ಗುರುವಾರ , ಏಪ್ರಿಲ್ 9, 2020
19 °C

Happy Birthday: 45ನೇ ವಸಂತಕ್ಕೆ ಕಾಲಿಟ್ಟ ಪುನೀತ್‌ ರಾಜ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಇಂದು 45ನೇ ವರ್ಷದ ಜನ್ಮದಿನದ ಸಂಭ್ರಮ. ಅಪ್ಪುಗೆ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

1975ರ ಮಾರ್ಚ್‌ 17ರಂದು ಜನಿಸಿದ ಪುನೀತ್‌ ಇಂದು (ಮಾರ್ಚ್‌ 17) 45ನೇ ವಸಂತಕ್ಕೆ ಕಾಲಿಟ್ಟರು. 

ಮಾರಕ ಕೊರೊನಾ ಆತಂಕ ಇಡೀ ವಿಶ್ವವನ್ನು ಆವರಿಸಿರುವುದರಿಂದ ಅವರು ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ. ಜನರು ಒಂದೆಡೆ ಗುಂಪು ಸೇರಬಾರದು, ಸಾರ್ವಜನಿಕ ಆರೋಗ್ಯದ ಹಿತ ಕಾಪಾಡಬೇಕೆನ್ನುವ ಕಾಳಜಿಯಿಂದ ಜನ್ಮದಿನದ ಆಚರಣೆಗೆ ಬ್ರೇಕ್‌ ಹಾಕಿಕೊಂಡು, ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.

‘ಜನ್ಮದಿನಕ್ಕೆ ಶುಭ ಹರಸಲು ಮನೆ ಬಳಿ ಯಾರೂ ಬರಬೇಡಿ, ಆ ದಿನ ನಾನು ಮನೆಯಲ್ಲೂ ಇರುವುದಿಲ್ಲ. ನೀವು ಮುನ್ನೆಚ್ಚರಿಕೆವಹಿಸಿ ಸುರಕ್ಷಿತವಾಗಿರುವುದೇ ನನಗೆ ಕೊಡುವ ಒಂದು ದೊಡ್ಡ ಉಡುಗೊರೆ’ ಎಂದು ಭಾವಿಸಿರುವುದಾಗಿ ಅವರು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣದ ಮೂಲಕ ಸಂದೇಶ ರವಾನಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಅಪ್ಪುಗೆ ಗಣ್ಯರು, ಸಿನಿಮಾ ರಂಗದ ನಟ, ನಟಿಯರು ಸೇರಿದಂತೆ ಅಭಿಮಾನಿಗಳು ಶುಭಕೋರಿದ್ದಾರೆ. ಕಿಚ್ಚ ಸುದೀಪ್‌, ಶಿವಣ್ಣ, ಗಣೇಶ್‌ ಸೇರಿದಂತೆ ಹಲವರು ಪುನೀತ್‌ಗೆ ಶುಭಕೋರಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು