ಮುಂಬೈನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ ನಡೆದ 'ಲೆನ್ಸ್ ಅಂಡ್ ಲೆಗಸಿ: ಬಾಲಿವುಡ್ ಇನ್ ಫೋಕಸ್' ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿದ ಹೇಮಾ ಮಾಲಿನಿ, ನಟ ಧರ್ಮೇಂದ್ರ ಅವರನ್ನು ನೆನೆದು ಭಾವುಕರಾಗಿದ್ದಾರೆ.

ಬಾಲಿವುಡ್ನ ದಂತಕಥೆ, ಹೀ-ಮ್ಯಾನ್ ಖ್ಯಾತಿಯ ನಟ ಧರ್ಮೇಂದ್ರ ಅವರನ್ನು ನೆನೆದ ನಟಿ ಹೇಮಾ ಮಾಲಿನಿ, ಧರ್ಮೇಂದ್ರ ಅವರ ಸಿನಿಮಾ ಪಯಾಣ ಹೇಗಿತ್ತು ಎಂಬುದನ್ನು ತಿಳಿಸಿದ್ದಾರೆ.

‘ಚಲನಚಿತ್ರೋದ್ಯಮಕ್ಕೆ ಧರ್ಮೇಂದ್ರ ಅವರು ನೀಡಿದ ಕೊಡುಗೆಯನ್ನು ಮಾತ್ರ ಗುರುತಿಸುವುದಿಲ್ಲ. ಅವರ ಸಿನಿ ಪಯಾಣ, ಉತ್ಸಾಹ, ಸಮರ್ಪಣೆ ಮತ್ತು ಪ್ರೇಕ್ಷಕರ ಮೇಲಿನ ಅಪಾರ ಪ್ರೀತಿಯಿಂದ ಗುರುತಿಸಲ್ಪಟ್ಟಿದ್ದಾರೆ. ಸಿನಿಮಾ ಹೃದಯಗಳ ಜೊತೆ ಸಂಪರ್ಕ ಸಾಧಿಸುವ ಮಾರ್ಗ ಎಂದು ಅವರು ಯಾವಾಗಲೂ ಹೇಳುತ್ತಿದ್ದರು’ ಎಂದು ಹೇಳಿದ್ದಾರೆ.

ಸಿನಿಮಾದಲ್ಲಿ ಧರ್ಮೇಂದ್ರ ಅವರ ಆಸಕ್ತಿ ಕುರಿತು ಮಾತನಾಡಿರುವ ಮಾಲಿನಿ ‘ಚಿತ್ರೀಕರಣದಲ್ಲಿ ಭಾಗವಹಿಸಲು ಧರ್ಮೇಂದ್ರ ಅವರು ತುಂಬಾ ಉತ್ಸುಕರಾಗಿರುತ್ತಿದ್ದರು. ನಾನು ಅವರ ಜೀವನ ಸಂಗಾತಿಯಾಗಿ, ಅವರು ಎಷ್ಟು ಭಾವೋದ್ರಿಕ್ತರು ಎಂಬುದನ್ನು ನೋಡಿದ್ದೇನೆ. ಅವರ ನಟನೆ ಮತ್ತು ನಡವಳಿಕೆಯಿಂದ ಲಕ್ಷಾಂತರ ಸಿನಿ ಪ್ರಿಯರ ಹೃದಯಗಳನ್ನು ಗೆದ್ದಿದ್ದಾರೆ’ ಎಂದಿದ್ದಾರೆ.

’ಧರ್ಮೇಂದ್ರ ಅವರು ಓರ್ವ ಮಹಾನ್ ವ್ಯಕ್ತಿ. ನಾನು ಅವರಿಗೆ ಸಂಗಾತಿಯಾಗಿದ್ದು ನಿಜಕ್ಕೂ ಪುಣ್ಯ. ನಾನು ಅವರ ಅನುಪಸ್ಥಿತಿಯನ್ನು ಇಂದಿಗೂ ಅನುಭವಿಸುತ್ತಿದ್ದೇನೆ’ ಎಂದು ಭಾವುಕರಾಗಿದ್ದಾರೆ.

ಧರ್ಮೇಂದ್ರ ಅವರು 2025ರ ನವೆಂಬರ್ 24 ರಂದು ನಿಧನರಾದರು. ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಅವರು ಒಟ್ಟಾಗಿ ಶೋಲೆ, ಸೀತಾ ಔರ್ ಗೀತಾ, ದಿ ಬರ್ನಿಂಗ್ ಟ್ರೈನ್, ಅಲಿಬಾಬಾ ಔರ್ 40 ಚೋರ್, ರಾಜಾ ಜಾನಿ, ಮತ್ತು ನಯಾ ಜಮಾನಾ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.