ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

 ಇಲಿಯಾನಾ ಡಿಕ್ರೂಸ್ ಮತ್ತು ಆ್ಯಂಡ್ರೂ ನೀಬೋನ್ ನಡುವಿನ ಸಂಬಂಧ ಬ್ರೇಕಪ್‌ ಆಯ್ತಾ?

Last Updated 30 ಆಗಸ್ಟ್ 2019, 6:10 IST
ಅಕ್ಷರ ಗಾತ್ರ

ಬೆಂಗಳೂರು:ಬಹುಭಾಷ ನಟಿ ಇಲಿಯಾನಾ ಡಿಕ್ರೂಸ್ ತಮ್ಮ ಬಹುಕಾಲದ ಗೆಳೆಯ ಹಾಗೂ ಆಸ್ಟ್ರೇಲಿಯಾದ ಫೋಟೊಗ್ರಾಫರ್ ಆ್ಯಂಡ್ರೂ ನೀಬೋನ್ ಜೊತೆಗಿನ ಸಂಬಂಧವನ್ನು ಕಡಿದುಕೊಂಡಿದ್ದಾರೆ ಎಂಬ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿವೆ.

ಇದಕ್ಕೆ ಪುಷ್ಠಿ ಕೊಡುವಂತೆ ಜನಪ್ರಿಯ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಇಬ್ಬರು ಅನ್‌ ಫಾಲೋ ಆಗಿರುವುದೇ ಕಾರಣವಾಗಿದೆ. ಆದರೆ ಬ್ರೇಕಪ್‌ ಆಗಿರುವ ಬಗ್ಗೆ ಅವರು ಎಲ್ಲಿಯೂ ಬರೆದು ಕೊಂಡಿಲ್ಲ ಅಥವಾ ಹೇಳಿ ಕೊಂಡಿಲ್ಲ!

ತಮ್ಮ ಇನ್‌ಸ್ಟಾ ಖಾತೆಯಲ್ಲಿದ್ದಆ್ಯಂಡ್ರೂ ನೀಬೋನ್ ಅವರ ಎಲ್ಲಾ ಚಿತ್ರಗಳನ್ನು ಇಲಿಯಾನ ತೆಗೆದುಹಾಕಿದ್ದಾರೆ. ವಿಶೇಷವೆಂದರೆ 2018ರಲ್ಲಿಆ್ಯಂಡ್ರೂ ನೀಬೋನ್ ಜತೆಗೆ ಚುಂಬಿಸುತ್ತಿರುವ ಚಿತ್ರವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿದ್ದರು.ಈ ಚಿತ್ರದ ಜತೆಗೆ ‘ಹಬ್ಬಿ’ ಎನ್ನುವ ಪದವನ್ನು ಹ್ಯಾಷ್‌ಟ್ಯಾಗ್ ಮಾದರಿಯಲ್ಲಿ ಬರೆದಿದ್ದರು. ಈ ಚಿತ್ರವನ್ನು ಕೂಡ ಇಲಿಯಾನ ಡಿಲೀಟ್ ಮಾಡಿದ್ದಾರೆ.

ಇತ್ತಆ್ಯಂಡ್ರೂ ನೀಬೋನ್ ಸಹತಮ್ಮ ಇನ್‌ಸ್ಟಾ ಖಾತೆಯಲ್ಲಿದ್ದ ಇಲಿಯಾನ ಚಿತ್ರಗಳನ್ನು ಅಳಿಸಿ ಹಾಕಿದ್ದಾರೆ. ಈ ಬೆಳವಣಿಗೆಗಳನ್ನು ಗಮನಿಸಿದರೆ ಇಬ್ಬರು ದೂರವಾಗಿರುವುದು ಖಚಿತ ಎನ್ನಲಾಗುತ್ತಿದೆ.

ಇತ್ತೀಚೆಗೆ ಇಲಿಯಾನ ತಮ್ಮ ತಾಯಿಗೆ ಹುಟ್ಟಹಬ್ಬದ ಶುಭಾಶಯಗಳನ್ನು ಕೋರಿ ತಮ್ಮ ಬಾಲ್ಯದ ಫೋಟೊಗಳನ್ನು ಇನ್‌ಸ್ಟಾದಲ್ಲಿ ಅಪ್‌ಲೋಡ್‌ ಮಾಡಿದ್ದರು. ಈ ಚಿತ್ರಗಳು ವೈರಲ್‌ ಆಗಿದ್ದವು.ಆ್ಯಂಡ್ರೂ ನೀಬೋನ್, ಇಲಿಯಾನ ತಾಯಿಯ ಹುಟ್ಟು ಹಬ್ಬಕೆ ಶುಭಾಶಯ ಕೋರದಿರುವುದೂ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

18ನೇ ವರ್ಷದಲ್ಲೇ ಮಾಡೆಲಿಂಗ್ ಮತ್ತು ಸಿನಿ ಜಗತ್ತಿಗೆ ಪದಾರ್ಪಣೆ ಮಾಡಿದ ಇಲಿಯಾನಾ, ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿ ತಮ್ಮ ಮೈಕಟ್ಟಿನ ಕಾರಣಕ್ಕಾಗಿ ಮಾನಸಿಕ ವೇದನೆ ಅನುಭವಿಸಿ ಖಿನ್ನತೆಗೆ ಜಾರಿದ್ದರು. ‘ಬಾಡಿ ಡಿಸ್ಮಾರ್ಫಿಕ್‌ ಡಿಸಾರ್ಡರ್‌’ (ಬಿಡಿಡಿ) ಎಂಬ ಮಾನಸಿಕ ಸಮಸ್ಯೆಯಿಂದ ಬಳಲಿದ್ದ ಅವರು ಅದರಿಂದ ಹೊರಬಂದು ಆತ್ಮವಿಶ್ವಾಸ ಬೆಳೆಸಿಕೊಂಡಿದ್ದರು.

ಕಳೆದ ವರ್ಷ ತೆಲುಗಿನಲ್ಲಿ ರವಿತೇಜಾ ಜೊತೆಯಲ್ಲಿ ಅಮರ್ ಅಕ್ಬರ್‌ ಅಂತೋನಿ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಅಷ್ಟೊಂದು ಯಶಸ್ಸು ತಂದುಕೊಟ್ಟಿರಲಿಲ್ಲ.

ಇದೀಗಆ್ಯಂಡ್ರೂ ನೀಬೋನ್ ದೂರವಾಗಿರುವ ಹಿನ್ನೆಲೆಯಲ್ಲಿ ಬಾಲಿವುಡ್‌ನಲ್ಲಿ ಅವಕಾಶಕ್ಕಾಗಿ ಇಲಿಯಾನ ಮುಖಮಾಡಿದ್ದಾರೆ ಎನ್ನಲಾಗಿದೆ. 32ರ ಹರೆಯದ ಇಲಿಯಾನ ನಟನೆಯ ಕಡೆ ಹೆಚ್ಚು ಗಮನ ನೀಡಲು ಗಂಭೀರ ಚಿಂತನೆ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT