ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಂಚುರಿ ಸ್ಟಾರ್‌ ಶಿವರಾಜ್‌ ಕುಮಾರ್‌ ನಟನೆಯ 125ನೇ ಸಿನಿಮಾ ರಿಲೀಸ್‌ಗೆ ಮುಹೂರ್ತ

Last Updated 20 ಅಕ್ಟೋಬರ್ 2022, 13:23 IST
ಅಕ್ಷರ ಗಾತ್ರ

ಗೀತಾ ಪಿಕ್ಚರ್ಸ್‌ ಲಾಂಛನದಲ್ಲಿ ನಿರ್ಮಾಣವಾಗಿರುವ ನಟ ಶಿವರಾಜ್‌ ಕುಮಾರ್‌ ಅವರ 125ನೇ ಚಿತ್ರ ‘ವೇದ’ ಬಿಡುಗಡೆಗೆ ದಿನಾಂಕ ನಿಗದಿಯಾಗಿದೆ.

ಡಿ.23ರಂದು ‘ವೇದ’ ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ರಿಲೀಸ್‌ ಆಗಲಿದ್ದು, ‘ರಣಬೇಟೆಗಾರನ ರಕ್ತಸಿಕ್ತ ಅಧ್ಯಾಯ’ ಎಂಬ ಶೀರ್ಷಿಕೆ ನೀಡಿ ಹೊಸ ಪೋಸ್ಟರ್‌ ಒಂದನ್ನು ಶಿವರಾಜ್‌ಕುಮಾರ್‌ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್‌ ಮಾಡಿದ್ದಾರೆ.

ಎ.ಹರ್ಷ ನಿರ್ದೇಶನದಲ್ಲಿ ಶಿವರಾಜ್‌ ಕುಮಾರ್‌ ಅಭಿನಯಿಸುತ್ತಿರುವ 4ನೇ ಚಿತ್ರ ಇದಾಗಿದೆ.ಈ ಹಿಂದೆ ಹರ್ಷ ನಿರ್ದೇಶನದ ‘ವಜ್ರಕಾಯ’, ‘ಭಜರಂಗಿ’, ‘ಭಜರಂಗಿ–2’ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ನಟಿಸಿದ್ದರು. ‘ದಿ ಬ್ರೂಟಲ್‌ 1960’ ಎಂಬ ಟ್ಯಾಗ್‌ಲೈನ್‌ ಚಿತ್ರಕ್ಕಿದ್ದು, 1960ರ ದಶಕದಲ್ಲಿ ನಡೆಯುವ ಕಥಾವಸ್ತುವಿನ ಸುತ್ತ ಹೆಣೆದ ಕಥೆ ಇದಾಗಿದೆ.

1986ರಲ್ಲಿ ‘ಆನಂದ್‌’ ಸಿನಿಮಾ ಮೂಲಕ ಬೆಳ್ಳಿತೆರೆಗೆ ಹೆಜ್ಜೆ ಇಟ್ಟ ಶಿವರಾಜ್‌ಕುಮಾರ್‌ ಅವರು ತಮ್ಮ ಈ 36 ವರ್ಷದ ಸುದೀರ್ಘ ಸಿನಿಪಯಣದಲ್ಲಿ 125ನೇ ಸಿನಿಮಾದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಸೆಂಚುರಿ ಸ್ಟಾರ್‌, ಸದ್ಯ ಯೋಗರಾಜ್‌ ಭಟ್‌ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಕರಟಕ ದಮನಕ’ ಹಾಗೂ‘ಬೀರ್ ಬಲ್’, ‘ಓಲ್ಡ್ ಮಾಂಕ್’ ಸಿನಿಮಾ ಖ್ಯಾತಿಯ ನಟ ಶ್ರೀನಿ ಆ್ಯಕ್ಷನ್‌ ಕಟ್‌ ಹೇಳುತ್ತಿರುವ ‘ಘೋಸ್ಟ್‌’ ಸಿನಿಮಾದ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT