ಹರಿಪ್ರಿಯಾ ಖುಷಿ ಸವಾರಿ

ಶನಿವಾರ, ಮಾರ್ಚ್ 23, 2019
31 °C

ಹರಿಪ್ರಿಯಾ ಖುಷಿ ಸವಾರಿ

Published:
Updated:
Prajavani

‘ಈ ವರ್ಷ ನಂದೇ ಹವಾ’ ಅಂತಿದಾರೆ ಹರಿಪ್ರಿಯಾ. ಅವರ ಮಾತಿಗೆ ಪುಷ್ಟಿ ಒದಗಿಸುವಂತೆ ‘ಬೆಲ್‌ಬಾಟಂ’ ಚಿತ್ರಮಂದಿರಗಳಲ್ಲಿ ಚೆನ್ನಾಗಿ ಸದ್ದುಮಾಡುತ್ತಿದೆ. ‘ಕುರುಕ್ಷೇತ್ರ’, ‘ಕಥಾಸಂಗಮ’, ‘ಸೂಜಿದಾರ’ ಚಿತ್ರಗಳು ಪೂರ್ಣಗೊಂಡಿವೆ. ‘ಕನ್ನಡ್‌ ಗೊತ್ತಿಲ್ಲ’ ಪೋಸ್ಟ್‌ ಪ್ರೊಡಕ್ಷನ್‌ ಹಂತದಲ್ಲಿದೆ. ‘ಬಿಚ್ಚುಗತ್ತಿ’, ‘ಎಲ್ಲಿದ್ದೆ ಇಲ್ಲೀತನಕ’ ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ.

ಒಟ್ಟಾರೆ ಬ್ಯುಸಿಯಾಗಿದ್ದಾರೆ ಹರಿಪ್ರಿಯಾ. ಇತ್ತೀಚೆಗಷ್ಟೇ ಅವರು ನಾಯಕಿಯಾಗಿ ನಟಿಸಿರುವ 25ನೇ ಚಿತ್ರ ‘d/o ಪಾರ್ವತಮ್ಮ’ ಪ್ರಮಾಣೀಕರಣ ಮಂಡಳಿಯಿಂದ ’ಯು’ ಪ್ರಮಾಣಪತ್ರ ಪಡೆದುಕೊಂಡಿದೆ. ಶಂಕರ್‌ ಜೆ. ಎಂಬ ಯುವ ನಿರ್ದೇಶಕ ನಿರ್ದೇಶಿಸಿರುವ ಈ ಚಿತ್ರದಲ್ಲಿ ಹರಿಪ್ರಿಯಾ ತನಿಖಾಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಅವರ ಅಮ್ಮನಾಗಿ ಸುಮಲತಾ ನಟಿಸಿರುವುದೂ ಈ ಚಿತ್ರದ ವಿಶೇಷಗಳಲ್ಲೊಂದು.

ಹರಿಪ್ರಿಯಾ ನಟಿಸಿರುವ ಚಿತ್ರಗಳ ಹೆಸರನ್ನು ನೋಡಿದರೇ ಅದರಲ್ಲಿನ ವೈವಿಧ್ಯ ಅರಿವಿಗೆ ಬರುವಂತಿದೆ. ಹೊಸ ಹೊಸ ಬಗೆಯ ಪಾತ್ರಗಳಲ್ಲಿ ನಟಿಸುವುದು, ಆ ಮೂಲಕ ತನ್ನೊಳಗಿನ ಕಲಾವಿದೆಯನ್ನು ಇನ್ನಷ್ಟು ಪ್ರಬುದ್ಧೆಯಾಗಿಸಬೇಕು ಎಂಬ ಹಂಬಲದ ಜತೆಗೆ ಹೊಸಬರ ಪ್ರಯೋಗಶೀಲ ಪ್ರಯತ್ನಗಳಿಗೆ ಇಂಬು ನೀಡುವ ಕಾಳಜಿಯೂ ಅವರಿಗಿದೆ. ಈ ವರ್ಷದುದ್ದಕ್ಕೂ ತೆರೆಯ ಮೇಲೆ ಹರಿಪ್ರಿಯಾ ಸಿನಿಮಾಗಳ ಮೆರವಣಿಗೆ ನಡೆಯುವುದಂತೂ ಖಚಿತ.

Tags: 

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !