ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಗೋಪಿ ಮುದುಕನ ಪಾತ್ರದಲ್ಲಿ ಅಮಿತಾಭ್‌!

ಶಾಕ್‌ ನೀಡಿದ ‘ಗುಲಾಬೊ ಸಿತಾಬೊ‘ ಪಸ್ಟ್‌ ಲುಕ್‌
Last Updated 23 ಜೂನ್ 2019, 19:45 IST
ಅಕ್ಷರ ಗಾತ್ರ

ನಟ ಆಯುಷ್ಮಾನ್‌ ಖುರಾನಾ ಅಭಿಯನದ ‘ಗುಲಾಬೊ ಸಿತಾಬೊ‘ ಚಿತ್ರದ ಪಸ್ಟ್‌ ಲುಕ್‌ ಸೋರಿಕೆಯಾಗಿದ್ದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿವೈರಲ್‌ ಆಗಿದೆ.

ಪೋಸ್ಟರ್‌ನಲ್ಲಿರುವ ಉದ್ದನೆಯ ಮೂಗಿನ ಗಡ್ಡಧಾರಿ ಮುಸ್ಲಿಂ ವಯೋವೃದ್ಧ ಯಾರಿರಬಹುದು ಎಂಬ ಕುತೂಹಲ ಹುಟ್ಟು ಹಾಕಿದೆ. ಪೋಸ್ಟರ್‌ನಲ್ಲಿರುವ ಆ ವೃದ್ಧ ವ್ಯಕ್ತಿಅಮಿತಾಭ್‌ ಬಚ್ಚನ್‌ ಎಂದು ಊಹಿಸುವುದು ಯಾರಿಂದಲೂ ಸಾಧ್ಯವಿಲ್ಲ!

‘ಪಾ’ ಚಿತ್ರದ ನಂತರ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವ ಅಮಿತಾಭ್‌ ಅವರಿಗೆ ಮೇಕಪ್‌ ಮಾಡಲು ಹಾಲಿವುಡ್‌ನ ಮೇಕಪ್‌ ಕಲಾವಿದರ ದೊಡ್ಡ ಬಳಗವೇ ಶೂಟಿಂಗ್‌ ನಡೆಯುತ್ತಿರುವಲಖನೌದದಲ್ಲಿ ಬೀಡು ಬಿಟ್ಟಿದೆ. ಶೂಟಿಂಗ್‌ ಆರಂಭವಾಗುವ ತಾಸುಗಟ್ಟಲೇ ಮೊದಲೇ ಅಮಿತಾಭ್‌ಗೆ ಮೇಕಪ್‌ ಮಾಡುವ ಕೆಲಸ ಆರಂಭವಾಗುತ್ತದೆ. ಹಲವು ತಾಸುಗಳ ನಂತರ ಅವರು ಥೇಟ್‌ ಲಖನೌದ ಮುಸ್ಲಿಂ ವೃದ್ಧನಾಗಿ ಬದಲಾಗಿಬಿಡುತ್ತಾರೆ.

ಶೂಟಿಂಗ್‌ ಅನುಭವವನ್ನು ಬ್ಲಾಗ್‌ನಲ್ಲಿ ಹಂಚಿಕೊಂಡಿರುವ ಅಮಿತಾಭ್ ತಮ್ಮ ಪಾತ್ರ ಮತ್ತು ಹೊಸ ಅವತಾರದ ಬಗ್ಗೆ ಮಾತ್ರ ಸುಳಿವು ಬಿಟ್ಟು ಕೊಟ್ಟಿಲ್ಲ. ಲಖನೌದ ಮುಂಗೋಪಿ ಮುಸ್ಲಿಂ ವೃದ್ಧ ಜಮೀನ್ದಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿವೆ. ಆ ವದಂತಿಗಳಿಗೆ‘ಗುಲಾಬೊ ಸಿತಾಬೊ‘ ಚಿತ್ರದ ಪಸ್ಟ್‌ ಲುಕ್‌ ಚಿತ್ರ ಪುಷ್ಠಿ ನೀಡಿದೆ.

ನಿರ್ದೇಶಕ ಸುಜಿತ್‌ ಚಿತ್ರಕಥೆ ಹೇಳಲು ಅಮಿತಾಭ್‌ ಮನೆಗೆ ತೆರಳಿದಾಗ ಕೆಲವು ಸ್ಕೆಚ್‌ಗಳನ್ನು ತಮ್ಮೊಂದಿಗೆ ಒಯ್ದಿದ್ದರು. ಸದಾ ಸಿಡುಕುವ ವೃದ್ಧನ ಪಾತ್ರದ ವಿವಿಧ ಭಾವ, ಭಂಗಿಗಳ ರೇಖಾಚಿತ್ರಗಳನ್ನು ಕಂಡು ಅಮಿತಾಭ್‌ ಭಾರಿ ಪ್ರಭಾವಿತರಾದರು. ಈ ಪಾತ್ರವನ್ನು ತಾವೇ ಮಾಡುವುದಾಗಿ ಹೇಳಿದ್ದರು.

ಲಖನೌದಲ್ಲಿ ಆಗಲೇ ‘ಗುಲಾಬೊ ಸಿತಾಬೊ‘ ಚಿತ್ರದ ಶೂಟಿಂಗ್‌ ಆರಂಭವಾಗಿದ್ದು, ಆಯುಷ್ಮಾನ್‌ ಖುರಾನಾ ಜತೆ ಅಮಿತಾಭ್‌ ಬಚ್ಚನ್‌ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ‘ಪೀಕು’ ಚಿತ್ರದ ನಿರ್ದೇಶಕ ಸುಜಿತ್‌ ಸರ್ಕಾರ್‌ ನಿರ್ದೇಶಿಸಿದ ಈ ಫ್ಯಾಮಿಲಿ ಡ್ರಾಮಾ ಕಾಮೆಡಿ ಚಿತ್ರ ಮುಂದಿನ ಏಪ್ರಿಲ್‌ ಕೊನೆಗೆ ತೆರೆ ಕಾಣಲಿದೆ. ಅಮಿತಾಭ್‌ ಹೊಸ ಅವತಾರ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT