ಶುಕ್ರವಾರ, ಮೇ 29, 2020
27 °C

‘ಹಗ್ಗ’ ಹಿಡಿದ ಬಸಂತ್‌ ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಹಗ್ಗ’ ವೇಣು ಭಾರದ್ವಾಜ್‌ ನಾಯಕನಾಗಿ ನಟಿಸುತ್ತಿರುವ ಚಿತ್ರ. ಅವರದು ಹಳ್ಳಿ ಹುಡುಗನ ಪಾತ್ರವಂತೆ. ವಸಂತ ಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಡಿ ರಾಜ್ ಭಾರದ್ವಾಜ್ ಮತ್ತು ವೇಣು ಭಾರದ್ವಾಜ್ ಇದಕ್ಕೆ ಬಂಡವಾಳ ಹೂಡಿದ್ದಾರೆ. ಇದನ್ನು ಅವಿನಾಶ್‌ ಎನ್‌. ನಿರ್ದೇಶಿಸುತ್ತಿದ್ದಾರೆ. ಪ್ರಿಯಾಂಕಾ ಅರೋರ ಇದರ ನಾಯಕಿ. ಸಸ್ಪೆನ್ಸ್, ಥ್ರಿಲ್ಲರ್‌ ಚಿತ್ರ ಇದು. 

ಬಾಲಿವುಡ್‌ ನಟ ಶಾರುಖ್‌ ಖಾನ್‌ ನಟನೆಯ ‘ಚೆನ್ನೈ ಎಕ್ಸ್‌ಪ್ರೆಸ್‌’ ಚಿತ್ರದಲ್ಲಿ ನಟಿಸಿದ್ದ ಬಸಂತ್ ರವಿ ಅವರು ‘ಹಗ್ಗ’ ಚಿತ್ರದ ಮೂಲಕ ಮತ್ತೆ ಕನ್ನಡಕ್ಕೆ ಬಂದಿರುವುದು ವಿಶೇಷ.

ಮಹೇಶ್ ಬಾಬು, ಜೂನಿಯರ್‌ ಎನ್‌ಟಿಆರ್‌, ಪ್ರಭಾಸ್, ಅಜಯ್ ದೇವಗನ್ ಸೇರಿದಂತೆ ಹಲವು ಸ್ಟಾರ್‌ ನಟರ ಸಿನಿಮಾಗಳಲ್ಲಿ ಅವರು ಖಳನಾಯಕನಾಗಿ ಬಣ್ಣ ಹಚ್ಚಿದ್ದರು. ದೈತ್ಯದೇಹಿ ಆಗಿರುವ ಅವರು ವಿಭಿನ್ನ ಮ್ಯಾನರಿಸಂನಿಂದ ಖ್ಯಾತಿ ಪಡೆದಿದ್ದಾರೆ. ಜೊತೆಗೆ, ಸಾಹಸಪ್ರಿಯರೂ ಹೌದು. ‘ಅಗಡು’, ‘ಬುಜ್ಜಿಗಾಡು’, ‘ಆಂಧ್ರವಾಲ’, ‘ಭೂಲೋಗಂ’ ಸೇರಿದಂತೆ ಐವತ್ತಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 

ರಾಜ್ ಭಾರದ್ವಾಜ್ ಅವರು ‘ಹಗ್ಗ’ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದಾರೆ. ಛಾಯಾಗ್ರಹಣ ಅವಿನಾಶ್ ಜಿ. ಅವರದ್ದು.  ಎನ್‌.ಎಂ. ವಿಶ್ವ ಸಂಕಲನ ನಿರ್ವಹಿಸಿದ್ದಾರೆ. ನೃತ್ಯ ನಿರ್ದೇಶನ ಮೋಹನ್ ಅವರದು. ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ವಿ. ನಾಗೇಂದ್ರಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಪ್ರಸನ್ನ ಭೋಜಶೆಟ್ಟರ್ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಪ್ರಕಾಶ್, ಸಂಚಿತ್ ಹೆಗ್ಡೆ ಮತ್ತು ಅನುರಾಧಾ ಭಟ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ತಬಲ ನಾಣಿ, ಅವಿನಾಶ್, ಸುಧಾ ಬೆಳವಾಡಿ, ಸಂಜು ಬಸಯ್ಯ, ಅಪೂರ್ವಶ್ರೀ, ಉಮೇಶ್, ಸದಾನಂದ ಕಲಿ, ಪ್ರಿಯದರ್ಶಿನಿ, ವಂದನಾ, ಕಾವ್ಯಾ ಪ್ರಕಾಶ್, ರಂಗಣ್ಣ, ನಿಶಾಂತ್, ಸಿಂಬ, ದರ್ಶನ್, ವಿವೇಕ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.