ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತಕ್ಕೆ ತುತ್ತಾದ ಬಾಲಿವುಡ್ ಸೌಂಡ್ ಎಡಿಟರ್ ನಿಮಿಷ್: ಟ್ವಿಟರ್‌ನಲ್ಲಿ ಚರ್ಚೆ

Last Updated 25 ನವೆಂಬರ್ 2019, 11:27 IST
ಅಕ್ಷರ ಗಾತ್ರ

ಬಾಲಿವುಡ್‌ನ ಹೆಸರಾಂತ ಸೌಂಡ್‌ ಎಡಿಟರ್‌ ನಿಮಿಷ್‌ ಪಿಲಂಕರ್ (29) ಮುಂಬೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಸಲ್ಮಾನ್‌ ಖಾನ್‌ ಅಭಿನಯದ ರೇಸ್‌ 3, ಹೌಸ್‌ಫುಲ್‌ 4, ಬೈಪಾಸ್‌ ರೋಡ್‌, ಮರ್ಜಾವ ಮತ್ತಿತರ ಸಿನಿಮಾಗಳಿಗೆ ಸೌಂಡ್‌ ಎಡಿಟರ್‌ ಆಗಿ ಇವರು ಕೆಲಸ ಮಾಡಿದ್ದಾರೆ. ನಟ ಅಕ್ಷಯ್‌ ಕುಮಾರ್ ಸೇರಿ ಬಾಲಿವುಡ್‌ನ ಕಲಾವಿದರು ಇವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತಕ್ಕೆ ಒಳಗಾಗಿರುವ ನಿಮಿಷ್‌ ಅವರ ಸಾವು ಟ್ಟಿಟ್ಟರ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹಗಲಿರಲು ಒಂದೇ ಸಮಯ ದುಡಿಯುವುದರಿಂದ ಈ ರೀತಿ ಅಕಾಲಿಕ ಮರಣಕ್ಕೆ ತುತ್ತಾಗಬೇಕಾಗುತ್ತದೆ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಧ್ವನಿ ತಂತ್ರಜ್ಞರು ಭಾರಿ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಾರೆ ಮತ್ತು ಅತ್ಯಂತ ದೀರ್ಘ ಕಾಲ ಕೆಲಸ ಮಾಡುವುದರಿಂದ ಅವರ ಆರೋಗ್ಯಕ್ಕೆ ಹಾನಿ ಎಂದೂ ಹೇಳಿದ್ದಾರೆ.

ನಟ ವಿಪಿನ್‌ ಶರ್ಮಾ , ‘ಅನೇಕ ಸಿನಿಮಾ ತಂತ್ರಜ್ಞರು ಅವಧಿ ಮೀರಿಯೂ ಕೆಲಸ ಮಾಡುತ್ತಾರೆ ಮತ್ತು ಅದಕ್ಕೆ ತಕ್ಕ ವೇತನವೂ ಸಿಗುವುದಿಲ್ಲ. ಇದು ಭಯಾನಕ. ಕೆಲಸ ಕಳೆದುಕೊಳ್ಳುವ ಭಯದಲ್ಲಿ ಅವರು ಎಲ್ಲಾ ಕಷ್ಟಗಳನ್ನು ನುಂಗಿಕೊಂಡು ಕೆಲಸ ಮಾಡುತ್ತಾರೆ. ನಿಮಿಷ್‌ ಆತ್ಮಕ್ಕೆ ಶಾಂತಿ ಸಿಗಲಿ‘ ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT