ಶುಕ್ರವಾರ, ಸೆಪ್ಟೆಂಬರ್ 17, 2021
23 °C

ದಾಖಲೆ ಬರೆದ ‘ಅವೆಂಜರ್ಸ್‌ ಎಂಡ್‌ಗೇಮ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಹುನಿರೀಕ್ಷೆಯೊಂದಿಗೆ ಬಿಡುಗಡೆಯಾದ ಹಾಲಿವುಡ್‌ನ ಅವೆಂಜರ್ಸ್‌ ಸರಣಿಯ ‘ಅವೆಂಜರ್ಸ್ ಎಂಡ್‌ಗೇಮ್‌’ ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಇದೆ. ವಿಶ್ವದಾದ್ಯಂತ ಬಿಡುಗಡೆಯಾದ ಈ ಚಿತ್ರ ಐದನೇ ದಿನಕ್ಕೆ ₹8,384ಕೋಟಿ ಬಾಚಿ ದಾಖಲೆ ನಿರ್ಮಿಸಿದೆ. ಈ ಮೂಲಕ ಅತ್ಯಂತ ವೇಗವಾಗಿ ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿದ ಮೊದಲ ಚಿತ್ರವಾಗಿ ಸದ್ದು ಮಾಡಿದೆ.

2018ರಲ್ಲಿ ಬಿಡುಗಡೆಯಾಗಿದ್ದ ಅವೆಂಜರ್ಸ್ ಸರಣಿಯ ‘ಅವೆಂಜರ್ಸ್– ಇನ್ಫಿನಿಟಿ ವಾರ್‌’ ಚಿತ್ರ 11 ದಿನಗಳಲ್ಲಿ ಬಿಲಿಯನ್ ಡಾಲರ್ ಕ್ಲಬ್‌ಗೆ ಸೇರಿತ್ತು.

ಇನ್ನು ಭಾರತದ ಮಾರುಕಟ್ಟೆಯಲ್ಲೂ ಚಿತ್ರ ಸದ್ದು ಮಾಡಿದ್ದು, ಶುಕ್ರವಾರ ₹53 ಕೋಟಿ, ಶನಿವಾರ ₹51 ಕೋಟಿ, ಭಾನುವಾರ ₹52 ಕೋಟಿ ಸೇರಿದಂತೆ ಸುಮಾರು ₹157 ಕೋಟಿ ವಸೂಲಿ ಮಾಡಿ ದಾಖಲೆ ಬರೆದಿದೆ. ವಿಶೇಷವೆಂದರೆ ಈವರೆಗೆ ಬಾಲಿವುಡ್‌ನ ಯಾವ ಚಿತ್ರವೂ ಈ ಮಟ್ಟಿಗೆ ವಸೂಲಿ ಮಾಡಿಲ್ಲ.

ಭಾರತವಷ್ಟೇ ಅಲ್ಲದೇ, ಚೀನಾ, ದಕ್ಷಿಣ ಕೊರಿಯಾ, ಬ್ರೆಜಿಲ್, ಆಸ್ಟ್ರೇಲಿಯಾ ಸೇರಿದಂತೆ 44 ದೇಶಗಳಲ್ಲಿ ಅತಿ ಹೆಚ್ಚು ಹಣ ಗಳಿಸಿದ ಚಿತ್ರವಾಗಿಯೂ ದಾಖಲೆ ಬರೆದಿದೆ. ಕೆಲವು ದೇಶಗಳಲ್ಲಿ ಈ ಚಿತ್ರ ಬುಧವಾರ ಬಿಡುಗಡೆಯಾಗಿದ್ದರೆ, ಇನ್ನೂ ಕೆಲವು ದೇಶಗಳಲ್ಲಿ ಶುಕ್ರವಾರ (ಏಪ್ರಿಲ್ 26) ಬಿಡುಗಡೆಯಾಗಿತ್ತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.