ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಿವುಡ್‌ ಬೆಡಗಿ ಆಲಿಯಾ ಭಟ್‌ ಮುಡಿಗೆ ‘ಐಫಾ‘ ಪ್ರಶಸ್ತಿ

Last Updated 19 ಸೆಪ್ಟೆಂಬರ್ 2019, 5:24 IST
ಅಕ್ಷರ ಗಾತ್ರ

ನವದೆಹಲಿ: 20ನೇ ಸಾಲಿನಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ (ಐಐಎಫ್‌ಎ; ‘ಐಫಾ’) ಪ್ರಶಸ್ತಿಗಳನ್ನು ನೀಡಲಾಗಿದ್ದು ಆಲಿಯಾ ಭಟ್‌ ಅತ್ಯುತ್ತಮ ನಟಿ ಪ್ರಶಸ್ತಿಪಡೆದುಕೊಂಡಿದ್ದಾರೆ.

ನಟ ವಿಕ್ಕಿ ಕೌಶಲ್‌ಹಾಗು ಆಲಿಯಾ ಭಟ್‌ ಅಭಿನಯದ ರಾಝಿ ಸಿನಿಮಾ ಉತ್ತಮ ಚಿತ್ರ ಪಶಸ್ತಿಪಡೆದುಕೊಂಡಿದೆ.

ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿಬಾಲಿವುಡ್‌ ನಟ ಜಗದೀಪ್‌ ಜೆಫ್ರಿ ಅವರಿಗೆ ಜೀವಮಾನ ಶ್ರೇಷ್ಠ ಪಶಸ್ತಿ ನೀಡಿ ಗೌರವಿಸಲಾಗಿದೆ.

ಮುಂಬೈನಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಬಾಲಿವುಡ್‌ ಚಿತ್ರರಂಗದ ಸಾಧಕರಿಗೆ ಐಫಾ ಪ್ರಶಸ್ತಿಗಳನ್ನು ನೀಡ ಗೌರವಿಸಲಾಯಿತು. ಆಲಿಯಾ ಭಟ್‌, ರಣವೀರ್ ಸಿಂಗ್‌, ಅದಿತಿ ರಾವ್‌ ಹೈದರಿ, ಸಾರಾ ಆಲಿ ಖಾನ್‌ ಐಫಾ ಪ್ರಶಸ್ತಿಗಳನ್ನು ಪಡೆದ ಪ್ರಮುಖರು. ಈ ಸಮಾರಂಭದಲ್ಲಿ ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಮಾಧುರಿ ದೀಕ್ಷಿತ್‌, ಪ್ರೀತಿ ಜಿಂಟಾ, ರಿತೇಶ್‌ ದೇಶ್‌ಮುಖ್‌ ಸೇರಿದಂತೆ ಹಲವರು ಭಾಗವಹಿಸಿದ್ದರು.

ಐಫಾ ಪ್ರಶಸ್ತಿ ಪಡೆದವರ ವಿವರ

* ಅತ್ಯುತ್ತಮ ಚಿತ್ರ: ರಾಝಿ

* ಅತ್ಯುತ್ತಮ ಕಥೆ: ಅಂಧಾಧುನಾ

* ಅತ್ಯುತ್ತಮ ನಟಿ:ಆಲಿಯಾ ಭಟ್‌ (ರಾಝಿ)

*ಅತ್ಯುತ್ತಮ ನಟ: ರಣವೀರ್‌ ಸಿಂಗ್‌ (ಪದ್ಮಾವತಿ)

*ಅತ್ಯುತ್ತಮ ನಿರ್ದೇಶಕ: ಶ್ರೀರಾಮ್‌ ರಾಘವನ್‌ (ಅಂಧಾಧುನಾ)

*ಅತ್ಯುತ್ತಮ ಪೋಷಕ ನಟಿ: ಅದಿತಿ ರಾವ್‌ ( ಪದ್ಮಾವತಿ)

*ಅತ್ಯುತ್ತಮ ಪೋಷಕ ನಟ: ವಿಕ್ಕಿ ಕೌಶಲ್‌(ಸಂಜು)

* ಪಾದರ್ಪಣೆಯ ಉತ್ತಮ ನಟಿ: ಸಾರಾ ಆಲಿ ಖಾನ್‌

* ಪಾದರ್ಪಣೆಯ ಉತ್ತಮ ನಟ: ಇಶಾನ್ ಖಟ್ಟೆರ್‌

* ಅತ್ಯುತ್ತಮ ಗೀತ ರಚನೆ: ಅಮಿತಾಬ್‌ ಬಚನ್‌ (ದಡಕ್‌)

* ಜೀವಮಾನ ಶ್ರೇಷ್ಠ ಪ್ರಶಸ್ತಿ: ಜಗದೀಪ್‌ ಜಫ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT