ಶನಿವಾರ, ಸೆಪ್ಟೆಂಬರ್ 18, 2021
23 °C

ಸ್ವಾತಂತ್ರ್ಯೋತ್ಸವಕ್ಕೆ ಟೈಗರ್ ಶ್ರಾಫ್ ವಿನೂತನ ಶೈಲಿಯ 'ಫ್ಲೈಯಿಂಗ್ ಸೆಲ್ಯೂಟ್'

ಪ್ರಜಾವಾಣಿ ವೆಬ್ ಡೆಸ್ಕ್‌ Updated:

ಅಕ್ಷರ ಗಾತ್ರ : | |

ಮುಂಬೈ: ದೇಶದೆಲ್ಲೆಡೆ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಇದರಂತೆ ಬಾಲಿವುಡ್ ದಿಗ್ಗಜ ಜಾಕಿ ಶ್ರಾಫ್ ಅವರ ಪುತ್ರ ಹಾಗೂ ನಟ ಟೈಗರ್ ಶ್ರಾಫ್ 'ಫ್ಲೈಯಿಂಗ್ ಸೆಲ್ಯೂಟ್' ಮೂಲಕ ವಿನೂತನ ಶೈಲಿಯಲ್ಲಿ ಶುಭಾಶಯ ಸಲ್ಲಿಸಿದ್ದಾರೆ.

ಫಿಟ್‌ನೆಸ್‌ಗೆ ಹೆಚ್ಚಿನ ಮಹತ್ವ ಕೊಡುತ್ತಿರುವ ಟೈಗರ್ ಶ್ರಾಫ್, ಫಿಟ್‌ನೆಸ್‌ ಕುರಿತಾದ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: 

ಈಗ ನೂತನ 'ವಂದೇ ಮಾತರಂ' ಹಾಡಿನೊಂದಿಗೆ ಫ್ಲೈಯಿಂಗ್ ಸೆಲ್ಯೂಟ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.

ಅನೇಕ ಸ್ಟಂಟ್‌ಗಳನ್ನು ಕರಗತ ಮಾಡಿಕೊಂಡಿರುವ ಟೈಗರ್ ಶ್ರಾಫ್, ಜಿಮ್‌ ಕೇಂದ್ರದಲ್ಲಿ ಒಂದು ತುದಿಯಿಂದ ಓಡೋಡಿ ಬಂದು ಮೇಲಕ್ಕೆ ಜಿಗಿದು ಗಾಳಿಯಲ್ಲಿ ಪಲ್ಟಿ ಹೊಡೆಯುತ್ತಾ ಸೆಲ್ಯೂಟ್ ನೀಡುತ್ತಾರೆ. ಬಳಿಕ ಸೇಫ್ ಲ್ಯಾಂಡಿಂಗ್ ಪೂರ್ಣಗೊಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು