ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಣಜಿ: ಚಲನಚಿತ್ರೋತ್ಸವಕ್ಕೆ ಬುಧವಾರ ತೆರೆ

Last Updated 27 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಪಣಜಿ: ಇಲ್ಲಿ ನಡೆಯುತ್ತಿರುವ 49ನೆಯ ಭಾರತದ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಬುಧವಾರ (ನ.28) ತೆರೆ ಬೀಳಲಿದೆ.

ಸಂಜೆ 5 ಗಂಟೆಗೆ ಪಣಜಿ ಹೊರವಲಯದಲ್ಲಿರುವ ಗೋವಾ ವಿಶ್ವವಿದ್ಯಾಲಯದ ಶ್ಯಾಮಪ್ರಸಾದ್‌ ಮುಖರ್ಜಿ ಒಳಾಂಗಣ ಕ್ರೀಡಾಂಗಣದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಸಮಾರಂಭದಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಕರ್ನಲ್‌ ರಾಜ್ಯವರ್ಧನ್ ಸಿಂಗ್‌ ರಾಥೋಡ್‌, ಮುಖ್ಯಮಂತ್ರಿ ಮನೋಹರ ಪರ್ರೀಕರ್‌, ಅಂತರರಾಷ್ಟ್ರೀಯ ಸಿನಿಮಾಗಳ ಸ್ಪರ್ಧಾ ವಿಭಾಗದ ಜ್ಯೂರಿ ಜಾನ್‌ ಇರ್ವಿನ್‌, ಗೋವಾ ಸರ್ಕಾರದ ಹಿರಿಯ ಸಚಿವರು ಮತ್ತು ಕೇಂದ್ರ ವಾರ್ತಾ ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಭಾರತೀಯ ಚಿತ್ರರಂಗದ ಹಿರಿಯ ಚಿತ್ರ ಕಥಾ ಲೇಖಕ ಸಲೀಮ್‌ ಅಲಿ, ಅವರಿಗೆ ಜೀವಮಾನ ಸಾಧನೆಗಾಗಿ ವಿಶೇಷ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವಿದೆ.

ಒಂದು ಗಂಟೆಗೂ ಹೆಚ್ಚು ಕಾಲದ ಸಾಂಸ್ಕೃತಿಕ ಕಾರ್ಯಕ್ರಮದ ನಂತರ ಚಿತ್ರೋತ್ಸವದ ಅತ್ಯುತ್ತಮ ಚಿತ್ರಗಳ ಕಲಾವಿದರು, ನಿರ್ದೇಶಕರಿಗೆ ನಗದು ಪುರಸ್ಕಾರಗಳನ್ನು ನೀಡಿ ಗೌರವಿಸುವ ಕಾರ್ಯಕ್ರಮವಿದೆ. ನಂತರದ ಚಿತ್ರದ ಕೊನೆಯ ಚಿತ್ರ ಜರ್ಮನ್‌ ಭಾಷೆಯ ಬರ್ನಾಡ್‌ ಬೊಹ್ಲಿಚ್‌ ನಿರ್ದೇಶನದ ಸೀಲ್ಡ್ ಲಿಪ್ಸ್ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT