ಗಣೇಶ್‌ ಅಭಿನಯದ ‘99’ ಚಿತ್ರ 26ಕ್ಕೆ ಬಿಡುಗಡೆ

ಶುಕ್ರವಾರ, ಏಪ್ರಿಲ್ 19, 2019
27 °C
ಅರ್ಜುನ್‌ ಜನ್ಯ ಸಂಗೀತ ಸಂಯೋಜನೆಯ 100ನೇ ಚಿತ್ರ

ಗಣೇಶ್‌ ಅಭಿನಯದ ‘99’ ಚಿತ್ರ 26ಕ್ಕೆ ಬಿಡುಗಡೆ

Published:
Updated:
Prajavani

‘ಗೋಲ್ಡನ್‌ ಸ್ಟಾರ್’ ಗಣೇಶ್‌ ಮತ್ತು ನಟಿ ಭಾವನಾ ಜೊತೆಯಾಗಿ ನಟಿಸಿರುವ ‘99’ ಸಿನಿಮಾ ಇದೇ 26ರಂದು ಬಿಡುಗಡೆಯಾಗಲಿದೆ. ಇದು ಕಳೆದ ವರ್ಷ ತೆರೆಕಂಡ ತಮಿಳಿನ ‘96’ ಚಿತ್ರದ ರಿಮೇಕ್. ಸೇತುಪತಿ ಮತ್ತು ತ್ರಿಶಾ ನಟಿಸಿದ್ದ ಈ ಚಿತ್ರ ಸೂಪರ್‌ ಹಿಟ್‌ ಆಗಿತ್ತು.

ಕಳೆದ ವರ್ಷ ಗಣೇಶ್‌ ನಟನೆಯ ‘ಆರೆಂಜ್‌’ ಚಿತ್ರ ಬಿಡುಗಡೆಯಾಗಿತ್ತು. ಆದರೆ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿರಲಿಲ್ಲ. ಇದು ಈ ವರ್ಷ ಬಿಡುಗಡೆಯಾಗುತ್ತಿರುವ ಗೋಲ್ಡನ್‌ ಸ್ಟಾರ್‌ ಅವರ ಮೊದಲ ಸಿನಿಮಾ. ಪ್ರೀತಮ್‌ ಗುಬ್ಬಿ ಈ ಚಿತ್ರ ನಿರ್ದೇಶಿಸಿದ್ದಾರೆ. ಅಂದಹಾಗೆ ಗಣೇಶ್‌ ನಟಿಸಿದ್ದ ‘ಮಳೆಯಲಿ ಜೊತೆಯಲಿ’, ‘ದಿಲ್ ರಂಗೀಲಾ’ ಚಿತ್ರಕ್ಕೂ ಪ್ರೀತಮ್‌ ಅವರೇ ಆಕ್ಷನ್‌ ಕಟ್‌ ಹೇಳಿದ್ದರು. ‘99’ ಮೂಲಕ ಈ ಜೋಡಿ ಮತ್ತೆ ಒಂದಾಗಿದೆ. 

‘ರೋಮಿಯೊ’ ಚಿತ್ರದ ಬಳಿಕ ಭಾವನಾ ಅವರು ಗಣೇಶ್‌ಗೆ ಮತ್ತೆ ಜೊತೆಯಾಗಿದ್ದಾರೆ. ಈಗಾಗಲೇ, ಚಿತ್ರದ ಹಾಡುಗಳು ಅಭಿಮಾನಿಗಳಿಗೆ ರಸದೌತಣ ಉಣಬಡಿಸಿವೆ. ಅರ್ಜುನ್‌ ಜನ್ಯ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಅಂದಹಾಗೆ ಇದು ಅವರು ಸಂಗೀತ ಸಂಯೋಜನೆಯ ನೂರನೇ ಚಿತ್ರ ಎನ್ನುವುದು ವಿಶೇಷ.

ಈ ಚಿತ್ರಕ್ಕೆ ರಾಮು ಆರ್ಥಿಕ ಇಂಧನ ಒದಗಿಸಿದ್ದಾರೆ. ಸಂತೋಜ್‌ ರೈ ಪತಾಜೆ ಅವರ ಛಾಯಾಗ್ರಹಣವಿದೆ.

ಗಣೇಶ್‌ ನಟಿಸಿರುವ ‘ಗಿಮಿಕ್‌’ ಚಿತ್ರ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ಬಹುನಿರೀಕ್ಷಿತ ‘ಗೀತಾ’ ಮತ್ತು ‘ವೇರ್‌ ಈಸ್ ಮೈ ಕನ್ನಡಕ’ ಚಿತ್ರದ ಶೂಟಿಂಗ್‌ ಕೂಡ ನಡೆಯುತ್ತಿದೆ. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !