ಶುಕ್ರವಾರ, ಏಪ್ರಿಲ್ 23, 2021
30 °C

ಲಾಕ್‌ಡೌನ್‌ ಅವಧಿಯಲ್ಲಿ ಸೆಲೆಬ್ರಿಟಿ– ಮಕ್ಕಳ ಬಾಂಧವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊರೊನಾ ವೈರಸ್‌ ಸೋಂಕಿನ ಭಯದಿಂದಾಗಿ ಮೂರು ತಿಂಗಳಿನಿಂದ ಎಲ್ಲರೂ ಮನೆಯೊಳಗೆ ಲಾಕ್‌ಡೌನ್‌ ಆಗಿದ್ದಾರೆ. ನಟನಾ ಕ್ಷೇತ್ರವೂ ಇದರಿಂದ ಹೊರತಾಗಿಲ್ಲ. ಸಿನಿಮಾ ಚಟುವಟಿಕೆಗಳೂ ಸ್ಥಗಿತಗೊಂಡಿರುವುದರಿಂದ, ಜನಪ್ರಿಯ ನಟ– ನಟಿಯರು ಈ‌ ಅವಧಿಯಲ್ಲಿ ತಮ್ಮ ಕುಟುಂಬದ ಸದಸ್ಯರೊಂದಿಗೆ ಸಮಯ ಕಳೆಯುತ್ತಿದ್ದಾರೆ. ಪುಟ್ಟ ಮಕ್ಕಳ ತಂದೆ ತಾಯಂದಿರಿಗೆ ಈ ಅವಧಿ ಒಂಥರಾ ವರದನಾವೂ ಆಗಿಬಿಟ್ಟಿದೆ. ಇಂಥ ಸೆಲೆಬ್ರಟಿಗಳು, ತಮ್ಮ ಮಕ್ಕಳೊಂದಿಗೆ ಆಟವಾಡಿದ ಎಲ್ಲ ಚಟುವಟಿಕೆಗಳ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಆ್ಯಮಿ ಜಾಕ್ಸನ್‌, ಶಿಲ್ಪಾ ಶೆಟ್ಟಿ ಮತ್ತಿತರ ಸೆಲೆಬ್ರಿಟಿಗಳು ತಮ್ಮ ಮಕ್ಕಳ ಜತೆ ಆಟವಾಡಿದ ಫೋಟೊ, ವಿಡಿಯೊಗಳನ್ನು ಇನ್‌ಸ್ಟಾಗ್ರಾಂ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ‘ಮಕ್ಕಳ ನಗು, ಆಟ–ಪಾಠ, ಒಡನಾಟ ಕೊರೊನಾ ಸೋಂಕಿನ ಭಯವನ್ನು ದೂರಮಾಡಿತು‘ ಎಂದು ಬರೆದುಕೊಂಡಿದ್ದಾರೆ.

ಬಾಲಿವುಡ್‌ ನಟಿ ಆ್ಯಮಿ ಜಾಕ್ಸನ್‌‌ ತಮ್ಮ ಮಗ ಆ್ಯಂಡ್ರಿಸ್‌ನೊಂದಿಗೆ ಕಾಲ ಕಳೆಯುತ್ತಿರುವ ಹತ್ತಾರು ಫೋಟೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹಾಗೆಯೇ ನಟಿ ಶಿಲ್ಪಾ ಶೆಟ್ಟಿ ತಮ್ಮ 8 ವರ್ಷದ ಮಗ ವಿಹಾನ್‌ ಕುಂದ್ರಾ ಹಾಗೂ ನಾಲ್ಕು ತಿಂಗಳ ಪುಟ್ಟ ಮಗು ಸಮೀಶಾ ಶೆಟ್ಟಿ ಜೊತೆಗಿನ ಫೋಟೊಗಳು, ಟಿಕ್‌ಟಾಕ್‌ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೊಗಳು ವೈರಲ್‌ ಕೂಡ ಆಗಿವೆ. 

 
 
 
 

 
 
 
 
 
 
 
 
 

Calling all the real life Mamas and Papas ! I’ve teamed up with @mamasandpapas to give away a £250 voucher to spend on whatever you and your baby would like! All you have to do to enter is;
- Follow @mamasandpapas and @iamamyjackson on Instagram
- Like this post
- Tag a friend/ friends in the comments (multiple comments means multiple entries) So whether you’re an expecting mum, a seasoned mamma or maybe you know someone who’d love to get some extra cash to spend on their little ones... tag tag tag!! GO, GO, GO 🙌🏼 T&C's apply. You MUST be following both accounts to enter. Competition ‪ends on Sunday 11:59pm‬.

Amy Jackson (@iamamyjackson) ರಿಂದ ಹಂಚಲಾದ ಪೋಸ್ಟ್ ಅವರು ರಂದು

ನಟಿ ಕಲ್ಕಿ ಕೊಹ್ಲಿನ್‌ ಕೂಡ ಲಾಕ್‌ಡೌನ್‌ ಅವಧಿಯಲ್ಲಿ ಮಗಳು ಸಪ್ಪೊ ಜೊತೆಗೆ ಆಡುತ್ತಾ, ಆಕೆಗೆ ಲಾಲಿ ಹಾಡು ಹೇಳುತ್ತಾ ಕಾಲ ಕಳೆಯುತ್ತಿರುವ ವಿಡಿಯೊಗಳನ್ನು ಅಪ್‌ಲೋಡ್ ಮಾಡಿದ್ದಾರೆ. ನಾಲ್ಕು ತಿಂಗಳ ಮಗಳ ಮುಂದೆ ಕಲ್ಕಿ ವಯೋಲಿನ್‌ ನುಡಿಸುತ್ತಿರುವ ವಿಡಿಯೊವನ್ನು ಅವರು ಹಂಚಿಕೊಂಡಿದ್ದು, 57 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. 

ಕಳೆದ ಮಾರ್ಚ್‌ನಲ್ಲಿ ಕ್ರಿಕೆಟಿಗ ಸುರೇಶ್‌ ರೈನಾ ದಂಪತಿಗೆ ಮಗ ಹುಟ್ಟಿದ್ದಾನೆ. ಮಗಳ ನಾಲ್ಕು ವರ್ಷದ ಹುಟ್ಟುಹಬ್ಬದ ಸಂದರ್ಭ ದಲ್ಲಿ ಕುಟುಂಬದ ಜೊತೆಗಿನ ಫೋಟೊ ಹಂಚಿಕೊಂಡಿರುವ ಅವರು, ‘ಪತ್ನಿ ಪ್ರಿಯಾಂಕಾ ಹಾಗೂ ನಾನು ಮಗಳು ಗ್ರೇಸಿಯಾ ಹಾಗೂ ಮಗ ರಿಯೊ ಜೊತೆ ಉತ್ತಮ ಸಮಯ ಕಳೆಯುತ್ತಿದ್ದೇವೆ. ಕೆಲಸದ ಅವಸರದಲ್ಲಿ ಇಷ್ಟೊಂದು ಬಿಡುವು ಎಂದಿಗೂ ಸಿಗುತ್ತಿರಲಿಲ್ಲ. ಮಕ್ಕಳ ಜೊತೆ ನಾವಿಬ್ಬರು ನಮ್ಮನ್ನು ಹೆಚ್ಚು ಅರ್ಥಮಾಡಿಕೊಳ್ಳುತ್ತಿದ್ದೇವೆ’ ಎಂದು ಸೋಶಿಯಲ್‌ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ನಟಿ ನೇಹಾ ಧೂಪಿಯಾ, ಅರ್ಜುನ್‌ ರಾಮ್‌ಪಾಲ್‌ ಮೊದಲಾದವರು ಕೂಡ ತಮ್ಮ ಪುಟ್ಟ ಮಕ್ಕಳ ಜೊತೆಗೆ ಕಳೆಯುತ್ತಿರುವ ಖುಷಿಯ ಅವಧಿಯ ಫೋಟೊ, ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ. 

ಇದೇ ರೀತಿ ಚಂದನವನದ ಯಶ್- ರಾಧಿಕಾ, ನಟ ನಿರ್ದೇಶಕ ರಿಷಭ್‌ ಶೆಟ್ಟಿ, ಲೂಸ್ ಮಾದ ಯೋಗಿ ಸೇರಿದಂತೆ ಹಲವಾರು ನಟ ಮತ್ತು ನಟಿಯರು ತಮ್ಮ ಪುಟ್ಟ ಮಕ್ಕಳೊಂದಿಗೆ ಲಾಕ್‌ಡೌನ್‌ ಸಮಯವನ್ನು ಕಳೆಯುತ್ತಿರುವ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು