ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಚ್ಚುಗತ್ತಿಯಲ್ಲಿ ಹರಿ‍ಪ್ರಿಯಾ ಬಿಂಬ

Last Updated 31 ಜನವರಿ 2020, 19:45 IST
ಅಕ್ಷರ ಗಾತ್ರ

ಚಿನ್ಮೂಲಾದ್ರಿ ಚಿತ್ರದುರ್ಗದ ಕಲ್ಲಿನ ಕೋಟೆಯಶ್ರೀಮಂತ ಸಾಮ್ರಾಜ್ಯದಲ್ಲಿ ಇಡೀ ಭರತಭೂಮಿಯ ರಾಜಮನೆತಗಳನ್ನು ಬೆಚ್ಚಿಬೀಳಿಸುವಂತಹ ಘಟನೆಗಳು ಇತಿಹಾಸದಲ್ಲಿ ನಡೆದು ಹೋಗಿವೆ. ಇಂತಹ ಮಹಾಸಂಸ್ಥಾನವನ್ನು ಆಳಿದ, ಶೌರ್ಯ ಮತ್ತು ಪರಾಕ್ರಮಕ್ಕೆ ಹೆಸರುವಾಸಿಯಾಗಿದ್ದ ದುರ್ಗದ ಪಾಳೆಗಾರರ ಸುತ್ತ ಹೆಣೆದ ಕಥೆಯೇ ‘ಬಿಚ್ಚುಗತ್ತಿ’ ಚಾಪ್ಟರ್‌ –1 (ದಳವಾಯಿ ದಂಗೆ).

ಸಂಸ್ಥಾನದ ಅಧಿಪತ್ಯಕ್ಕಾಗಿ ನಡೆದ ಆಂತರಿಕ ಯುದ್ಧಗಳ ಚಿತ್ರಣ ಈ ಚಿತ್ರದಲ್ಲಿ ಅನಾವರಣಗೊಂಡಿದೆಯಂತೆ. ಕಥಾ ನಾಯಕ ಭರಮಣ್ಣ ನಾಯಕನಾಗಿ ಡಿಂಗ್ರಿ ನಾಗರಾಜ್‌ ಪುತ್ರ ರಾಜವರ್ಧನ್‌ ಮತ್ತು ಭರಮಣ್ಣನ ಮನದನ್ನೆ ಸಿದ್ಧಾಂಬೆಯಾಗಿ ಹರಿಪ್ರಿಯ ಕಾಣಿಸಿಕೊಂಡಿದ್ದಾರೆ.ಇದು ಸಾಹಿತಿ ಬಿ.ಎಲ್‌.ವೇಣು ಅವರ ಕಾದಂಬರಿ ಆಧರಿಸಿದ ಚಿತ್ರ.

ಈ ಚಿತ್ರಕ್ಕೆಹರಿ ಸಂತೋಷ್‌ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಈ ಚಿತ್ರದ ಟೀಸರ್‌ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಯೂಟೂಬ್‌ನಲ್ಲಿ ಸುಮಾರು 4.36 ಲಕ್ಷ ಜನರು ಇದನ್ನು ವೀಕ್ಷಿಸಿದ್ದಾರೆ.

ವರ್ಸಟೈಲ್‌ ನಟಿ ಎಂದೇ ಗುರುತಿಸಿಕೊಂಡಿರುವ ಹರಿಪ್ರಿಯಾ, ರಾಣಿಸಿದ್ಧಾಂಬೆಯ ಪಾತ್ರಕ್ಕೆ ಜೀವ ತುಂಬಲು ಕತ್ತಿವರಸೆ, ಕುದುರೆ ಸವಾರಿಯನ್ನು ಕಲಿತು ನಟಿಸಿದ್ದಾರೆ. ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ.

‘ಐತಿಹಾಸಿಕ ಕತೆ. ವೇಣು ಅವರ ಕಾದಂಬರಿಯಾಧರಿಸಿದ ಕಥೆಯಾಗಿದೆ. ಬರಗೂರು ಅವರ ನಿರ್ದೇಶನದ ‘ಅಮೃತಮತಿ’ಯಲ್ಲೂ ವಿಭಿನ್ನವಾದ ಪಾತ್ರ ಮಾಡಿದ್ದೇನೆ. ಈ ವರ್ಷದಲ್ಲಿ ಈ ಎರಡು ಚಿತ್ರಗಳ ಬಗ್ಗೆ ಕುತೂಹಲವಿದೆ’ಎನ್ನುತ್ತಾರೆ ಹರಿಪ್ರಿಯಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT