ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಾನಂದ ಮಾಡರ್ನ್‌ ಮಾಂಕ್‌

Last Updated 13 ಜೂನ್ 2019, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರ ಕುರಿತು ಚಿತ್ರವೊಂದು ತೆರೆಗೆ ಬರುವ ಕಾಲ ಸನ್ನಿಹಿತವಾಗಿದೆ. ಲೇಖಕ ಹಿಂಡೋಲ್ ಸೆನ್‌ಗುಪ್ತ ಬರೆದಿರುವ ‘ದಿ ಮಾಡರ್ನ್‌ ಮಾಂಕ್‌’ ಪುಸ್ತಕವನ್ನು ಸಿನಿಮಾ ರೂಪದಲ್ಲಿ ತರುವ ಹಕ್ಕುಗಳನ್ನು ಚಿತ್ರ ನಿರ್ಮಾಪಕ ಸುನಿಲ್ ಬೊಹ್ರಾ ಖರೀದಿಸಿದ್ದಾರೆ.

ಬೊಹ್ರಾ ಅವರು ಈ ಹಿಂದೆ ‘ದಿ ಆ್ಯಕ್ಸಿಡೆಂಟಲ್ ಪ್ರೈಂ ಮಿನಿಸ್ಟರ್’, ‘ಗ್ಯಾಂಗ್ಸ್ ಆಫ್‌ ವಸೈಪುರ’ ಚಿತ್ರಗಳನ್ನು ನಿರ್ಮಿಸಿದ್ದರು. ‘ಭಾರತಕ್ಕೆ ದೊಡ್ಡದೊಂದು ಪರಂಪರೆ ಇದೆ. ಇಂತಹ ಪರಂಪರೆಯನ್ನು ರೂಪಿಸಿದ ಸ್ವಾಮಿ ವಿವೇಕಾನಂದ, ಸರ್ದಾರ್ ಪಟೇಲ್ ಅವರಂತಹ ವ್ಯಕ್ತಿಗಳನ್ನು ಆಧರಿಸಿ ಸಿನಿಮಾ ಮಾಡುವುದು ನನ್ನ ಬಯಕೆ. ಇದು ನಾನು ನನ್ನ ದೇಶಕ್ಕೆ ಸಲ್ಲಿಸುವ ಗೌರವ’ ಎಂದು ಸುನಿಲ್ ಹೇಳಿದ್ದಾರೆ.

ಹಿಂಡೋಲ್ ಬರೆದ ಈ ಪುಸ್ತಕವನ್ನು ಪೆಂಗ್ವಿನ್ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಈ ಪುಸ್ತಕವನ್ನು ‘ಕಡ್ಡಾಯವಾಗಿ ಓದಬೇಕು’ ಎಂದು ‘ಎನ್‌ಸೈಕ್ಲೊಪಿಡಿಯಾ ಆಫ್‌ ಹಿಂದುಯಿಸಂ’ನ ಪ್ರಧಾನ ಸಂಪಾದಕ ಡಾ. ಕಪಿಲ್ ಕಪೂರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ವಿವೇಕಾನಂದರ ಆಧುನಿಕ ನೋಟಗಳನ್ನು, ಅವರ ಸಂಕೀರ್ಣ ವ್ಯಕ್ತಿತ್ವವನ್ನು ಈ ಪುಸ್ತಕ ಅಕ್ಷರ ರೂಪದಲ್ಲಿ ವಿವರಿಸಿದೆ ಎಂಬ ಮಾತು ಕೂಡ ಇದೆ.

‘ಈ ಕಥೆಯನ್ನು ದೇಶದ ಲಕ್ಷಾಂತರ ಜನರಿಗೆ ಹೇಳಲು ಸುನಿಲ್ ಜೊತೆ ಕೆಲಸ ಮಾಡುವುದು ಖುಷಿಯ ಸಂಗತಿ’ ಎಂದು ಹಿಂಡೋಲ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT