ಭಾನುವಾರ, ಏಪ್ರಿಲ್ 18, 2021
25 °C

ಸಾವಿರ ಕೋಟಿ ಸಿಕ್ಕರೆ ವ್ಯಾಕ್ಸಿನ್ ಕೊಡಿಸುವೆ: ಕಾಜಲ್ ಅಗರ್‌ವಾಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಿಮಗೇನಾದ್ರೂ ಸಾವಿರ ಕೋಟಿ ಸಿಕ್ಕರೆ ಏನು ಮಾಡುತ್ತೀರಿ ಎಂದು ಯಾರನ್ನೇ ಕೇಳಿದ್ರೂ ಆಸ್ತಿ ಸಂಪಾದನೆ ಮಾಡುತ್ತೇನೆ, ಮನೆ ಕಟ್ಟಿಸುತ್ತೇನೆ, ಕಾರು ತೆಗೆದುಕೊಳ್ಳುತ್ತೇನೆ ಹೀಗೆ ಬೇರೆ ಬೇರೆ ಕನಸನ್ನು ಹಂಚಿಕೊಳ್ಳುತ್ತಾರೆ.  ದುಡ್ಡು ಕೈಯಲ್ಲಿದ್ದಾಗ ಈ ರೀತಿ ಆಸೆಗಳು ಬರುವುದು ಸಹಜವೇ. ಆದರೆ ದಕ್ಷಿಣದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಇದಕ್ಕೆ ಭಿನ್ನವಾಗಿದ್ದಾರೆ.

ನಿಮಗೆ ಸಾವಿರ ಕೋಟಿ ಸಿಕ್ಕರೆ ಏನು ಮಾಡುತ್ತೀರಿ ಎಂಬ ಪ್ರಶ್ನೆಗೆ ಆಕೆ ಉತ್ತರಿಸಿದ್ದು ಹೀಗೆ ‘ನಾನು ಸಾವಿರ ಕೋಟಿಯಿಂದ ವ್ಯಾಕ್ಸಿನ್(ಕೋವಿಶೀಲ್ಡ್‌ ಲಸಿಕೆ) ಖರೀದಿಸಿ ಎಲ್ಲರಿಗೂ ಕೊಡಿಸುತ್ತೇನೆ. ಇದರಿಂದ ಜಗತ್ತು ಸಹಜ ಸ್ಥಿತಿಗೆ ಬರುತ್ತದೆ. ಎಲ್ಲರೂ ಅವರವರ ಕೆಲಸವನ್ನು ನೆಮ್ಮದಿಯಿಂದ ಮಾಡಬಹುದು’ ಎಂದು ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ಇವರ ಈ ಉತ್ತರ ಅಭಿಮಾನಿಗಳಿಗೆ ಹರ್ಷ ಮೂಡಿಸುವಂತೆ ಮಾಡಿದೆ. ಈ ಪ್ರಶ್ನೆಗೆ ತಡವರಿಸದೇ ದಿಟ್ಟ ಉತ್ತರ ನೀಡಿ ಪ್ರಶಂಸೆಗೂ ಪಾತ್ರರಾಗಿದ್ದಾರೆ.

ಕಾಜಲ್ ನಟಿಸಿರುವ ‘ಮೋಸಗಾಲ್ಲು’ ಸಿನಿಮಾ ಇಂದು ಬಿಡುಗಡೆಯಾಗಿದೆ. ಇದು ₹ 2600 ಕೋಟಿ ಐಟಿ ಸ್ಕ್ಯಾಮ್ ಆಧರಿತ ಸಿನಿಮಾವಾಗಿದೆ. ಮಂಚು ವಿಷ್ಣು ಸಿನಿಮಾಕ್ಕೆ ನಾಯಕನಾಗಿದ್ದು ಅವರೇ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಹಾಲಿವುಡ್ ನಿರ್ದೇಶಕ ಜೆಫ್ರಿ ಗೀ ಚಿನ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು