'ದುರಂತ ನಾಯಕಿ’ ಮೀನಾಕುಮಾರಿಗೆ ಡೂಡಲ್‌ ಗೌರವ

7

'ದುರಂತ ನಾಯಕಿ’ ಮೀನಾಕುಮಾರಿಗೆ ಡೂಡಲ್‌ ಗೌರವ

Published:
Updated:

ಬೆಂಗಳೂರು: ಬಾಲಿವುಡ್‌ ನೆನಪಿನ ಪುಟಗಳಲ್ಲಿ ‘ದುರಂತ ನಾಯಕಿ’ ಎಂದೇ ಖ್ಯಾತರಾಗಿರುವ ನಟಿ ಮೀನಾಕುಮಾರಿ ಅವರ 85ನೇ ಜನ್ಮದಿನವನ್ನು ಗೂಗಲ್‌ ಡೂಡಲ್‌ ಮೂಲಕ ಆಚರಿಸಿ ಗೌರವಿಸಿದೆ.

1933ರ ಆಗಸ್ಟ್‌ 31ರಂದು ಜನಿಸಿದ್ದ ಮೀನಾಕುಮಾರಿ ಒಟ್ಟು 92 ಸಿನಿಮಾಗಳಿಗೆ ಬಣ್ಣ ಹಚ್ಚಿದ್ದರು.

ಸಾಹಿಬ್‌ ಬೀಬಿ ಔರ್‌ ಗುಲಾಂ, ಪಕೀಜ್ಹಾ, ಮೇರೆ ಅಪ್ನೆ, ಆರ್ತಿ, ಬೈಜು ಬಾವ್ರಾ, ಪರಿಣಿತಾ, ದಿಲ್‌ ಅಪ್ನಾ ಔರ್‌ ಪ್ರೀತ್‌ ಪರಾಯಿ, ಫುಟ್‌ಪಾತ್‌, ದಿಲ್‌ ಏಕ್‌ ಮಂದಿರ್‌, ಕಾಜಲ್‌ ಮೀನಾಕುಮಾರಿ ಅವರಿಗೆ ಹೆಸರು ತಂದುಕೊಟ್ಟ ಸಿನಿಮಾಗಳು.

ನಿರ್ಮಾಪಕ ಕಮಲ್‌ ಅಮ್ರೋಹಿ ಅವರನ್ನು ವಿವಾಹವಾಗಿದ್ದ ಇವರು ಮಾರ್ಚ್‌ 1972ರಲ್ಲಿ ತಮ್ಮ 38ನೇ ವಯಸ್ಸಿಗೆ ನಿಧನರಾದರು.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !