ಮಂಗಳವಾರ, ಮಾರ್ಚ್ 21, 2023
30 °C

ಸೈಫ್ ಅಲಿ ಖಾನ್-ಕರೀನಾ ಕಪೂರ್‌ ದಂಪತಿಯ ಎರಡನೇ ಪುತ್ರನ ಹೆಸರೇನು?

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ಕರೀನಾ ಕಪೂರ್ ಖಾನ್ ಮತ್ತು ಸೈಫ್ ಅಲಿ ಖಾನ್ ಅವರು ಈ ವರ್ಷದ ಫೆಬ್ರವರಿ 21ರಂದು ಎರಡನೇ ಮಗುವನ್ನು ಸ್ವಾಗತಿಸಿದ್ದರು. ಎರಡನೇ ಮಗುವನ್ನು ನೋಡುವ ಕಾತುರದಿಂದ ಅಭಿಮಾನಿಗಳು ಕಾಯುತ್ತಿದ್ದ ವೇಳೆಯಲ್ಲೇ ಕರೀನಾ ಅವರ ತಂದೆ ರಣಧೀರ್ ಕಪೂರ್ ನವಜಾತ ಶಿಶುವಿನ ಒಂದು ಫೋಟೊವನ್ನು ಅಕಸ್ಮಾತ್ ಆಗಿ ಹಂಚಿಕೊಂಡಿದ್ದರು.

ಕರೀನಾ ದಂಪತಿಯು ತಮ್ಮ ಎರಡನೇ ಮಗುವಿನ ಮುಖವನ್ನಾಗಲಿ ಅಥವಾ ಹೆಸರನ್ನಾಗಲಿ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಇತ್ತೀಚಿನ ವರದಿ ಪ್ರಕಾರ, ದಂಪತಿ ತಮ್ಮ ನವಜಾತ ಶಿಶುವನ್ನು 'ಜೆಹ್' (Jeh) ಎಂದು ಕರೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಬಾಂಬೆ ಟೈಮ್ಸ್ ವರದಿ ಪ್ರಕಾರ, ಕರೀನಾ ಮತ್ತು ಸೈಫ್ ಅವರು ಸೈಫ್ ಅವರ ತಂದೆಯ ಹೆಸರು ಮನ್ಸೂರ್ ಸೇರಿದಂತೆ ವಿವಿಧ ಹೆಸರುಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಆದಾಗ್ಯೂ, ಅವರು ತಮ್ಮ ಎರಡನೇ ಮಗುವನ್ನು 'ಜೆಹ್' ಎಂದು ಕರೆಯುತ್ತಿದ್ದಾರೆಂದು ಹೇಳಲಾಗಿದೆ.

ಲ್ಯಾಟಿನ್ ಭಾಷೆಯಲ್ಲಿ ಜೆಹ್ ಎಂದರೆ ನೀಲಿ ಕ್ರೆಸ್ಟೆಡ್ ಹಕ್ಕಿ ಎಂದರ್ಥ. ಪಾರ್ಸಿಯಲ್ಲಿ ಇದರ ಅರ್ಥ 'ಬರಲು, ತರಲು'. ಆದರೆ, ದಂಪತಿ ತಮ್ಮ ಎರಡನೇ ಮಗನ ಹೆಸರಿನ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.

ಕರೀನಾ ಮತ್ತು ಸೈಫ್, ಅನುಷ್ಕಾ-ವಿರಾಟ್ ಅವರಂತೆಯೇ ತಮ್ಮ ಮಗನ ಮುಖ ಮತ್ತು ಹೆಸರನ್ನು ಬಹಿರಂಗಗೊಳಿಸದಿರಲು ನಿರ್ಧರಿಸಿದ್ದಾರೆ. ಅ. 16, 2012 ರಲ್ಲಿ ಸೈಫ್ ಅಲಿಖಾನ್‌ ಅವರನ್ನು ವಿವಾಹವಾದ ಕರೀನಾ ಅವರು ಚೋಟಾ ನವಾಬ್ ಎಂದೇ ಹೆಸರಾಗಿರುವ ಸ್ಟಾರ್ ಕಿಡ್ ತೈಮೂರ್ ಅಲಿ ಖಾನ್‌ಗೆ ಅ. 16, 2016 ರಂದು ಜನ್ಮ ನೀಡಿದ್ದರು. ಕರೀನಾ ಕಪೂರ್ ಅವರನ್ನು ಮದುವೆಯಾಗುವುದಕ್ಕೂ ಮೊದಲು ಸೈಫ್ ಅಮೃತಾ ಸಿಂಗ್ ಅವರನ್ನು ವರಿಸಿದ್ದರು. ಈ ದಂಪತಿಗೆ ಸಾರಾ ಅಲಿ ಖಾನ್ ಮತ್ತು ಇಬ್ರಾಹಿಂ ಅಲಿ ಖಾನ್ ಎಂಬ ಇಬ್ಬರು ಮಕ್ಕಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು