ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಉದ್ಯಮಿ ಸೊಹೈಲ್ ಖತುರಿಯಾ ನಡುವೆ ಕಳೆದ ಒಂದು ವರ್ಷದಿಂದ ವಿಚ್ಛೇದನದ ವದಂತಿ ಹರಿದಾಡುತ್ತಿತ್ತು. ಇದೀಗ ಆ ವದಂತಿಗೆ ಅಧಿಕೃತ ಮುದ್ರೆ ಬಿದ್ದಿದೆ.

ನಟಿ ಹನ್ಸಿಕಾ ಮೋಟ್ವಾನಿ ಮತ್ತು ಅವರ ಪತಿ ಸೊಹೈಲ್ ಖತುರಿಯಾ ಸಲ್ಲಿಸಿದ್ದ ವಿಚ್ಛೇದನದ ಅರ್ಜಿ ವಿಚಾರಣೆ ನಡೆಸಿದ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಅಂಗೀಕರಿಸಿದೆ. ಇಬ್ಬರೂ ಕೂಡ ಪರಸ್ಪರ ಒಪ್ಪಿಗೆ ಮೂಲಕ ದೂರವಾಗಲು ಕೋರಿ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಮೊಟ್ವಾನಿ ಅವರು ಯಾವುದೇ ಜೀವನಾಂಶ ಪಡೆಯದಿರಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

ನ್ಯಾಯಾಲಯದ ವಿಚಾರಣೆ ಸಂದರ್ಭದಲ್ಲಿ ಮೋಟ್ವಾನಿ ಅವರ ಪರ ವಕೀಲ ಅದ್ನಾನ್ ಶೇಖ್ ವಾದ ಮಂಡಿಸಿದರು. ಅವರು ತಮ್ಮ ವಾದದಲ್ಲಿ, ದಂಪತಿಗಳು ಅಲ್ಪಾವಧಿಗೆ ಮಾತ್ರ ಒಟ್ಟಿಗೆ ವಾಸಿಸುತ್ತಿದ್ದರು. ಬಳಿಕ ದೂರವೇ ಇದ್ದಾರೆ. ಇಬ್ಬರನ್ನೂ ಒಂದು ಮಾಡಲು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ. ಇಬ್ಬರ ಅಭಿಪ್ರಾಯಗಳಲ್ಲೂ ತುಂಬಾ ವ್ಯತ್ಯಾಸಗಳಿವೆ ಹಾಗಾಗಿ ವಿಚ್ಛೇದನ ನೀಡುವಂತೆ ಮನವಿ ಮಾಡಿದರು.

ಅರ್ಜಿದಾರರು 2024ರ ಜುಲೈ 2ರಿಂದಲೇ ಪರಸ್ಪರ ಬೇರೆಯಾಗಿ ವಾಸಿಸುತ್ತಿದ್ದಾರೆ ಎಂದು ಶೇಖ್ ಅವರು ವಾದದಲ್ಲಿ ಉಲ್ಲೇಖಿಸಿದರು.

ಹನ್ಸಿಕಾ ಮತ್ತು ಖತುರಿಯಾ ಪರಸ್ಪರ ಚರ್ಚೆ ನಡೆಸಿ ಯಾವುದೇ ಬೇಡಿಕೆ, ಜೀವನಾಂಶ ಕೇಳದೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹನ್ಸಿಕಾ ಮತ್ತು ಖತುರಿಯಾ 2022ರ ಡಿಸೆಂಬರ್ 4ರಂದು ಜೈಪುರದ ಮಂಡೋಟಾ ಕೋಟೆಯಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದರು. ದಂಪತಿಗಳಿಗೆ ಮಕ್ಕಳಾಗಿರಲಿಲ್ಲ.

ಹನ್ಸಿಕಾ ಅವರು ದಕ್ಷಿಣ ಭಾರತದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು. ಅವರು ಕನ್ನಡದಲ್ಲಿ 2008ರಲ್ಲಿ ತೆರೆಕಂಡ ಪುನೀತ್ ರಾಜಕುಮಾರ್ ಅಭಿನಯದ ‘ಬಿಂದಾಸ್’ ಸಿನಿಮಾದಲ್ಲಿ ಅಪ್ಪು ಅವರಿಗೆ ಜೋಡಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.