ಗುರುವಾರ , ನವೆಂಬರ್ 26, 2020
21 °C

55ರ ಹರೆಯದಲ್ಲಿ ಕಿಂಗ್ ಖಾನ್ ಶಾರುಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಲಿವುಡ್ ನಟ ಶಾರುಕ್‌ ಖಾನ್ ಇಂದು 55ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಕಿಂಗ್ ಖಾನ್‌ ಹುಟ್ಟುಹಬ್ಬಕ್ಕೆ ಅಭಿಮಾನಿಗಳು, ಸ್ನೇಹಿತರು ಹಾಗೂ ಸಹ ನಟ–ನಟಿಯರು ಸಾಮಾಜಿಕ ಜಾಲತಾಣದಲ್ಲಿ ಶುಭಾಶಯ ಕೋರಿದ್ದಾರೆ.

ಬಾಲಿವುಡ್‌ನ ಬಾದ್‌ಶಾ ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಸಿಕೊಳ್ಳುವ ಶಾರುಕ್‌ ಕಳೆದ 3 ದಶಕಗಳಿಂದ ಬಾಲಿವುಡ್‌ ಸಿನಿರಂಗದಲ್ಲಿ ಸ್ಟಾರ್ ನಟರ ‍ಪಟ್ಟಿಯಲ್ಲಿದ್ದಾರೆ. ಅನೇಕ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಕಿಂಗ್ ಖಾನ್‌ ರೊಮ್ಯಾಂಟಿಕ್ ಚಿತ್ರಗಳಿಂದಲೂ ಹೆಸರು ಗಳಿಸಿದ್ದಾರೆ. ಇವರ ನಟನೆಯ, ಈಗಲೂ ಜನ ಮೆಚ್ಚಿ ನೋಡುವ ಸಿನಿಮಾ ಡಿಡಿಎಲ್‌ಜೆ ಇತ್ತೀಚೆಗೆ 25 ವರ್ಷಗಳನ್ನು ಪೂರೈಸಿತ್ತು.

ಇತ್ತೀಚೆಗೆ ಟ್ವಿಟರ್‌ನಲ್ಲಿ ಅಭಿಮಾನಿಗಳೊಂದಿಗೆ ಸಂವಾದ ನಡೆಸಿದ್ದರು ಶಾರುಕ್‌. ಆ ವೇಳೆ ಅಭಿಮಾನಿಯೊಬ್ಬರು ಈ ವರ್ಷದ ಹುಟ್ಟುಹಬ್ಬದ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ್ದರು. ಆಗ ಶಾರುಕ್ ‘ಪ್ರತಿ ವರ್ಷದಂತೆ ಈ ವರ್ಷ ನನಗಾಗಿ ನನ್ನ ಮನೆಯ ಮುಂದೆ ಬಂದು ನಿಲ್ಲಬೇಡಿ ಎಂದಿದ್ದಾರೆ, ಅಲ್ಲದೇ ಈ ವರ್ಷ ಅಂತರವನ್ನು ಕಾಪಾಡಿಕೊಳ್ಳುವುದು ಮುಖ್ಯ’ ಎಂದು ಅಭಿಮಾನಿಗಳಿಗೆ ನೆನಪಿಸಿದ್ದಾರೆ. ಅಲ್ಲದೇ ‘ದಯವಿಟ್ಟು ಯಾರೂ ಗುಂಪಿನಲ್ಲಿ ಸೇರಬೇಡಿ, ನನ್ನ ಹುಟ್ಟುಹಬ್ಬ ಆಗಿರಬಹುದು ಅಥವಾ ಬೇರೆ ಯಾವುದೇ ಕಾರಣವಿರಬಹುದು. ಈ ಬಾರಿ ದೂರದಿಂದಲೇ ನಿಮ್ಮ ಪ್ರೀತಿಯನ್ನು ಹಂಚಿ’ ಎಂದು ಬರೆದುಕೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು