ಬುಧವಾರ, ಜೂನ್ 16, 2021
22 °C

ಡಾ.ರಾಜ್‌ ಯೋಗ ಗುರು 'ಹಠಯೋಗಿ ' ಹೊನ್ನಪ್ಪ ನಾಯ್ಕರ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಯೋಗಾಭ್ಯಾಸವನ್ನು ನಿತ್ಯಜೀವನದ ಒಂದು ಭಾಗವಾಗಿಸಿಕೊಂಡಿದ್ದ ವರನಟ ಡಾ.ರಾಜ್‌ಕುಮಾರ್‌ ಅವರ ಯೋಗಗುರು ಹಠಯೋಗಿ ಹೊನ್ನಪ್ಪ ನಾಯ್ಕರ್‌ ಅವರು ಕೋವಿಡ್‌ನಿಂದ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. 

ಅವರಿಗೆ 90 ವರ್ಷ ವಯಸ್ಸಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದ ಇವರು, ರಾಜ್‌ಕುಮಾರ್‌ ಹಾಗೂ ಅವರ ಕುಟುಂಬದ ಸದಸ್ಯರಿಗೆ ಯೋಗ ಗುರುವಾಗಿದ್ದರು. ರಾಘವೇಂದ್ರ ರಾಜ್‌ಕುಮಾರ್‌ ಅವರಿಗೆ ಪಾರ್ಶ್ವವಾಯುವಾದ ಸಂದರ್ಭದಲ್ಲಿ ಅವರ ಆರೋಗ್ಯವನ್ನು ಯೋಗಾಭ್ಯಾಸದ ಮುಖಾಂತರವೇ ಸುಧಾರಿಸಿದ್ದರು. ಇದನ್ನು ರಾಘವೇಂದ್ರ ರಾಜ್‌ಕುಮಾರ್‌ ಅವರೂ ಸ್ಮರಿಸಿದ್ದು, ‘ಅಪ್ಪಾಜಿಯ ಯೋಗ ಗುರುಗಳು ಅಗಲಿದ್ದು ಈ ಕ್ಷಣ ಮನಸ್ಸಿಗೆ ತುಂಬಲಾರದಷ್ಟು ದುಃಖವಾಗಿದೆ. ಗುರು ಬ್ರಹ್ಮಃ ಗುರು ವಿಷ್ಣು ಗುರು ದೇವೋ ನಮಃ’ ಎಂದು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಲವು ನಟ–ನಟಿಯರು ಸೇರಿದಂತೆ ಗಣ್ಯವ್ಯಕ್ತಿಗಳಿಗೆ ಹೊನ್ನಪ್ಪ ನಾಯ್ಕರ್‌ ಯೋಗಗುರುಗಳಾಗಿದ್ದರು. ಇವರಿಗೆ ಮೂರು ಗಂಡು ಮಕ್ಕಳಿದ್ದಾರೆ. ಇವರು ಬೆಂಗಳೂರಿನ ಜೆ.ಪಿ ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿದ್ದು, ಇವರ ಅಂತ್ಯಕ್ರಿಯೆಯನ್ನು ಕನಕಪುರದ ನಾಗದೇವನಹಳ್ಳಿ ಬಳಿ ನೆರವೇರಿಸಲು ಅವರ ಕುಟುಂಬಸ್ಥರು ತೀರ್ಮಾನಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು