ಬುಧವಾರ, ಆಗಸ್ಟ್ 21, 2019
27 °C

ಮತ್ತೆ ಅಜಯ್ ಅಭಿ ಮೋಡಿ

Published:
Updated:
Prajavani

ಬಾಲಿವುಡ್‌ನ ಜನಪ್ರಿಯ ನಟರಾದ ಅಜಯ್‌ ದೇವಗನ್‌ ಮತ್ತು ಅಭಿಷೇಕ್‌ ಬಚ್ಚನ್ ಏಳು ವರ್ಷದ ಬಳಿಕ ಮತ್ತೆ ಸಿನಿಮಾದಲ್ಲಿ ಒಟ್ಟಿಗೆ ನಟಿಸುವುದು ಖಚಿತವಾಗಿದೆ.

‘ಝಮೀನ್’, ‘ಯುವ’ ಮತ್ತು ‘ಎಲ್ಒಸಿ ಕಾರ್ಗಿಲ್’ ಚಿತ್ರದಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು. ಕೊನೆಯದಾಗಿ ಈ ಇಬ್ಬರು ತೆರೆ ಹಂಚಿಕೊಂಡಿದ್ದ ಚಿತ್ರ ‘ಬೋಲ್ ಬಚ್ಚನ್’. ಹಾಸ್ಯ ಪ್ರಧಾನ ಚಿತ್ರ ಇದು. 2012ರಲ್ಲಿ ಬಿಡುಗಡೆಗೊಂಡ ಈ ಸಿನಿಮಾವನ್ನು ನಿರ್ದೇಶಿಸಿದ್ದು ರೋಹಿತ್ ಶೆಟ್ಟಿ. ಈ ಇಬ್ಬರ ನಟನೆಯು ಪ್ರೇಕ್ಷಕರಿಗೆ ಮೋಡಿ ಮಾಡಿತ್ತು.

ಆ ಬಳಿಕ ಒಂದೇ ಸಿನಿಮಾದಲ್ಲಿ ನಟಿಸುವ ಅವಕಾಶ ಇಬ್ಬರಿಗೂ ಒದಗಿಬಂದಿರಲಿಲ್ಲ. ಇಬ್ಬರೂ ಮತ್ತೆ ತೆರೆಯ ಮೇಲೆ ಕಮಾಲ್‌ ಮಾಡಲು ಹೊರಟಿರುವುದು ಅಭಿಮಾನಿಗಳಲ್ಲಿ ಸಂತಸಕ್ಕೆ ಕಾರಣವಾಗಿದೆ. ಇನ್ನೂ ಹೆಸರಿಡದ ಹೊಸ ಸಿನಿಮಾಕ್ಕೆ ಅಜಯ್ ದೇವಗನ್ ಅವರೇ ಆರ್ಥಿಕ ಇಂಧನ ಒದಗಿಸಲಿದ್ದಾರಂತೆ. ಇಲಿಯಾನ ಡಿಕ್ರೂಸ್ ಇದರ ನಾಯಕಿ.

ಕೂಕಿ ಗುಲಾಟಿ ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲು ಸಜ್ಜಾಗಿದ್ದಾರೆ. ‘ಟೋಟಲ್ ಧಮಾಲ್’ ಚಿತ್ರದಲ್ಲಿ ಅಜಯ್ ಮತ್ತು ಗುಲಾಟಿ ಜೊತೆಯಾಗಿ ಕೆಲಸ ಮಾಡಿದ್ದರು. 1990-2000ರ ನಡುವೆ ನಡೆದ ನೈಜ ಘಟನೆಯ ಸುತ್ತ ಚಿತ್ರಕಥೆ ಹೊಸೆಯಲಾಗಿದೆಯಂತೆ. 

Post Comments (+)