ಸೋನು ಸಿಕ್ರೇಟ್‌ ಕ್ಯಾರೆಕ್ಟರ್‌!

ಮಂಗಳವಾರ, ಏಪ್ರಿಲ್ 23, 2019
31 °C

ಸೋನು ಸಿಕ್ರೇಟ್‌ ಕ್ಯಾರೆಕ್ಟರ್‌!

Published:
Updated:
Prajavani

ತಮ್ಮ ನಿರ್ದೇಶನದ ಸಿನಿಮಾಗಳಷ್ಟೇ, ಅವುಗಳ ಪ್ರಚಾರಕ್ಕಾಗಿ ಮಾಡುವ ಗಿಮಿಕ್‌ಗಳಿಂದಲೂ ಹೆಸರಾಗಿರುವ ಆರ್‌. ಚಂದ್ರು, ಉಪೇಂದ್ರ ಅವರನ್ನು ಇಟ್ಟುಕೊಂಡು ‘ಐ ಲವ್‌ ಯು’ ಸಿನಿಮಾ ಮಾಡುತ್ತಿರುವುದು ಹಳೆಯ ಸುದ್ದಿ. ಈ ಚಿತ್ರದಲ್ಲಿ ಉಪೇಂದ್ರ ಅವರಿಗೆ ರಚಿತಾ ರಾಮ್‌ ನಾಯಕಿಯಾಗಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ರಚಿತಾ ರಾಮ್‌ ಹೊರತಾಗಿ ಕನ್ನಡದ ಇನ್ನೊಬ್ಬ ನಟಿಯೂ ಮುಖ್ಯಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸೋನು ಗೌಡ. ಸೋನು ಈ ಚಿತ್ರದಲ್ಲಿ ನಾಯಕಿಯಾ? ಯಾವ ಬಗೆಯ ಪಾತ್ರ? ಅತಿಥಿ ಪಾತ್ರವಾ ಎಂಬೆಲ್ಲ ಪ್ರಶ್ನೆಗಳಿಗೆ ಚಿತ್ರತಂಡವಂತೂ ಉತ್ತರ ನೀಡುತ್ತಿಲ್ಲ. ಅಷ್ಟೇ ಅಲ್ಲ, ಚಿತ್ರದ ಯಾವ ಪೋಸ್ಟರಿನಲ್ಲಿಯೂ ಸೋನು ಚಿತ್ರದ ಪತ್ತೆಯಿಲ್ಲ.

ಹಾಗಂತ ಸೋನುಗೌಡ ಈ ಚಿತ್ರದಲ್ಲಿ ನಟಿಸಿರುವುದನ್ನು ಚಿತ್ರತಂಡ ಗೌಪ್ಯವಾಗಿಟ್ಟಿಲ್ಲ. ಎಲ್ಲ ಪತ್ರಿಕಾಗೋಷ್ಠಿಗಳಲ್ಲಿ, ಚಿತ್ರದ ಕುರಿತ ಕಾರ್ಯಕ್ರಮಗಳಲ್ಲಿ ಸೋನು ಹಾಜರಾಗುತ್ತಿದ್ದಾರೆ. ಆದರೆ ತಮ್ಮ ಪಾತ್ರದ ಕುರಿತು ಮಾತ್ರ ಅವರು ತುಟಿಕ್‌ ಪಿಟಿಕ್‌ ಅನ್ನುತ್ತಿಲ್ಲ.
‘ಪೋಸ್ಟರಲ್ಲಿ ಕಾಣಿಸಿಕೊಂಡಿಲ್ಲ ಎಂದು ನನಗೇನೂ ಬೇಸರ ಇಲ್ಲ. ಈ ಚಿತ್ರದಲ್ಲಿನ ನನ್ನ ಪಾತ್ರದ ತೀವ್ರತೆಯೇ ಹಾಗಿದೆ. ಅದು ಗೌಪ್ಯವಾಗಿದ್ದಷ್ಟೂ ಒಳ್ಳೆಯದು. ಖಂಡಿತ ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದೇನೆ. ಆದರೆ ಅದು ಯಾವ ಬಗೆಯ ಪಾತ್ರ ಎನ್ನುವುದನ್ನು ನೀವು ತೆರೆಯ ಮೇಲೆಯೇ ನೋಡಬೇಕು. ಸಿನಿಮಾ ನೋಡಿದ ಮೇಲೆ ನನ್ನ ಪಾತ್ರ ನಿಮ್ಮ ಮನಸಲ್ಲಿ ಅಚ್ಚೊತ್ತುವುದಂತೂ ಖಚಿತ’ ಎಂದು ಅವರು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !