ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ಬಾಂಧವ್ಯದ ‘ಹಲ್ಮಿಡಿ’ ಚಿತ್ರವಿದು

Last Updated 19 ನವೆಂಬರ್ 2018, 19:30 IST
ಅಕ್ಷರ ಗಾತ್ರ

ಕನ್ನಡ ಸಾಹಿತ್ಯ ವಿದ್ಯಾರ್ಥಿಗಳಿಗೆ, ಕನ್ನಡಾಭಿಮಾನಿಗಳಿಗೆ ‘ಹಲ್ಮಿಡಿ’ ಹೆಸರು ಚಿರಪರಿಚಿತ. ಕನ್ನಡದ ಮೇಲಿನ ಅಭಿಮಾನವನ್ನು ಈ ಹೆಸರು ಮೂಡಿಸುತ್ತದೆ. ಕಾರಣ, ಕನ್ನಡದ ಪ್ರಾಚೀನ ಶಾಸನ ‘ಹಲ್ಮಿಡಿ’. ಕನ್ನಡ ಭಾಷೆಯ ಪ್ರಾಚೀನತೆ ಗುರುತಿಸುವಲ್ಲಿ ಹಲ್ಮಿಡಿ ಶಾಸನಕ್ಕೆ ವಿಶೇಷವಾದ ಮಹತ್ವವಿದೆ.

‘ಹಲ್ಮಿಡಿ’ ಹೆಸರಿನ ಕನ್ನಡ ಚಿತ್ರ ಈಗ ನಿರ್ಮಾಣವಾಗಿದೆ. ಈ ಚಿತ್ರವು ಕನ್ನಡ ಭಾಷೆಯ ಪರಿಸ್ಥಿತಿಯ ಕುರಿತಂತೆ ಚಿಂತನೆ ನಡೆಸುವ ಕಥಾವಸ್ತುವನ್ನು ಹೊಂದಿದೆ.ಟೆಕ್ನೋಮಾರ್ಕ್ ಸಂಸ್ಥೆ ವತಿಯಿಂದ ನಿರ್ಮಾಣಗೊಂಡಿರುವ ಈ ಸಿನಿಮಾವನ್ನುಎನ್.ಶಿವಾನಂದಂ ನಿರ್ದೇಶಿಸಿದ್ದಾರೆ. ಡಾ.ಎಂ.ಮೊಹ್ಮದ್ ಭಾಷಾ ಗೂಳ್ಯಮ್ ಅವರು ಈ ಚಿತ್ರದ ಕಥೆಯನ್ನು ರಚಿಸಿ, ಸಂಭಾಷಣೆ ಬರೆದಿದ್ದಾರೆ. ಸಂಕಲನವನ್ನು ಬಿ.ಶರವಣ, ಛಾಯಾಗ್ರಹಣವನ್ನು ಪಿವಿಆರ್ ಸ್ವಾಮಿ ಹೊತ್ತಿದ್ದಾರೆ.

ಗಡಿ ಪ್ರದೇಶದ ವಿಶಿಷ್ಟ ಸಮಸ್ಯೆಗಳನ್ನು ಎದುರಿಸುತ್ತಿರುವ ‘ತಾಳವಾಡಿ’ ಜನರ ಬದುಕು–ಬವಣೆ, ಕನ್ನಡ ಪ್ರೇಮ, ಸೌಹಾರ್ದತೆ ಇವುಗಳ ಬಗ್ಗೆ ಜಾಗೃತಿ ಮೂಡಿಸುವ ಜೊತೆಗೆ ಕನ್ನಡದ ಹುಡುಗ - ತಮಿಳು ಹುಡುಗಿಯ ಪ್ರೇಮ ಪ್ರಸಂಗದ ಅನಾವರಣವೇ ಈ ‘ಹಲ್ಮಿಡಿ’ ಎನ್ನುತ್ತದೆ ಚಿತ್ರತಂಡ.

ಚಾಮರಾಜನಗರ ಬಳಿಯ ತಮಿಳುನಾಡಿಗೆ ಸೇರಿರುವ ತಾಳವಾಡಿ ಮತ್ತು ಡಾ.ರಾಜ್‌ಕುಮಾರ್ ಅವರ ಹುಟ್ಟೂರಾದ ಗಾಜನೂರಿನ ಸುತ್ತಮುತ್ತ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಗಡಿಭಾಗದ ಜನರಲ್ಲಿನ ಪರಸ್ಪರ ಭಾಷಾ ಬಾಂಧವ್ಯ ಹಾಗೂ ಭಾವನಾತ್ಮಕ ಬಾಂಧವ್ಯ ಬೆಸೆಯುವ ನಿಟ್ಟಿನಲ್ಲಿ ತಯಾರಾದ ಈ ಸಿನಿಮಾದಲ್ಲಿ ಎಚ್.ಜಿ.ದತ್ತಾತ್ರೇಯ, ನೀನಾಸಂ ಅಶ್ವಥ್, ಮುನಿ, ಪ್ರಿಯ ಕೆಸರೆ, ನಿರಂಜನ್ ಕುಮಾರ್, ಪೃಥ್ವಿ, ರಾಧಾಶ್ರೀ ಮುಂತಾದವರು ಅಭಿನಯಿಸಿದ್ದಾರೆ. ಸದ್ಯದಲ್ಲಿ ಈ ಚಿತ್ರ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT