ಹುಡುಗಿಯಾಗಿ ಕಾಣಿಸಿಕೊಂಡಿದ್ದ ರಶ್ಮಿಕಾ, ‘ಪೊಗರು’ವಿನಲ್ಲಿ ಲೆಕ್ಚರರ್ ಅಂತೆ. ಹಾಗಿದ್ದರೆ ಕಿರಿಕ್‌ ಪಾರ್ಟಿಯ ಕನ್ನಡಕವನ್ನು ಅವರು ಇಲ್ಲಿಯೂ ಬಳಸಬಹುದು! ‘ರಶ್ಮಿಕಾ ಈ ಚಿತ್ರದಲ್ಲಿ ಕಾಲೇಜು ಉಪನ್ಯಾಸಕಿ ಪಾತ್ರದಲ್ಲಿ ನಟಿಸುತ್ತಿದ್ದಾರೆ‘ ಎಂದು ಒಂದೇ ಸುಳಿವನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಹಾಗಿದ್ದರೆ ಧ್ರುವ ಸರ್ಜಾ ಪೋಕರಿ ವಿದ್ಯಾರ್ಥಿ ಆಗಿರುತ್ತಾರಾ ಎಂದು ಕೇಳಿದರೆ ಅದು ನಿಮ್ಮ ಊಹಗೆ ಬಿಟ್ಟಿದ್ದು. ವಿದ್ಯಾರ್ಥಿ ಆಗುತ್ತಾರೋ ಇಲ್ಲವೋ ಗೊತ್ತಿಲ್ಲ, ಆದರೆ ಒರಟು ಹುಡುಗನಿಗೆ ರಶ್ಮಿಕಾ ತೆರೆಯ ಪ್ರೇಮದ ಪಾಠವನ್ನು ಮಾಡುವುದಂತೂ ಖಚಿತ.

ದರ್ಶನ್‌ ಅಭಿನಯದ ’ಯಜಮಾನ‘ ಚಿತ್ರದಲ್ಲಿಯೂ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ತೆಲುಗಿನ ವಿಜಯ ದೇವರಕೊಂಡ ಅವರ ಜತೆ ಇನ್ನೊಂದು ಸಿನಿಮಾದಲ್ಲಿಯೂ ಅವರು ಬಿಜಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT