ಶರಣ್ ನಟನೆಯ ‘ಅಧ್ಯಕ್ಷ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಹೆಬಾ ಪಟೇಲ್, ಬಿ.ಎಂ. ಗಿರಿರಾಜ್ ನಿರ್ದೇಶನದ ‘ರಾಮರಸ’ ಸಿನಿಮಾ ಮೂಲಕ ಕನ್ನಡಕ್ಕೆ ಮರಳಿದ್ದರು. ಈ ಸಿನಿಮಾ ಇನ್ನಷ್ಟೇ ಬಿಡುಗಡೆಯಾಗಬೇಕಿದ್ದು, ಈ ಸಂದರ್ಭದಲ್ಲೇ ಮತ್ತೊಂದು ಕನ್ನಡ ಸಿನಿಮಾ ಒಪ್ಪಿಕೊಂಡಿದ್ದಾರೆ.

ಗೋಪಿ ನಿರ್ದೇಶಿಸುತ್ತಿರುವ ‘ರುದ್ರ ಕಾಲ’ ಸಿನಿಮಾದಲ್ಲಿ ಹೆಬಾ, ದಿಗಂತ್ ಅವರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಮುಹೂರ್ತ ನಡೆದಿದ್ದು, ಚಿತ್ರದ ಮೊದಲ ದೃಶ್ಯಕ್ಕೆ ನಿರ್ದೇಶಕ ಯೋಗರಾಜ ಭಟ್ ಕ್ಲ್ಯಾಪ್ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಬಾ, ‘ನಾನು ಸಿನಿಪಯಣವನ್ನು ಆರಂಭಿಸಿದ್ದೇ ಕನ್ನಡದಲ್ಲಿ. ಸುಮಾರು ಹತ್ತು ವರ್ಷಗಳ ಬಳಿಕ ಮತ್ತೆ ಮರಳಿದ್ದೇನೆ. ಮತ್ತೆ ಮನೆಗೆ ಬಂದಿದ್ದೇನೆ ಎನ್ನುವ ಭಾವ. ‘ಅಧ್ಯಕ್ಷ’ ಸಿನಿಮಾಗೆ ಕನ್ನಡ ಜನತೆ ನೀಡಿದ ಪ್ರೀತಿ ಇಂದಿಗೂ ಅನುಭವಕ್ಕೆ ಬರುತ್ತಿದೆ. ದಿಗಂತ್ ಅವರ ಜೊತೆ ನಟಿಸುವ ಆಸೆ ಇತ್ತು. ಇದು ಈಗ ನನಸಾಗಿದೆ’ ಎಂದಿದ್ದಾರೆ.

ದಿಗಂತ್ ಮಾತನಾಡಿ, ‘ಈ ವರ್ಷಕ್ಕಾಗಿ ಕಳೆದ ವರ್ಷ ಎರಡು ಸಿನಿಮಾಗಳನ್ನು ಸಹಿ ಮಾಡಿದ್ದೆ. ಆದರೆ ನಂತರದಲ್ಲಿ ನಿರ್ಮಾಪಕರು ‘ಸದ್ಯದ ಪರಿಸ್ಥಿತಿ ಗೊತ್ತಲ್ವಾ’ ಎಂಬಂತೆ ಮಾತನಾಡತೊಡಗಿದರು. ಇಂತಹ ಸ್ಥಿತಿಯ ಮಧ್ಯೆ ರಮೇಶ್ ಅವರು ಸಿನಿಮಾ ಮಾಡಲು ಮುಂದಾಗಿದ್ದಾರೆ. ಕಥೆ ಕೇಳಿದ ತಕ್ಷಣ ನಟಿಸಲು ಒಪ್ಪಿಕೊಂಡೆ. ಒಳ್ಳೆಯ ಸಿನಿಮಾ ಆಗುವ ನಿರೀಕ್ಷೆ ಇದೆ. ಮೈಥಾಲಜಿ ಜಾನರ್ನಲ್ಲಿ ಚಿತ್ರವಿದೆ. ಇತ್ತೀಚೆಗೆ ಒಂದು ತೆಲುಗು ಸಿನಿಮಾ ಪೂರ್ಣಗೊಳಿಸಿ ಮರಳಿದ್ದೇನೆ. ಅಲ್ಲಿಯವರಿಗೆ ಒಟಿಟಿ, ಸಾಮಾಜಿಕ ಮಾಧ್ಯಮಗಳ ತೊಂದರೆಯೇ ಆಗಿಲ್ಲ. ಪ್ರತಿ ವಾರ ನಾಲ್ಕೈದು ಸಿನಿಮಾಗಳು ತೆರೆಕಾಣುತ್ತಿವೆ. ಅವುಗಳಲ್ಲಿ ಹಲವು ಯಶಸ್ಸು ಪಡೆಯುತ್ತಿವೆ. ಅಲ್ಲಿನ ಸಿನಿಮಾ ಸಂಸ್ಕೃತಿಯನ್ನು ನೋಡಿ, ನಮ್ಮಲ್ಲಿ ಯಾಕೆ ಹೀಗೆ ಆಗುತ್ತಿಲ್ಲ ಎಂದು ದುಃಖವಾಯಿತು’ ಎಂದರು.

‘ಈ ಸಿನಿಮಾದ ಕಥೆಗೆ ಕನ್ನಡದ ಕುಟುಂಬಗಳಿಗೆ ಹತ್ತಿರವಾಗುವ, ಅವರನ್ನು ಮನರಂಜಿಸುವ ನಾಯಕ ಬೇಕಿತ್ತು. ಕಥೆ ಕೇಳಿದಾಗಲೇ ದಿಗಂತ್ ಅವರನ್ನು ನೆನಪಿಸಿಕೊಂಡೆ. ಕಥೆಯ ಪಾತ್ರಕ್ಕೂ ಅವರು ಸೂಕ್ತವಾಗುವ ಕಾರಣ ಆಯ್ಕೆ ಮಾಡಿದೆವು’ ಎಂದರು ನಿರ್ಮಾಪಕ ರಮೇಶ್ ನಾಯ್ಕ್ .

ರಮೇಶ್ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಚಿತ್ರದ ಚಿತ್ರೀಕರಣ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ನಡೆಯಲಿದೆ. ಮೇ ತಿಂಗಳಿನಿಂದ ಶೂಟಿಂಗ್ ಆರಂಭಿಸಿ, ಒಂದೇ ಹಂತದ ಚಿತ್ರೀಕರಣ ನಡೆಸಿ ಆದಷ್ಟು ಬೇಗ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ಕ್ರಿಸ್ಟೋಫರ್ ಜೋಸೆಫ್ ಛಾಯಾಚಿತ್ರಗ್ರಹಣ ಸಿನಿಮಾಗಿರಲಿದೆ. v

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260424-51-1808306668

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.